ವಿಶ್ವದ ಆದ್ಯತೆಯ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ ಭಾರತ; ಪ್ರಧಾನಿ ಮೋದಿ!

By Suvarna NewsFirst Published Nov 5, 2020, 7:49 PM IST
Highlights

ಭಾರತದಲ್ಲಿ ಹೂಡಿಕೆ ಮಾಡಲು ವಿದೇಶಿ ಸಾಂಸ್ಥಿಕ ಹೂಡಿಕೆದಾರರೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಂವಹನ ನಡೆಸಿದ್ದಾರೆ.  ಗ್ಲೋಬಲ್ ಇನ್ವೆಸ್ಟರ್ ರೌಂಡ್‌ಟೇಬಲ್ ಸಮ್ಮೇಳನದ ಮೂಲಕ  ಮೋದಿ ವಿದೇಶಿ ಹೂಡಿಕೆದಾರರನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ.  ವರ್ಚುವಲ್  ಗ್ಲೋಬಲ್ ಇನ್ವೆಸ್ಟರ್ ರೌಂಡ್‌ಟೇಬಲ್ ಸಮ್ಮೇಳನದಲ್ಲಿ ಮೋದಿ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.

ನವದೆಹಲಿ(ನ.05):  ವಿಶ್ವದಲ್ಲಿ ಭಾರತ ಅತ್ಯಂತ ವಿಶ್ವಾರ್ಹ ಹಾಗೂ ನಂಬಕಸ್ಥ ಹೂಡಿಕೆ ತಾಣವಾಗಿ ಬೆಳೆದಿದೆ. ಹೀಗಾಗಿ ಭಾರತ ವಿಶ್ವದ ಆದ್ಯತೆಯ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವರ್ಚುವಲ್ ಗ್ಲೋಬಲ್ ಇನ್ವೆಸ್ಟರ್ ರೌಂಡ್‌ಟೇಬಲ್ ಸಮ್ಮೇಳನದಲ್ಲಿ ಹೂಡಿಕೆದಾರರನ್ನುದ್ದೇಶಿ ಮೋದಿ ಮಾತನಾಡಿದರು.

ಎಲ್ಲಾ ಭಾರತೀಯರಿಗೆ ಕೊರೋನಾ ಲಸಿಕೆ, ಇದು ಮೋದಿ ಭರವಸೆ!

ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಆತ್ಮನಿರ್ಭರ್ ಭಾರತ್ ಕೇವಲ ಯೋಜನೆಯಲ್ಲ, ಇದರಲ್ಲಿ ಆರ್ಥಿಕ ತಂತ್ರವೂ ಅಡಗಿದೆ ಎಂದು ಮೋದಿ ಹೇಳಿದರು.  ಕಾರ್ಮಿಕರ ಕೌಶಲ್ಯ, ಪ್ರತಿಭೆ ಹಾಗೂ ಸಾಮರ್ಥ್ಯದಿಂದ  ಜಾಗತಿಕ ಮಟ್ಟದಲ್ಲಿ ಭಾರತ ಅತೀ ದೊಡ್ಡ ಉತ್ಪದಾನ ಕೇಂದ್ರವಾಗಿ ಮಾಡಲು ಆತ್ಮನಿರ್ಭರ್ ಭಾರತ  ನೆರವಾಗಲಿದೆ ಎಂದರು.

 

Speaking at the Virtual Global Investor Roundtable. Watch. https://t.co/Vo4wkJGaHt

— Narendra Modi (@narendramodi)

ಮೋದಿ ಉದ್ಘಾಟಿಸಿದ ಸೀ ಪ್ಲೇನ್‌ಗೆ ಒಂದೇ ದಿನದಲ್ಲಿ 3000 ಬುಕ್ಕಿಂಗ್‌!.

ಭಾರತವು ಪ್ರಜಾಪ್ರಭುತ್ವ ಜನಸಂಖ್ಯಾ ಶಕ್ತಿ, ಬೇಡಿಕೆ ಮತ್ತು ವೈವಿಧ್ಯತೆಯಲ್ಲಿ ಭಾರತ ನಂಬಿಕೆ ಇಟ್ಟಿದೆ.  ಹೂಡಿಕೆದಾರರ ಪ್ರತಿಯೊಂದು ರೂಪಾಯಿ ಸುರಕ್ಷಿತವಾಗಿರಬೇಕು. ಇಷ್ಟೇ ಅಲ್ಲ ಹೂಡಿಕೆದಾರರಿಗೆ ಆದಾಯದಲ್ಲೂ ಯಾವುದೇ ಅಡತಡೆಗಳಿರಬಾರದು. ಈ ನಿಟ್ಟಿನಲ್ಲಿ ಸಮಸ್ಯೆಗಳಳನ್ನು ಪರಿಹರಿಸಿ ಭಾರತದಲ್ಲಿ ಸುಲಭ ಹಾಗೂ ಸರಳವಾಗಿ ಹೂಡಿಕೆ ಮಾಡಿ ಆದಾಯ ತೆಗೆಯುವ ಅವಕಾಶಗಳನ್ನು ಸೃಷ್ಟಿಸಲಿದ್ದೇವೆ ಎಂದು ಮೋದಿ ಹೇಳಿದರು.

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಗಣನೀಯ ಸಾಧನೆ ಮಾಡಿದೆ. ಸದ್ಯ ಭಾರತದಲ್ಲಿ ಗುಣಮುಖರ ಸಂಖ್ಯೆ ಶೇಕಡಾ 90 ದಾಟಿದೆ. ಆರ್ಥಿಕತೆ ಚೇತರಿಸಿಕೊಂಡಿದೆ. ಪ್ರತಿ ಕ್ಷೇತ್ರಗಳನ್ನು ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಮುನ್ನುಗ್ಗುತ್ತಿದೆ. ಬದಲಾಗುತ್ತಿರುವ ಜಗತ್ತಿನಲ್ಲಿ ಹೂಡಿಕೆ ಮಾಡಿ ಆದಾಯ ಪಡೆಯಲು ಇದು ಸೂಕ್ತ ಕಾಲ. ಇಂತಹ ಅವಕಾಶವನ್ನು ಭಾರತ ಸೃಷ್ಟಿಸಿದೆ ಎಂದು ಮೋದಿ ಹೂಡಿಕೆದಾರರಿಗೆ ಹೇಳಿದರು.

click me!