ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡಲು 2 ಕಿ.ಮೀ ಓಡಿದ ಪೊಲೀಸ್‌ : ವೈರಲ್

By Kannadaprabha NewsFirst Published Nov 6, 2020, 7:31 AM IST
Highlights

ಸಂಚಾರಿ ಪೊಲೀಸರೊಬ್ಬರು, ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಭಾರೀ ವಾಹನ ದಟ್ಟಣೆಯ ರಸ್ತೆಯಲ್ಲಿ 2 ಕಿ.ಮೀ ಓಡಿಕೊಂಡೇ ಮುಂದೆ ಹೋಗಿ ದಾರಿ ಮಾಡಿಕೊಟ್ಟರು

ಹೈದರಾಬಾದ್‌ (ನ.06):  ಸಂಚಾರ ದಟ್ಟಣೆಯ ರಸ್ತೆಗಳಲ್ಲಿ ಆ್ಯಂಬುಲೆನ್ಸ್‌ಗಳು ಬಂದಾಗ, ಸಂಚಾರಿ ಪೊಲೀಸರು ವಾಹನಗಳನ್ನು ಪಕ್ಕದಕ್ಕೆ ಸರಿಸಿ ಇಲ್ಲವೇ ಸಿಗ್ನಲ್‌ಗಳಲ್ಲಿ ಹಸಿರು ದೀಪ ಬೆಳಗಿಸಿ ಅವುಗಳನ್ನು ಸರಾಗವಾಗಿ ಮುಂದೆ ಹೋಗಲು ಅನುವು ಮಾಡಿಕೊಡುವುದು ಸಾಮಾನ್ಯ. 

ಆದರೆ ಹೈದ್ರಾಬಾದ್‌ನಲ್ಲಿ ಸಂಚಾರಿ ಪೊಲೀಸರೊಬ್ಬರು, ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಭಾರೀ ವಾಹನ ದಟ್ಟಣೆಯ ರಸ್ತೆಯಲ್ಲಿ 2 ಕಿ.ಮೀ ಓಡಿಕೊಂಡೇ ಮುಂದೆ ಹೋಗಿ ದಾರಿ ಮಾಡಿಕೊಟ್ಟಅಪರೂಪದ ಪ್ರಸಂತ ನಡೆದಿದೆ. ಅವರೀ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಎಫ್‌ಐಆರ್‌ ಹಾಕದೆ ಪೊಲೀಸ್‌ ದಾಳಿ ತಪ್ಪಲ್ಲ .

ತುರ್ತು ಅಗತ್ಯವಿದ್ದ ವ್ಯಕ್ತಿ ಇದ್ದ ಆ್ಯಂಬುಲೆನ್ಸ್‌ ಒಂದು ಹೈದರಾಬಾದ್‌ನ ಅಬೀದ್‌್ಸ ಜಂಕ್ಷನ್‌ ಹಾಗೂ ಆಂಧ್ರಾ ಬ್ಯಾಂಕ್‌ ನಡುವೆ ಭಾರೀ ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಇದನ್ನು ಗಮನಿಸಿದ ಕರ್ತವ್ಯ ನಿರತ ಪೇದೆ ಜಿ. ಬಾಬ್‌ಜಿ ಎಂಬವರು, ಆ್ಯಂಬುಲೆನ್ಸ್‌ ಮುಂದೆ ಓಡುತ್ತಾ ವಾಹನಗಳನ್ನು ಬದಿಗೆ ಸರಿಸಿದ್ದಾರೆ. ಸುಮಾರು ಎರಡು ಕಿ.ಮಿ ಹೀಗೆ ಓಡುತ್ತಾ ಅ್ಯಂಬುಲೆನ್ಸ್‌ಗೆ ದಾರಿ ಮಾಡಿ ಕೊಟ್ಟಿದ್ದಾರೆ.

click me!