
ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ (Jaipur, Rajasthan) ವರನೋರ್ವ ತನ್ನ ಪತ್ನಿಯ (Wife) ವಿರುದ್ಧ ದೂರು ದಾಖಲಿಸಿದ್ದಾನೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ವಧುವಿಗಾಗಿ (luteri Dulhan) ಹುಡುಕಾಟ ನಡೆಸುತ್ತಿದ್ದಾರೆ. ಹುಡುಗಿ ಗುಣವತಿ, ಸೌಂದರ್ಯವತಿ ಮತ್ತು ಸಂಸಾರ ನಿಭಾಯಿಸಿಕೊಂಡು ಹೋಗ್ತಾಳೆ ಎಂದು ಹೇಳಿದ ವಿಕ್ರಮ್ ಎಂಬಾತನೇ ಈ ಮದುವೆ ಮಾಡಿಸಿದ್ದನು. ಆದ್ರೆ ಮದುವೆಯಾದ ಐದನೇ ದಿನಕ್ಕೆ ವಧು ಮನೆಯಿಂದ (Bride Elope) ಕಾಲ್ಕಿತ್ತಿದ್ದಾಳೆ. ಘಟನೆ ಸಂಬಂಧ ಜೈಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಾರಿಯಾಗಿರುವ ವಧು ಉತ್ತರ ಪ್ರದೇಶದ ಮೂಲದವಳಾಗಿದ್ದು, ಆಕೆಯ ಕುಟುಂಬಸ್ಥರು ಬಡವರಾಗಿದ್ದಾರೆ. ಹಾಗಾಗಿ ಆಕೆಯನ್ನು ಮದುವೆ ಆಗಬೇಕಾದರೆ 2 ಲಕ್ಷ ರೂಪಾಯಿ ನೀಡಬೇಕು ಎಂದು ವಿಕ್ರಮ್ ಹೇಳಿದ್ದನು. ವಿಕ್ರಮ್ ಮಾತು ನಂಬಿದ ಯುವಕ ಎರಡು ಲಕ್ಷ ರೂಪಾಯಿ ನೀಡಿ ಯುವತಿಯನ್ನು ಉತ್ತರ ಪ್ರದೇಶದಿಂದ ರಾಜಸ್ಥಾನಕ್ಕೆ ಕರೆದುಕೊಂಡು ಬಂದಿದ್ದನು. ನಂತರ ಎರಡು ಕುಟುಂಬಗಳ ಸಮ್ಮುಖದಲ್ಲಿ ಸಾಂಗಾನೇರ್ ಎಂಬಲ್ಲಿ ಇಬ್ಬರ ಮದುವೆಯಾಗಿತ್ತು. 500 ರೂಪಾಯಿ ಬಾಂಡ್ ನಲ್ಲಿ ಮದುವೆ ದಾಖಲಿಸಲಾಗಿತ್ತು. ನಂತರ ದೇವಸ್ಥಾನದ ಆವರಣದಲ್ಲಿ ಸಂಪ್ರದಾಯಬದ್ಧವಾಗಿ ರಾತ್ರಿ ಮದುವೆ ನಡೆದಿತ್ತು.
ಮದುವೆಯಾದ ಎರಡು ದಿನಗಳ ಬಳಿಕ ಅಮ್ಮನಿಂದ ಫೋನ್ ಬಂದಿದೆ. ಮದುವೆ ನಂತರದ ಕೆಲವು ಶಾಸ್ತ್ರಗಳನ್ನು ಮಾಡಲು ಉತ್ತರ ಪ್ರದೇಶಕ್ಕೆ ಕರೆಯುತ್ತಿದ್ದಾಳೆ ಎಂದು ವಧು ಗಂಡನಿಗೆ ಹೇಳಿದ್ದಾಳೆ. ಐದು ದಿನದ ನಂತರ ವಧುವಿನ ಜೊತೆ ವರ ಸಹ ಉತ್ತರ ಪ್ರದೇಶಕ್ಕೆ ಹೋಗಿದ್ದಾನೆ. ಈ ವೇಳೆ ಗಂಡನಿಗೆ ತಿಳಿಯದಂತೆ 2 ಲಕ್ಷ ರೂಪಾಯಿ, ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ತೆಗೆದುಕೊಂಡು ಬಂದಿದ್ದಾಳೆ.
ಮದುವೆ ಆಯ್ತು, ಫಸ್ಟ್‌ನೈಟ್‌ಗೂ ರೂಮ್ ಡೆಕೋರೇಟ್ ಆಗಿತ್ತು; ದುಃಖದಲ್ಲಿಯೇ ಇಡೀ ರಾತ್ರಿ ಕಳೆದ ವರ!
ತವರು ಮನೆಯಿಂದಲೇ ಎಸ್ಕೇಪ್
ಊರಿಗೆ ಬರುತ್ತಿದ್ದಂತೆ ಬಾಗಿಲು ಹಾಕಿದ ಮನೆ ಮುಂದೆ ಪತಿಯನ್ನು ನಿಲ್ಲಿಸಿ, ಅಮ್ಮ ಬರ್ತಾಳೆ ವೇಟ್ ಮಾಡೋಣ ಅಂದಿದ್ದಾಳೆ. ಕೆಲ ಸಮಯದ ಬಳಿಕ ಅಮ್ಮನನ್ನ ಕರೆದುಕೊಂಡು ಬರೋದಾಗಿ ಹೇಳಿ ವಧು ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಗಂಡ ಬಾಗಿಲು ಹಾಕಿದ ಮನೆ ಮುಂದೆಯೇ ನಿಂತಿದ್ದಾನೆ. ನಂತರ ವಿಕ್ರಮ್ ನನ್ನ ಪ್ರೇಮಿ. ನಾವು ಇಲ್ಲಿಂದ ದೂರ ಹೋಗುತ್ತಿದ್ದೇವೆ. ನಮ್ಮನ್ನು ಹುಡುಕುವ ಪ್ರಯತ್ನ ಮಾಡಬೇಡ ಎಂಬ ಸಂದೇಶವನ್ನು ಗಂಡನಿಗೆ ಕಳುಹಿಸಿದ್ದಾಳೆ. ಅಲ್ಲಿಂದ ಜೈಪುರಕ್ಕೆ ಹಿಂದಿರುಗಿದ ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಕ್ರಮ್ ಬಳಿ ಹಣ ಇಲ್ಲದ ಕಾರಣ ವಧುವೇ ಈ ರೀತಿ ಪ್ಲಾನ್ ಮಾಡಿದ್ದಳು ಎಂದು ವರದಿಯಾಗಿದೆ. ಹಣ ಪಡೆದು ಮದುವೆಯಾದ್ರೆ ನಮ್ಮ ಭವಿಷ್ಯ ಚೆನ್ನಾಗಿರುತ್ತೆ ಅಂತ ಪ್ರೇಮಿಯ ಗೆಳೆಯನನ್ನು ಮದುವೆಯಾಗಿ ಚಿನ್ನಾಭರಣ ಹಾಗೂ ಹಣದ ಜೊತೆ ಪರಾರಿಯಾಗಿದ್ದಾರೆ.
ಫಸ್ಟ್ ನೈಟ್‌ಗೂ ಮೊದಲೇ ಆಸ್ಪತ್ರೆಗೆ ದಾಖಲಾದ ವಧು; ಗಂಡನ ನಡೆ ಕಂಡು ಮೂಕವಿಸ್ಮಿತರಾದ ಕುಟುಂಬಸ್ಥರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ