ಮೋದಿ ಕಾಲದಲ್ಲಿ ಭಾರತ ರೂಪಾಂತರ, ರಾಜಕೀಯ ಸ್ಥಿರತೆ: ಬ್ರಿಟನ್‌ ಪತ್ರಿಕೆ ಪ್ರಶಂಸೆ

Published : Sep 05, 2023, 09:06 AM ISTUpdated : Sep 05, 2023, 09:23 AM IST
ಮೋದಿ ಕಾಲದಲ್ಲಿ ಭಾರತ ರೂಪಾಂತರ, ರಾಜಕೀಯ ಸ್ಥಿರತೆ: ಬ್ರಿಟನ್‌ ಪತ್ರಿಕೆ ಪ್ರಶಂಸೆ

ಸಾರಾಂಶ

ಭಾರತವು ಸಾಮರ್ಥ್ಯ ಹೊಂದಿದೆ. ಅದೇ ವೇಳೆ ಕೆಲವು ಸಮಸ್ಯೆಗಳನ್ನೂ ಹೊಂದಿದೆ. ಆದರೆ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ಖಂಡಿತವಾಗಿಯೂ ದಿಟ್ಟ ಗುರಿಗಳನ್ನು ಹೊಂದಿದೆ, ಅದನ್ನು ಸಾಧಿಸುವ ಛಲವನ್ನು ಕೂಡ ಹೊಂದಿದೆ ಎಂದು ಪ್ರಶಂಸಿಸಿದೆ.

ನವದೆಹಲಿ (ಸೆಪ್ಟೆಂಬರ್ 5, 2023): ಭಾರತದ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಬ್ರಿಟನ್‌ನ ‘ಟೆಲಿಗ್ರಾಫ್‌’ ಪತ್ರಿಕೆಯಲ್ಲಿ ವ್ಯಾಪಕವಾಗಿ ಪ್ರಶಂಸಿಸಲಾಗಿದ್ದು, ‘ಭಿನ್ನಾಭಿಪ್ರಾಯ ರಾಜಕೀಯದಿಂದ ಮುಳುಗಿದ್ದ ಭಾರತವು ಪ್ರಧಾನಿ ನರೇಂದ್ರ ಮೋದಿ ಅವರ ಅಡಿಯಲ್ಲಿ ಉತ್ತಮ ರಾಜಕೀಯ ಸ್ಥಿರತೆಗೆ ಒಳಗಾಗಿದೆ. ಇದು ಕಾನೂನು ಸುಧಾರಣೆಗಳು, ಮೂಲಭೂತ ಕಲ್ಯಾಣ ವ್ಯವಸ್ಥೆಗಳ ಸುಧಾರಣೆಗಳು ಮತ್ತು ದೇಶದ ಮೂಲಸೌಕರ್ಯಗಳ ವ್ಯಾಪಕವಾದ ನವೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ’ ಎಂದು ಬಣ್ಣಿಸಿದೆ.

ಸೆಪ್ಟೆಂಬರ್‌ 2ರಂದು ಪ್ರಕಟವಾಗಿರುವ ಲೇಖನವನ್ನು ಲೇಖಕ ಬೆನ್‌ ರೈಟ್‌ ಅವರು ಬರೆದಿದ್ದು, ‘ಭಾರತವು ಸಾಮರ್ಥ್ಯ ಹೊಂದಿದೆ. ಅದೇ ವೇಳೆ ಕೆಲವು ಸಮಸ್ಯೆಗಳನ್ನೂ ಹೊಂದಿದೆ. ಆದರೆ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ಖಂಡಿತವಾಗಿಯೂ ದಿಟ್ಟ ಗುರಿಗಳನ್ನು ಹೊಂದಿದೆ, ಅದನ್ನು ಸಾಧಿಸುವ ಛಲವನ್ನು ಕೂಡ ಹೊಂದಿದೆ’ ಎಂದು ಪ್ರಶಂಸಿಸಿದೆ.

ಇದನ್ನು ಓದಿ: ಉಚಿತ ಕೊಡುಗೆಗಳಿಂದ ದೇಶಕ್ಕೆ ಹಾನಿ; ರಾಜ್ಯ ಸರ್ಕಾರಗಳು ಆರ್ಥಿಕ ಶಿಸ್ತಿನ ಬಗ್ಗೆ ಪ್ರಜ್ಞೆ ಹೊಂದಿರಬೇಕು: ಮೋದಿ ಕಿಡಿ

ಮೋದಿ ಸಾಧನೆಗಳು ಇವು:
ತಮ್ಮ ಅಭಿಪ್ರಾಯಗಳನ್ನು ಸಮರ್ಥಿಸಿಕೊಳ್ಳಲು ನರೇಂದ್ರ ಮೋದಿ ಆಡಳಿತದ ಅವಧಿಯಲ್ಲಿ ಭಾರತ ಮಾಡಿರುವ ಹಲವು ಸಾಧನೆಗಳನ್ನು ಲೇಖಕರು ವಿವರಿಸಿದ್ದಾರೆ.
‘ಚಂದ್ರಯಾನ-3ರ ಯಶಸ್ಸಿನೊಂದಿಗೆ ಭಾರತವು ಅಮೆರಿಕ, ಸೋವಿಯತ್‌ ಒಕ್ಕೂಟ ಮತ್ತು ಚೀನಾ ಬಳಿಕ ಚಂದ್ರನ ಮೇಲೆ ಕಾಲಿಟ್ಟ 4ನೇ ದೇಶ ಎನ್ನಿಸಿಕೊಂಡಿದೆ. ಆದರೆ ಇದೇ ವೇಳೆ ರಷ್ಯಾ ಮಾಡಿದ ಮತ್ತೊಂದು ಚಂದ್ರಯಾನ ಯತ್ನ ಅವಮಾನಕರ ರೀತಿಯಲ್ಲಿ ಕೊನೆಗೊಂಡಿದೆ. ಇದು ಭಾರತದ ಸಾಧನೆಯನ್ನು ಮತ್ತಷ್ಟು ಹೆಚ್ಚಿಸಿತು. ಭಾರತದಾದ್ಯಂತ ಸಂಭ್ರಮ ಮನೆಮಾಡಿತು’ ಎಂದು ಲೇಖನ ಪ್ರಶಂಸಿಸಿದೆ.

‘ಭಾರತದ ಜನಸಂಖ್ಯೆಯು ಇತ್ತೀಚೆಗೆ ಚೀನಾದ ಜನಸಂಖ್ಯೆಯನ್ನು ಹಿಂದಿಕ್ಕಿದೆ. ಇದೇ ವೇಳೆ ಭಾರತವು 2023ರಲ್ಲಿ ವಿಶ್ವದಲ್ಲೇ ಅತಿವೇಗದ ಅರ್ಥಿಕ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆ ಎನ್ನಿಸಿಕೊಂಡಿದೆ. ಮುಂದಿನ 5 ವರ್ಷದಲ್ಲಿ ಆರ್ಥಿಕ ಪ್ರಗತಿ ಇನ್ನಷ್ಟು ಹೆಚ್ಚಲಿದೆ. ಪ್ರಸ್ತುತ ಅಂದಾಜಿನ ಪ್ರಕಾರ, ಇನ್ನು ನಾಲ್ಕು ವರ್ಷಗಳಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಪ್ರಪಂಚದಾದ್ಯಂತ ಮೋದಿ ಅವರಿಗೆ ಕೆಂಪು ಹಾಸಿನ ಸ್ವಾಗತ ದೊರೆಯುತ್ತಿದೆ’ ಎಂದು ಹಾಡಿ ಹೊಗಳಲಾಗಿದೆ.

ಇದನ್ನೂ ಓದಿ: G20 ಶೃಂಗಸಭೆಗೆ ಹೈಟೆಕ್‌ ಭದ್ರತೆ: ಗಣ್ಯರಿಗೆ ಬುಲೆಟ್‌ಪ್ರೂಫ್ ಲಿಮೋಸಿನ್‌ ಕಾರು, ಫೇಸ್‌ ರೆಕಗ್ನಿಷನ್‌ ತಂತ್ರಜ್ಞಾನ ಅಳವಡಿಕೆ

‘ಏರ್‌ ಇಂಡಿಯಾ ಕಂಪನಿಯು ಬೋಯಿಂಗ್‌ನಿಂದ ವಿಶ್ವದಾಖಲೆಯ 470 ವಿಮಾನಗಳನ್ನು ಖರೀದಿಸುತ್ತಿದೆ. ಮೇ ತಿಂಗಳಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ಆ್ಯಪಲ್‌ ಕಂಪನಿ ಮೊದಲ ಚಿಲ್ಲರೆ ಮಳಿಗೆ ಆರಂಭಿಸಿದ್ದು, ಈ ವೇಳೆ ಆ್ಯಪಲ್‌ ಸಿಇಒ ಟಿಮ್‌ ಕುಕ್‌ ಅವರು ಭಾರತ ಅಭಿವೃದ್ಧಿಯ ಉತ್ತುಂಗಕ್ಕೇರಿದೆ ಎಂದಿದ್ದಾರೆ. ಇನ್ನು ಐಫೋನ್‌ಗಳನ್ನು ತಯಾರಿಸುವ ತೈವಾನ್‌ನ ಎಲೆಕ್ಟ್ರಾನಿಕ್ಸ್‌ ‘ದೈತ್ಯ’ ಫಾಕ್ಸ್‌ಕಾನ್‌ ಕಂಪನಿಯು ಕರ್ನಾಟಕದಲ್ಲಿ 100 ಕೋಟಿ ಡಾಲರ್‌ ವೆಚ್ಚದಲ್ಲಿ ಕಾರ್ಖಾನೆ ಆರಂಭಿಸುವ ಘೋಷಣೆ ಮಾಡಿದೆ. ಅಮೆರಿಕ ಮೂಲದ ಮೈಕ್ರಾನ್‌ ಟೆಕ್ನಾಲಜಿ ಈ ವರ್ಷದ ಕೊನೆಯಲ್ಲಿ ಗುಜರಾತ್‌ನಲ್ಲಿ ಹೊಸ ಸೆಮಿ ಕಂಡಕ್ಟರ್‌ ಘಟಕ ಸ್ಥಾಪನೆ ಮಾಡುವುದಾಗಿ ಹೇಳಿದೆ’ ಎಂದು ಭಾರತದ ಆರ್ಥಿಕ ಪ್ರಗತಿಯನ್ನು ಲೇಖಕರು ಪ್ರಶಂಶಿಸಿದ್ದಾರೆ.

ಇದೇ ವೇಳೆ, ದೇಶದ ಹೆಚ್ಚುತ್ತಿರುವ ಪ್ರಭಾವವನ್ನು ಇತರ ಕ್ಷೇತ್ರಗಳಲ್ಲಿಯೂ ಕಾಣಬಹುದು ಎಂದು ಲೇಖಕರು ಗಮನ ಸೆಳೆದಿದ್ದು, ಅಮೆರಿಕನ್‌ ಫುಟ್ಬಾಲ್‌ ಲೀಗ್‌ ಬಳಿಕ ಕ್ರಿಕೆಟ್‌ನ ಐಪಿಎಲ್‌ ಈಗ ವಿಶ್ವದ ಎರಡನೇ ಅತ್ಯಮೂಲ್ಯ ಕ್ರೀಡಾ ಲೀಗ್‌ ಆಗಿದೆ ಎಂದಿದ್ದಾರೆ.

ಇದನ್ನು ಓದಿ: Chandrayaan: ಮೂರು ಮುಖ್ಯ ಉದ್ದೇಶಗಳಲ್ಲಿ 2 ಪೂರ್ಣ; ಇನ್ನೊಂದು ಪ್ರಗತಿಯಲ್ಲಿದೆ: ಇಸ್ರೋ

ರಾಜಕೀಯ ಸ್ಥಿರತೆ:
600ಕ್ಕೂ ಹೆಚ್ಚು ಪಕ್ಷಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವು ಐತಿಹಾಸಿಕವಾಗಿ ಭಿನ್ನಾಭಿಪ್ರಾಯದ ರಾಜಕೀಯದಿಂದ ಬಾಧಿತವಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ಬಿಜೆಪಿ ಸತತವಾಗಿ 2 ಸಲ ಬಹುಮತವನ್ನು ಗಳಿಸಿದೆ ಮತ್ತು ಮುಂದಿನ ಮೇ ತಿಂಗಳಲ್ಲಿ ಹ್ಯಾಟ್ರಿಕ್‌ ಸಾಧಿಸುವ ಹಾದಿಯಲ್ಲಿದೆ. ಇದೇ ವೇಳೆ, ಕಾಂಗ್ರೆಸ್‌ ಪಕ್ಷ ಗಮನಾರ್ಹ ಕುಸಿಯುತ್ತಿದೆ. ಇದು ದೇಶಕ್ಕೆ ರಾಜಕೀಯ ಸ್ಥಿರತೆ ಒದಗಿಸಿದೆ. ಇದರಿಂದ ದೇಶ ವಿವಿಧ ವಲಯಗಳಲ್ಲಿ ಅಭಿವೃದ್ಧಿ ಕಾಣುತ್ತಿದೆ.

ಈ ಮಧ್ಯೆ, 2024ರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅವರ ಮೂರನೇ ಅವಧಿಯ ಅಂತ್ಯದ ವೇಳೆಗೆ ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಮೋದಿ ಇತ್ತೀಚೆಗೆ ಖಾತರಿ ನೀಡಿದ್ದಾರೆ. ಅದು ಸಾಕಷ್ಟು ವಾಸ್ತವಿಕ ಗುರಿಯಾಗಿದೆ. ಇನ್ನು 2047 ರ ವೇಳೆಗೆ ಭಾರತವು ತನ್ನ ಶತಮಾನೋತ್ಸವವನ್ನು ಆಚರಿಸುವ ವರ್ಷದಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗಬೇಕೆಂದು ಪ್ರಧಾನಿ ಬಯಸಿದ್ದಾರೆ. ಇದು ಅತ್ಯಂತ ದಿಟ್ಟ ಮಹತ್ವಾಕಾಂಕ್ಷೆ ಎಂದು ಲೇಖಕರು ಹೇಳಿದ್ದಾರೆ.

ಹ್ಯಾಟ್ರಿಕ್‌ ಹಾದಿಯಲ್ಲಿ ಮೋದಿ
600ಕ್ಕೂ ಹೆಚ್ಚು ಪಕ್ಷಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವು ಐತಿಹಾಸಿಕವಾಗಿ ಭಿನ್ನಾಭಿಪ್ರಾಯದ ರಾಜಕೀಯದಿಂದ ಬಾಧಿತವಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸತತವಾಗಿ 2 ಸಲ ಬಹುಮತ ಗಳಿಸಿ, ಮುಂದಿನ ಮೇ ತಿಂಗಳಲ್ಲಿ ಹ್ಯಾಟ್ರಿಕ್‌ ಸಾಧಿಸುವ ಹಾದಿಯಲ್ಲಿದೆ.
- ಬೆನ್‌ ರೈಟ್‌, ‘ಟೆಲಿಗ್ರಾಫ್‌’ ಅಸೋಸಿಯೇಟ್‌ ಎಡಿಟರ್‌

ಇದನ್ನೂ ಓದಿ: ಒನ್ ಇಂಡಿಯಾ ಒನ್ ಎಲೆಕ್ಷನ್‌ಗೆ ಮುಂದಾಯ್ತಾ ಕೇಂದ್ರ ಸರ್ಕಾರ? ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?