ಕೊರೋನಾ ಸಂಕಷ್ಟದಲ್ಲೂ 2020ರಲ್ಲಿ ಸಿಬಿಐನಿಂದ 800 ಕೇಸ್‌ ತನಿಖೆ ಪೂರ್ಣ!

Published : Jan 02, 2021, 09:02 AM ISTUpdated : Jan 02, 2021, 10:03 AM IST
ಕೊರೋನಾ ಸಂಕಷ್ಟದಲ್ಲೂ 2020ರಲ್ಲಿ ಸಿಬಿಐನಿಂದ 800 ಕೇಸ್‌ ತನಿಖೆ ಪೂರ್ಣ!

ಸಾರಾಂಶ

ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಲಾಕ್‌ಡೌನ್‌, ಕೋವಿಡ್‌ ನಿಯಮಾವಳಿ| ಕೊರೋನಾ ಸಂಕಷ್ಟದಲ್ಲೂ 2020ರಲ್ಲಿ ಸಿಬಿಐನಿಂದ 800 ಕೇಸ್‌ ತನಿಖೆ ಪೂರ್ಣ

ನವದೆಹಲಿ(ಜ.02): ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಲಾಕ್‌ಡೌನ್‌, ಕೋವಿಡ್‌ ನಿಯಮಾವಳಿಗಳ ಹೊರತಾಗಿಯೂ, 2020ರಲ್ಲಿ ಕೇಂದ್ರೀಯ ತನಿಖಾ ದಳ(ಸಿಬಿಐ) ಒಟ್ಟಾರೆ 800 ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿದೆ.

ಸಂಪುಟ ವಿಸ್ತರಣೆಗೆ ದಿನಾಂಕ ಫಿಕ್ಸ್.. ಈ ಶಾಸಕರಿಗೆ ಇಲ್ಲ ಮಂತ್ರಿ ಭಾಗ್ಯ?

ಹೊಸ ವರ್ಷದ ಪ್ರಯುಕ್ತ ಶುಕ್ರವಾರ ಸಿಬಿಐ ಅಧಿಕಾರಿಗಳಿಗೆ ಸಿಬಿಐ ನಿರ್ದೇಶಕ ಆರ್‌.ಕೆ ಶುಕ್ಲಾ ಅವರು ಆನ್‌ಲೈನ್‌ ಮೂಲಕ ಹೊಸ ವರ್ಷದ ಶುಭ ಕೋರಿದರು. ಬಳಿಕ ಸಿಬಿಐ ಸಾಧನೆಗಳನ್ನು ವರ್ಣಿಸಿದ ಅವರು, ಕೊರೋನಾ ಸಾಂಕ್ರಾಮಿಕ ರೋಗ ದೇಶವನ್ನೇ ಆವರಿಸಿದಂಥ ಕಠಿಣ ಸಂದರ್ಭದಲ್ಲೂ ಅಧಿಕಾರಿಗಳ ನಿರಂತರ ಶ್ರಮದಿಂದಾಗಿ ಹಾಥ್ರಸ್‌ ಸಾಮೂಹಿಕ ಅತ್ಯಾಚಾರ ಕೇಸ್‌, ಜೈಲಿನಲ್ಲೇ ಸಾವಿಗೀಡಾದ ಸತಂಕುಲಂ ಪ್ರಕರಣ, ಬ್ಯಾಂಕ್‌ ವಂಚನೆ ಕೇಸ್‌ಗಳು ಹಾಗೂ ಮದ್ಯದೊರೆ ವಿಜಯ್‌ ಮಲ್ಯ ವಿರುದ್ಧದ ಕಾನೂನು ಹೋರಾಟದಲ್ಲಿ ಜಯ ಸೇರಿದಂತೆ ಹಲವು ಮಹತ್ವದ ಪ್ರಕರಣಗಳಲ್ಲಿ ಸಿಬಿಐ ಜಯ ಸಾಧಿಸಿದೆ.

ಸಿಸ್ಟರ್‌ ಅಭಯಾ ಕೊಲೆ: ಅಪರಾಧಿ ಪಾದ್ರಿ, ಸನ್ಯಾಸಿನಿಗೆ ಜೀವಾವಧಿ ಶಿಕ್ಷೆ!

ಅಲ್ಲದೆ 2020ರಲ್ಲಿ ಒಟ್ಟಾರೆ 800 ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟುಪರಿಶ್ರಮದಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಕರೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಾಕ್ ಹೋಗಿದ್ದ 79 ವರ್ಷದ ಅಜ್ಜಿ ನಾಪತ್ತೆ: ನೆಕ್ಲೇಸ್‌ಗೆ ಮೊಮ್ಮಗ ಅಳವಡಿಸಿದ ಜಿಪಿಎಸ್‌ನಿಂದ ಪತ್ತೆ
ಯಾವ ಭಯವೂ ಇಲ್ಲದೆ ಬೇಲಿ ಹಾರಿ ಭಾರತ ಪ್ರವೇಶಿಸುತ್ತಿದ್ದಾರೆ ಬಾಂಗ್ಲಾದೇಶಿಗಳು, ವಿಡಿಯೋ ವೈರಲ್