ಕೊರೋನಾ ಕಾಲ | ತಂದೆಯ ವೇತನ ಕಡಿತ | ಫೀಸ್ ಇಲ್ಲದೆ ದರೋಡೆ ಮಾಡಿದ ವಿದ್ಯಾರ್ಥಿ
ಡೆಹ್ರಾಡೂನ್(ಜ.02): ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವೇತನ ಕಡಿತದ ನಂತರ ತನ್ನ ತಂದೆಗೆ ಸ್ಕೂಲ್ ಫೀಸ್ ಕಟ್ಟೋಕಾಗಿಲ್ಲ. ಹಾಗಾಗಿ ಉತ್ತರಾಖಂಡದ ರುದ್ರಪುರದ ಹೆಸರಾಂತ ಶಾಲೆಯ ವಿದ್ಯಾರ್ಥಿಯೊಬ್ಬ ದರೋಡೆಗೆ ಮುಂದಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 23 ರಂದು ಯುಎಸ್ ನಗರ ಜಿಲ್ಲೆಯ ರುದ್ರಪುರ ಪ್ರದೇಶದಲ್ಲಿ ನಡೆದ 5.35 ಲಕ್ಷ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ ಈ ವಿಷಯ ತಿಳಿಸಿದ್ದಾರೆ.
ಧ್ವಂಸಗೊಂಡ ಹಿಂದೂ ದೇಗುಲ ಸರ್ಕಾರಿ ವೆಚ್ಚದಲ್ಲಿ ನಿರ್ಮಾಣ: ಪಾಕ್ ಭರವಸೆ
ನಗದು ನಿರ್ವಹಣಾ ಕಂಪನಿಯ ಉದ್ಯೋಗಿಯನ್ನು ದರೋಡೆ ಮಾಡಿದ್ದಕ್ಕಾಗಿ ನಾಲ್ವರನ್ನು ಬಂಧಿಸಲಾಗಿದ್ದು, ಐದನೇ ಶಂಕಿತ ಪರಾರಿಯಾಗಿದ್ದಾನೆ. ವಿಚಾರಣೆಯ ಸಮಯದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಶಾಲಾ ಶುಲ್ಕವನ್ನು ಠೇವಣಿ ಮಾಡಲು ಅಪರಾಧ ಮಾಡಿದ್ದಾನೆಂದು ಬಹಿರಂಗಪಡಿಸಿದ್ದಾನೆ ಎಂದು ರುದ್ರಪುರದ ವೃತ್ತ ಅಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ.
ವಿದ್ಯಾರ್ಥಿಯು ತನ್ನ ತಂದೆ ರುದ್ರಪುರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆಂದು ಬಹಿರಂಗಪಡಿಸಿದ್ದಾನೆ. ಕಾರ್ಖಾನೆಯ ನಷ್ಟದಿಂದಾಗಿ ಅವರ ತಂದೆಯ ಸಂಬಳವನ್ನು ಕಡಿಮೆ ಮಾಡಲಾಗಿತ್ತು. ಶಾಲೆ ಫೀಸ್ ಕಟ್ಟಲಾಗದೆ ವಿದ್ಯಾರ್ಥಿ ಅಪರಾಧದಲ್ಲಿ ತೊಡಗಿದ್ದಾನೆ ಎನ್ನಲಾಗಿದೆ.
ಚೀನಿ ಆ್ಯಪ್ ದಂಧೆಕೋರರಿಗೆ ಭಾರತ ಪಾನ್‌ಕಾರ್ಡ್!
ಬಲ್ವಂತ್ ಎನ್‌ಕ್ಲೇವ್ ಕಾಲೋನಿ ನಿವಾಸಿ ನಗದು ನಿರ್ವಹಣಾ ಕಂಪನಿಯ ಉದ್ಯೋಗಿಯಾಗಿದ್ದ ಸಚಿನ್ ಶರ್ಮಾ ಅವರನ್ನು ಗನ್ ಪಾಯಿಂಟ್‌ನಲ್ಲಿಟ್ಟು 5.35 ಲಕ್ಷ ಲೂಟಿ ಮಾಡಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ನಗದು ಮತ್ತು ಚೆಕ್ ಠೇವಣಿ ಇಡಲು ಶರ್ಮಾ ಬ್ಯಾಂಕ್‌ಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ