ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಅವರ ಮದುವೆ ಅದ್ದೂರಿಯಾಗಿ ಮುಗಿದಿದ್ದು, ಇಂದು ರಿಸೆಪ್ಷನ್ ಕಾರ್ಯಕ್ರಮವಿದೆ. ಆದರೆ ಈ ವಿವಾಹ ಸಮಾರಂಭದ ಸ್ಥಳಕ್ಕೆ ಬಾಂಬ್ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಈ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಮುಂಬೈ: ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಅವರ ಮದುವೆ ಅದ್ದೂರಿಯಾಗಿ ಮುಗಿದಿದ್ದು, ಇಂದು ರಿಸೆಪ್ಷನ್ ಕಾರ್ಯಕ್ರಮವಿದೆ. ಆದರೆ ಈ ವಿವಾಹ ಸಮಾರಂಭದ ಸ್ಥಳಕ್ಕೆ ಬಾಂಬ್ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಈ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭಕ್ಕೆ ವಿಶ್ವದೆಲ್ಲೆಡೆಯಿಂದ ಗಣ್ಯಾತಿಗಣ್ಯರು ಆಗಮಿಸಿದರು, ಉದ್ಯಮ ಲೋಕದ ಪ್ರಮುಖರು, ಹಾಲಿವುಡ್ ನಟ ನಟಿಯರು, ವಿವಿಧ ದೇಶದ ರಾಜಕಾರಣಿಗಳು, ಪಾಪ್ ಗಾಯಕರು, ಬಾಲಿವುಡ್ ಹಾಗೂ ದಕ್ಷಿಣ ಸಿನಿಮಾ ರಂಗದ ತಾರೆಯರು, ಕ್ರಿಡಾಪಟುಗಳು ಹೀಗೆ ಒಬ್ಬರನ್ನು ಬಿಡದೇ ಎಲ್ಲರನ್ನೂ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ತಮ್ಮ ಮನೆಯಲ್ಲಿ ನಡೆಯುತ್ತಿರುವ ಕೊನೆ ಪುತ್ರನ ಮದುವೆಗೆ ಆಹ್ವಾನಿಸಿದ್ದರು.
ಶುಕ್ರವಾರ ಮದುವೆಯ ಕಾರ್ಯಕ್ರಮ ಆರಂಭವಾದಾಗಿನಿಂದಲೂ ದೇಶದ ಸಾಮಾಜಿಕ ಜಾಲತಾಣಗಳಲ್ಲಿ ಪೂರ್ತಿ ಎಲ್ಲಿ ನೋಡಿದರಲ್ಲಿ ಈ ಮದುವೆ ಸಮಾರಂಭಕ್ಕೆ ಆಗಮಿಸಿದ ದೇಶ ವಿದೇಶಗಳ ಅತಿಥಿಗಳು ಹಾಗೂ ಅಂಬಾನಿ ಕುಟುಂಬದ ವಿಡಿಯೋಗಳೇ ವೈರಲ್ ಆಗುತ್ತಿದ್ದವು. ಹೀಗಿರುವಾಗ ಇಂತಹ ವಿಐಪಿ, ವಿವಿಐಪಿಗಳೇ ತುಂಬಿದ್ದ ಈ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸುವುದು ಸಣ್ಣಮಾತೇನಲ್ಲ, ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಯಾರೋ ಕಿಡಿಗೇಡಿಗಳು ಅಂಬಾನಿ ಮದುವೆ ಸಮಾರಂಭದ ಕಾರ್ಯಕ್ರಮದಲ್ಲಿ ಬಾಂಬ್ ಇದೆ ಎನ್ನುವಂತೆ ಪೋಸ್ಟ್ ಮಾಡಿದ್ದು ಮುಂಬೈ ಪೊಲೀಸರ ಆತಂಕವನ್ನು ಹೆಚ್ಚಿಸಿದೆ.
ಯಶ್‌ಗೆ ದುಬಾರಿ ವಾಚ್ ಗಿಫ್ಟ್ ಕೊಟ್ರಾ ಅಂಬಾನಿ ಫ್ಯಾಮಿಲಿ? ಬೆಲೆ ಎಷ್ಟು ಇರ್ಬಹುದು ಅನ್ನೋದೇ ಚರ್ಚೆ ಗುರೂ..!
ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಲ್ಲ, ಆದರೆ ಈ ರೀತಿ ಪೋಸ್ಟ್ ಮಾಡಿದ ವ್ಯಕ್ತಿ ಯಾರಿರಬಹುದು ಹಾಗೂ ಆತನ ಪೋಸ್ಟ್ ಹಿಂದಿನ ಉದ್ದೇಶ ಏನಿರಬಹುದು ಎಂಬ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಇದೊಂದು ನಕಲಿ ಬಾಂಬ್ ಬೆದರಿಕೆ ಪೋಸ್ಟ್ ಎಂಬುವುದರ ನಡುವೆಯೂ ಮದುವೆ ಮನೆಯ ಆವರಣದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಸಮೀಪ ಭಾರಿ ಭದ್ರತೆ ಹೆಚ್ಚಳ ಮಾಡಲಾಗಿದೆ. ಈ ಪೋಸ್ಟ್ ಬಗ್ಗೆ ತಮಗೆ ತಿಳಿದಿದೆ. ಆದರೆ ಎಫ್‌ಐಆರ್ ದಾಖಲು ಮಾಡಿಲ್ಲದಿದ್ದರೂ ಭದ್ರತೆ ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರ ಮದುವೆ ಮತ್ತೊಬ್ಬ ಉದ್ಯಮಿ ವಿರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಮುಂಬೈನ ಜಿಯೋ ವರ್ಲ್ಡ್ ಕನ್‌ವೆನ್ಷನ್ ಹಾಲ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಶುಕ್ರವಾರ ನಡೆದಿತ್ತು.
ಮದುವೆಗೆ ಬಂದ ಅನಂತ್ ಅಂಬಾನಿಯ 25 ಕುಚಿಕು ಗೆಳೆಯರಿಗೆ ಸಿಕ್ಕಿದೆ ಕೋಟಿ ಮೌಲ್ಯದ ಗಿಫ್ಟ್!
ಬಾಂಬ್ ಬಗ್ಗೆ ಮಾಡಿದ್ದ ಪೋಸ್ಟ್‌ನಲ್ಲಿ ಏನಿದೆ,
ಅಂಬಾನಿ ಅವರ ಕುಟುಂಬದ ಮದುವೆಗೆ ಹೋದರೆ ನಾಳೆ ಅರ್ಧದಷ್ಟು ಪ್ರಪಂಚ ತಲೆಕೆಳಗಾಗಿ ಹೋಗುತ್ತದೆ ಎಂದು ನನ್ನ ಮನಸ್ಸು ನಾಚಿಕೆಯಿಲ್ಲದೆ ಆಶ್ಚರ್ಯ ಪಡುತ್ತಿದೆ. ಒಂದು ಪಿನ್ ಕೋಡ್‌ನಲ್ಲಿ ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳು. ಎಂದು ಪೋಸ್ಟ್ ಮಾಡಲಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಈ ಪೋಸ್ಟ್ ಹಿಂದಿರುವ ವ್ಯಕ್ತಿಗಾಗಿ ಶೋಧ ನಡೆಸಿದ್ದಾರೆ. ಜೊತೆಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ.