ಸೋಂಕಿತನ ಶವಸಂಸ್ಕಾರಕ್ಕೆ ಅಡ್ಡಿ, ಬಿಜೆಪಿ ಕೌನ್ಸಿಲರ್ ವಿರುದ್ಧ ಕೇಸ್ ದಾಖಲು!

By Suvarna News  |  First Published Jul 27, 2020, 6:03 PM IST

ಕೊರೋನಾ ವೈರಸ್‌ಗೆ ಬಲಿಯಾದವರ ಶವ ಸಂಸ್ಕಾರಕ್ಕೆ ಹಲವು ಕಡೆಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಶವ ಸಂಸ್ಕಾರದಿಂದ ಗ್ರಾಮದಲ್ಲಿ ಸೋಂಕು ಹರಡಲಿದೆ ಅನ್ನೋ ತಪ್ಪು ಕಲ್ಪನೆ ಜನರನ್ನು ಆವರಿಸಿದೆ. ವಿಶೇಷ ಅಂದರೆ ಜನಪ್ರತಿನಿಧಿಗಳೇ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವುದು ವಿಪರ್ಯಾಸ. ಹೀಗೆ ಗ್ರಾಮಸ್ಥರನ್ನು ಒಗ್ಗೂಡಿಸಿ ಶವ ಸಂಸ್ಕಾರಕ್ಕೆ ಪ್ರತಿಭಟನೆ ನಡೆಸಿದ ಬಿಜೆಪಿ ಕೌನ್ಸಿಲರ್ ವಿರುದ್ಧ ಪ್ರಕರಣ ದಾಖಲಾಗಿದೆ


ತಿರುವನಂತಪುರಂ(ಜು.27):  ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ ಅನ್ನೋ ಕೂಗು ಒಂದೆಡೆಯಾದರೆ, ಮತ್ತೊಂದೆಡೆ ಸೋಂಕಿತರ ಶವ ಸಂಸ್ಕಾರಕ್ಕೂ ಅಡ್ಡಿ ಆತಂಕ. ಹೀಗೆ ಕೇರಳದ ತಿರುವನಂತಪುರಂನಲ್ಲಿ ಸೋಂಕಿತನ ಶವ ಸಂಸ್ಕಾರಕ್ಕೆ ಅಡ್ಡಿ ಪಡಿಸಿದ ಸ್ಥಳೀಯ ಬಿಜೆಪಿ ಕೌನ್ಸಿಲ್ ಟಿಎನ್ ಹರಿಕುಮಾರ್ ಹಾಗೂ ಹಲವರ ಮೇಲೆ ಕೇಸ್ ದಾಖಲಾಗಿದೆ.

ಕೊರೋನಾ ಕಠೋರ; ಸಹೋದ್ಯೋಗಿಗಳು ಹಣ ಸಂಗ್ರಹಿಸಿ ನೀಡಿದರೂ ದೆಹಲಿ ಡಾಕ್ಟರ್ ಬದುಕಲಿಲ್ಲ

Latest Videos

undefined

ಜಿಲ್ಲೆಯ 83 ವರ್ಷದ ವೃದ್ಧ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದರು. ಆಸ್ಪತ್ಬೆ ಹಾಗೂ ಜಿಲ್ಲಾಡಳಿತ ಸಿಬ್ಬಂದಿಗಳು ಮೃತ ಸೋಂಕಿನತನ ಶವ ಸಂಸ್ಕಾರ ಮಾಡಲು ಗ್ರಾಮದ ಚಿತಾಗಾರಕ್ಕೆ ತರಲಾಗಿತ್ತು. ಈ ವೇಳೆ ಇಲ್ಲಿ ಶವ ಸಂಸ್ಕಾರ ಮಾಡುವುದರಿಂದ ಸ್ಥಳೀಯರಿಗೆ ಕೊರೋನಾ ಹರಡಲಿದೆ ಎಂದು ಬಿಜೆಪಿ ಕೌನ್ಸಲರ್ ಹರಿಕುಮಾರ್ ಹಾಗೂ ಕೆಲ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಮಾಸ್ಕ್ ಹಾಕದ ಮೇಕೆ ಬಂಧನ, ಪ್ರಾಣಿಗಳಿಗೂ ಇನ್ನು ಮುಂದೆ ಮಾಸ್ಕ್ ಕಡ್ಡಾಯ!?.

ತನ್ನ ಗಮನಕ್ಕೆ ತರದೆ ಹಾಗೂ ಸ್ಥಳೀಯರ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜಿಲ್ಲಾಡಳಿತ ಶವ ಸಂಸ್ಕಾರಕ್ಕೆ ಮುಂದಾಗಿದೆ. ಇದು ಸಾಧ್ಯವಿಲ್ಲ. ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿ ಹಲವರನ್ನು ಒಗ್ಗೂಡಿಸಿದ ಕೌನ್ಸಿಲರ್ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಸಿಬ್ಬಂದಿಗಳು ಶವದೊಂದಿಗೆ ವಾಪಾಸ್ಸಾಗಿದ್ದರು. ಬಳಿಕ ರಾತ್ರಿ 11 ಗಂಟೆಗೆ ಪೊಲೀಸ್ ರಕ್ಷಣೆಯೊಂದಿಗೆ ಆಗಮಿಸಿ ಶವ ಸಂಸ್ಕಾರ ನೆರವೇರಿಸಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ, ಕೊರೋನಾ ಮಾರ್ಗಸೂಚಿ ಉಲ್ಲಂಘನೆ, ಗ್ರಾಮಸ್ಥರಿಗೆ ತಪ್ಪು ಮಾಹಿತಿ ರವಾನೆ ಸೇರಿದಂತೆ ಹಲವು ಕಾರಣಗಳಿಗೆ ಬಿಜೆಪಿ ಕೌನ್ಸಿಲರ್ ಹರಿಕುಮಾರ್ ಹಾಗೂ ಇತರ ಕೆಲವರ ಮೇಲೆ ಕೇಸ್ ದಾಖಲಾಗಿದೆ. 
 

click me!