ರಾಮ ಮಂದಿರದ 2,000 ಅಡಿ ಆಳದಲ್ಲಿ ಇಡಲಾಗುತ್ತೆ ಟೈಂ ಕ್ಯಾಪ್ಸೂಲ್!

Published : Jul 27, 2020, 05:42 PM ISTUpdated : Jul 27, 2020, 05:45 PM IST
ರಾಮ ಮಂದಿರದ 2,000 ಅಡಿ ಆಳದಲ್ಲಿ ಇಡಲಾಗುತ್ತೆ ಟೈಂ ಕ್ಯಾಪ್ಸೂಲ್!

ಸಾರಾಂಶ

ದೀರ್ಘ ಕಾಲದ ಹೋರಾಟ, ವಿವಾದದ ಬಳಿಕ ನಿರ್ಮಾಣವಾಗುತ್ತಿದೆ ಭವ್ಯ ಶ್ರೀರಾಮ ಮಂದಿರ| ಭವಿಷ್ಯದಲ್ಲಿ ಗೊಂದಲವೇರ್ಪಡಬಾರದೆಂಬ ನಿಟ್ಟಿನಲ್ಲಿ ಮಂದಿರದ ಆಳದಲ್ಲಿ ಇಡಲಾಗುತ್ತೆ ಟೈಂ ಕ್ಯಾಪ್ಸೂಲ್| ಅಯೋಧ್ಯೆ ಇತಿಹಾಸದ ಬಗ್ಗೆ ಗಗೊಂದಲ ಮೂಡಬಾರದೆಂಬ ನಿಟ್ಟಿನಲ್ಲಿ ಈ ಹೆಜ್ಜೆ

ಅಯೋಧ್ಯೆ(ಜು.27): ಶ್ರೀರಾಮ ಜನ್ಮಭೂಮಿಯ್ಲಲಿ ಮಂದಿರ ನಿರ್ಮಿಸಲು ದಿನಗಣನೆ ಆರಮಭವಾಗಿದೆ. ಭೂಮಿ ಪೂಜೆಗೆ ದಿನಾಂಕ ಹಾಗೂ ಸಮಯ ನಿಗಧಯಾಗಿದ್ದು, ಆಗಸ್ಟ್ 5ರಂದು ಪಿಎಂ ಮೋದಿಯೇ ಇದನ್ನು ನಡೆಸಲಿದ್ದಾರೆ. ಆದರೆ ಈ  ಕ್ಷಣಕ್ಕಾಗಿ ಮಂದಿರ ನಿರ್ಮಾಣಕ್ಕೆ ಸಂಭಂಧಿಸಿದವರು ದೀರ್ಘ ಕಾಲದ ಹೋರಾಟ ನಡೆಸಿದ್ದಾರೆ. ವರ್ಷಾನುಗಟ್ಟಲೇ ನ್ಯಾಯಾಲಯಕ್ಕೆ ಅಲೆದಾಡಿದ ಬಳಿಕ ಮಂದಿರ ನಿರ್ಮಾಣದ ಹಾದಿ ಸುಗಮವಾಗಿದೆ. 

ರಾಮಮಂದಿರ ದೇಣಿಗೆ ಸ್ವೀಕಾರಕ್ಕೆ ಧರ್ಮ ನೋಡಲ್ಲ: ಪೇಜಾವರ ಶ್ರೀ

ಆದರೀಗ ಭವಿಷ್ಯದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಬಾರದೆಂಬ ನಿಟ್ಟಿನಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಂದಿರ ನಿರ್ಮಿಸುವ ಸ್ಥಳದಲ್ಲಿ ಸುಮಾರು 2000 ಅಡಿ ಆಳದಲ್ಲಿ ಒಂದು ಟೈಂ ಕ್ಯಾಪ್ಸೂಲ್ ಇರಿಸಲಿದೆ. ಈ ಮೂಲಕ ಹಲವಾರು ವರ್ಷಗಳ ಬಳಿಕ ಯಾರಾದರೂ ಶ್ರೀರಾಮ ಜನ್ಮಭೂಮಿ ಕುರಿತು ತಿಳಿದುಕೊಳ್ಳಲು ಇಚ್ಛಿಸಿದರೆ ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. 

ರಾಮಮಂದಿರ ನಿರ್ಮಾಣಕ್ಕೆ ಸಿದ್ಧಗಂಗಾ ಮಠದ ಮಣ್ಣು..!

ಭಾರೀ ವಿವಾದಗಳ ಬಳಿಕ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಇತಿಹಾಸ ಬಗ್ಗೆ ಭವಿಷ್ಯದಲ್ಲಿ ಮತ್ತೆ ಗೊಂದಲವೇರ್ಪಡಬಾರದೆಂಬ ನಿಟ್ಟಿನಲ್ಲಿ ಈ ವಿನೂತನ ಪ್ರಯೋಗ ಮಾಡಲಾಗುತ್ತಿದೆ. ದೀರ್ಘ ಕಾಲದ ನ್ಯಾಯಾಂಗ ಹೋರಾಟದ ಬಳಿಕ ಈ ಟೈಂ ಕ್ಯಾಪ್ಸೂಲ್ ಇರಿಸಬೇಕೆಂಬ ಯೋಚನೆ ಟ್ರಸ್ಟ್‌ ಸದಸ್ಯರು ನಿರ್ಧರಿಸಿದ್ದಾರೆ. ಇದರಿಂದಾಗಿ ಭವಿಷ್ಯದಲ್ಲಿ ವಿವಾದ ಹುಟ್ಟಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬುವುದು ಇವರ ಅಭಿಪ್ರಾಯವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು