13,500 ಕೋಟಿ ಪಿಎನ್‌ಬಿ ಬ್ಯಾಂಕ್‌ ಹಗರಣ: ಬೆಲ್ಜಿಯಂನಲ್ಲಿ ಆರೋಪಿ ಚೋಕ್ಸಿ ಬಂಧನ

ಪಿಎನ್‌ಬಿ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿಯನ್ನು ಕಡೆಗೂ ಹಲವು ವರ್ಷಗಳ ನಂತರ ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಭಾರತದ ಕೋರಿಕೆಯ ಮೇರೆಗೆ ಆತನನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.

PNB Scam Mehul Choksi Apprehended in Belgium, Faces Extradition to India

ಪಿಎನ್‌ಬಿ ಬ್ಯಾಂಕ್ ಅಥವಾ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ಗೆ ಸಾವಿರಾರು ಕೋಟಿ ವಂಚಿಸಿ ದೇಶ ತೊರೆದಿದ್ದ, ಉದ್ಯಮಿ, ಜ್ಯುವೆಲ್ಲರಿ ಮಾಲೀಕ, ವಂಚಕ ಮೆಹುಲ್ ಚೋಕ್ಸಿಯನ್ನು ಕಡೆಗೂ ಬಲೆಗೆ ಕೆಡವಲಾಗಿದೆ. ಬೆಲ್ಜಿಯಂನಲ್ಲಿ ಪತ್ನಿ ಪ್ರೀತಿ ಜೊತೆ ವಾಸ ಮಾಡುತ್ತಿದ್ದ ಮೆಹುಲ್ ಛೋಕ್ಸಿಯನ್ನು ಭಾರತಕ್ಕೆ  ಹಸ್ತಾಂತರಿಸುವಂತೆ ಭಾರತ ಸರ್ಕಾರದ ಕೋರಿಕೆಯ ಮೇರೆಗೆ ಬಂಧಿಸಲಾಗಿದೆ.

ಪಿಎನ್‌ಬಿ ಬ್ಯಾಂಕ್‌ನ ಸಾಲ 'ವಂಚನೆ' ಪ್ರಕರಣದಲ್ಲಿ ಆತನ ಪಾತ್ರಕ್ಕಾಗಿ ಭಾರತವು ಆತನನ್ನು ದೇಶಕ್ಕೆ ಹಸ್ತಾಂತರಿಸುವಂತೆ ಕೋರಿದ ಮೇರೆಗೆ ಬೆಲ್ಜಿಯಂನಲ್ಲಿ ಭಾರತ ಮೂಲದ ಈವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬಂಧಿಸಲಾಗಿದೆ. ಅಲ್ಲಿನ ಮಾಧ್ಯಮ ವರದಿಗಳ ಪ್ರಕಾರ ಉದ್ಯಮಿ ಚೋಕ್ಸಿ ತನ್ನ ಪತ್ನಿ ಪ್ರೀತಿ ಚೋಕ್ಸಿ ಅವರೊಂದಿಗೆ 'ರೆಸಿಡೆನ್ಸಿ ಕಾರ್ಡ್' ಪಡೆದ ನಂತರ ಬೆಲ್ಜಿಯಂನ ಆಂಟ್ವೆರ್ಪ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ದೃಢಪಟ್ಟ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ.

ಇಂಟರ್‌ಪೋಲ್ ಲಿಸ್ಟ್‌ನಿಂದ ವಂಚಕ ಮೆಹುಲ್ ಚೋಕ್ಸಿ ಕೈ ಬಿಟ್ಟಿರುವುದಕ್ಕೆ ಕಾಂಗ್ರೆಸ್ ಗರಂ

Latest Videos

ಭಾರತದಿಂದ ಪರಾರಿಯಾಗಿರುವ ಈ ಆಭರಣ ವ್ಯಾಪಾರಿ ಚೋಕ್ಸಿ ವಿರುದ್ಧ ಶನಿವಾರವೇ ಕ್ರಮ ಕೈಗೊಳ್ಳಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆತನ ಬಂಧನಕ್ಕಾಗಿ ಇಂಟರ್‌ಪೋಲ್ ಜಾರಿಗೊಳಿಸಿದ ರೆಡ್ ನೋಟಿಸ್ ಅನ್ನು 'ರದ್ದುಗೊಳಿಸಿದ ನಂತರ, ಭಾರತೀಯ ಸಂಸ್ಥೆಗಳು, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ಅವರನ್ನು ಬೆಲ್ಜಿಯಂನಿಂದ ಗಡೀಪಾರು ಮಾಡಲು ಮನವಿ ಮಾಡಿದ್ದವು ಎಂದು ಮೂಲಗಳು ತಿಳಿಸಿವೆ.

ಕೆರಿಬಿಯನ್ ಪ್ರದೇಶವನ್ನು ಕೇಂದ್ರೀಕರಿಸಿ ವರದಿ ಮಾಡುವ ಮಾಧ್ಯಮ ಸಂಸ್ಥೆ ಅಸೋಸಿಯೇಟೆಡ್ ಟೈಮ್ಸ್ , ಮಾರ್ಚ್‌ನಲ್ಲಿ ಭಾರತೀಯ ಅಧಿಕಾರಿಗಳು ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬೆಲ್ಜಿಯಂ ಅಧಿಕಾರಿಗಳನ್ನು ಕೋರಿದ್ದಾರೆ ಎಂದು ವರದಿ ಮಾಡಿತ್ತು.

ಮೆಹುಲ್ ಚೋಕ್ಸಿ ಯಾರು?
ಈಗ ಬೆಲ್ಜಿಯಂನಲ್ಲಿ ಬಂಧಿಸಲ್ಪಟ್ಟಿರುವ ಬಹುಕೋಟಿ ವಂನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ಗೀತಾಂಜಲಿ ಜೆಮ್ಸ್ ಸಂಸ್ಥೆಯ ಸಂಸ್ಥಾಪಕ, ಪರಾರಿಯಾಗಿರುವ ವಜ್ರದ ವ್ಯಾಪಾರಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ಗೆ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಬೇಕಾಗಿದ್ದಾನೆ. ವಂಚನೆ ಮಾಡಿ ದೇಶ ಬಿಟ್ಟು ಪರಾರಿಯಾಗಿದ್ದ ಈತ ನವೆಂಬರ್ 15, 2023 ರಂದು ಬೆಲ್ಜಿಯಂನಲ್ಲಿ ನಿವಾಸ ಪಡೆದಿದ್ದ. 

ಪಿಎನ್‌ಬಿ ವಂಚಕ ಚೋಕ್ಸಿ ಇಂಟರ್‌ಪೋಲ್‌ ಲಿಸ್ಟಿಂದ ಹೊರಕ್ಕೆ: ಭಾರತ ಆಕ್ಷೇಪ

₹13,500 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಮೆಹುಲ್ ಚೋಕ್ಸಿ, ಬೆಲ್ಜಿಯಂಗೆ ಸ್ಥಳಾಂತರಗೊಳ್ಳುವ ಮೊದಲು ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ  ಈತನ ಪತ್ನಿ ಪ್ರೀತಿ ಚೋಕ್ಸಿ ಬೆಲ್ಜಿಯಂ ಪ್ರಜೆ.

ಅಸೋಸಿಯೇಟೆಡ್ ಟೈಮ್ಸ್ ವರದಿಯ ಪ್ರಕಾರ, ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ಉಳಿಯಲು 'ಎಫ್ ರೆಸಿಡೆನ್ಸಿ ಕಾರ್ಡ್' ಪಡೆದುಕೊಂಡಿದ್ದ ಆದರೆ ಆತ ಅಲ್ಲಿ ವಾಸಸ್ಥಳ ಪಡೆಯಲು ಮತ್ತು ಭಾರತಕ್ಕೆ ಹಸ್ತಾಂತರಿಸುವುದನ್ನು ತಪ್ಪಿಸಲು ಬೆಲ್ಜಿಯಂ ಅಧಿಕಾರಿಗಳಿಗೆ ಸುಳ್ಳು ಘೋಷಣೆಗಳು ಮತ್ತು ನಕಲಿ ದಾಖಲೆಗಳು ಸೇರಿದಂತೆ ಹಲವು ದಾರಿತಪ್ಪಿಸುವ ನಕಲಿ ದಾಖಲೆಗಳನ್ನು ಸಲ್ಲಿಸಿದರು ಎಂದು ವರದಿ ತಿಳಿಸಿದೆ.

ಮೆಹುಲ್ ಚೋಕ್ಸಿ ಮತ್ತು ಆತನ ಸೋದರಳಿಯ ನೀರವ್ ಮೋದಿ  ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ನಿಂದ 13,500 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ವಂಚನೆಯ ಒಪ್ಪಂದ ಪತ್ರಗಳನ್ನು ಬಳಸಿ ವಂಚಿಸಿದ್ದಾರೆ ಎಂಬ ಆರೋಪವಿದೆ  ಮೇ 2021 ರಲ್ಲಿ, ಚೋಕ್ಸಿ ಆಂಟಿಗುವಾದಿಂದ ಕಾಣೆಯಾಗಿದ್ದ ಆದರೆ ಆತನನ್ನು ನಂತರ ಪತ್ತೆಹಚ್ಚಲಾಗಿತ್ತು. ಏಪ್ರಿಲ್‌ 11ರಂದೇ ಭಾರತದ ಹಸ್ತಾಂತರ ಕೋರಿಕೆ ಮೇರೆಗೆ ಆತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. 

vuukle one pixel image
click me!