* ಕೊರೋನಾತಂಕ ಮಧ್ಯೆ ರೈತರಿಗೆ ಗುಡ್ ನ್ಯೂಸ್
* 'ಪಿಎಂ ಕಿಸಾನ್ ಸಮ್ಮಾನ್ ನಿಧಿ ಸ್ಕೀಂ'ನ ಎಂಟನೇ ಕಂತು ಬಿಡುಗಡೆಗೊಳಿಸಲಿದ್ದಾರೆ ಮೋದಿ
* 9.5 ಕೋಟಿ ರೈತರಿಗೆ 19,000 ಕೋಟಿ ರೂಪಾಯಿ ಲಾಭ
ನವದೆಹಲಿ(ಮೇ.13): ಕೊರೋನಾ ಎರಡನೇ ಅಲೆಯಿಂದ ನಲುಗುತ್ತಿರುವ ಭಾರತದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವುದು ಬಹುದೊಡ್ಡ ಸವಾಲಾಗಿದೆ. ಈ ಸಂಕಟದ ನಡುವೆಯೂ ಭಾರತದ ರೈತರಿಗೆ ಒಂದು ಶುಭ ಸಮಾಚಾರ ಲಭಿಸಿದೆ. ಪಿಎಂ ಮೋದಿ ಮೇ. 14 ರಂದು 'ಪಿಎಂ ಕಿಸಾನ್ ಸಮ್ಮಾನ್ ನಿಧಿ ಸ್ಕೀಂ'ನ ಎಂಟನೇ ಕಂತು ಬಿಡುಗಡೆಗೊಳಿಸಲಿದ್ದಾರೆ. ಇದರಡಿ 9.5 ಕೋಟಿ ರೈತರಿಗೆ 19,000 ಕೋಟಿ ರೂಪಾಯಿ ಲಾಭ ಸಿಗಲಿದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಪಿಎಂ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ರೈತರೊಂದಿಗೆ ಸಂವಾದ ನಡೆಸಿ ಬಳಿಕ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮವನ್ನು pmindiawebcast.nic.in ಮೂಲಕ ವೀಕ್ಷಿಸಬಹುದಾಗಿದೆ.
ಕೃಷಿ ಚಟುವಟಿಕೆ ಮೇಲೆ ಕೊರೋನಾ ಕರಿನೆರಳು
ಹೀಗೆ ಪರಿಶೀಲಿಸಿ
ರಾಜ್ಯ ಸರ್ಕಾರಗಳು Rft (Request For Transfer) ಸಹಿ ಮಾಡಿವೆ. ಇದರೊಂದಿಗೆ ಕೇಂದ್ರ ಸರ್ಕಾರ Fto (Fund Transfer Order) ಜನರೇಟ್ ಮಾಡಿದೆ. ಅಂದರೆ ರೈತರ ಖಾತೆಗೆ ಯಲ್ಲಿ Rft Signed by State For 8th Installment ಎಂದು ಬರೆದಿರುವುದನ್ನು ನೋಡಬಹುದಾಗಿದೆ. PMkisan.gov.in ನಲ್ಲಿ ರೈತರು ತಮ್ಮ ಖಾತೆಗೆ ಲಾಗಿನ್ ಆಗಿ ಇದರ ಡೀಟೈಲ್ಸ್ ನೋಡಬಹುದು. ಇಲ್ಲಿ ಲಾಗಿನ್ ಆಗುತ್ತಿದ್ದಂತೆಯೇ ಫಾರ್ಮರ್ ಕಾರ್ನರ್‌ನಲ್ಲಿ Beneficiary List ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಲ್ಲಿ ರಾಜ್ಯ, ಜಿಲ್ಲೆ, ತಾಲೂಕು ಹೀಗೆ ಎಲ್ಲವನ್ನೂ ಆಯ್ಕೆ ಮಾಡಿ, Get Report ಕ್ಲಿಕ್ ಮಾಡಿದರೆ ಎಲ್ಲಾ ವಿವರ ನೋಡಬಹುದಾಗಿದೆ.
ರಾಜ್ಯದ ರೈತರನ್ನು ಸಂಕಷ್ಟಕ್ಕೆ ದೂಡಿದ ಕೊರೋನಾ!
ಪಿಎಂ ಕಿಸಾನ್ ಸಮ್ಮಾನ್ ನಿಧಿ ಸ್ಕೀಂನ ಲಾಭವೇನು?
ಈ ಸ್ಖೀಂಗೊಳಪಡುವ ರೈತರಿಗೆ ಸರ್ಕಾರ ಕಡಿಮೆ ಬೆಲೆಗೆ ಸಾಲ ನೀಡುತ್ತದೆ. ಈ ಲೋನ್ ಆತ್ಮನಿರ್ಭರ ಭಾರತ ಯೋಜನೆಯಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ನೀಡಲಾಗುತ್ತದೆ. ಹೀಗಾಗಿ KCC ಮಾಡಲಿಚ್ಛಿಸುವವರು ಸಹಕಾರಿ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಪ್ಲೈ ಮಾಡಬಹುದು.