
ಮುಂಬೈ(ಮೇ.13): ರೋಮ್ ಹೊತ್ತಿ ಉರಿಯುವಾಗ ದೊರೆ ನಿರೋ ಪಿಟೀಲು ಬಾರಿಸುತ್ತಿದ್ದ ಹೀಗೆ ಒಂದು ಮಾತಿದೆ. ಸದ್ಯ ಈ ಕೊರೋನಾ ಕಾಲದಲ್ಲಿ, ಡಿಸಿಎಂ ಅಜಿತ್ ಪವಾರ್ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಣೆಗೆ ಆರು ಕೋಟಿ ರೂಪಾಯಿ ವ್ಯಯಿಸಲಿರುವ ಮಹಾರಾಷ್ಟ್ರಕ್ಕೆ ಇದು ಅನ್ವಯಿಸುತ್ತದೆ.
ಹೌದು ಮಹಾರಾಷ್ಟ್ರ ಇಂತಹ ವಿಷಮ ಪರಿಸ್ಥಿತಿಯಲ್ಲಿ ಆರ್ಥಿಕ ಮುಗ್ಗಟ್ಟಿನಲ್ಲಿರುವ ಮಹಾರಾಷ್ಟ್ರ ಸರ್ಕಾರ, ಇಲ್ಲಿನ ಡಿಸಿಎಂ ಹಾಗೂ ಹಣಕಾಸು ಸಚಿವ ಅಜಿತ್ ಪವಾರ್ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಣೆಗೆ ಸುಮಾರು ಆರು ಕೋಟಿ ರೂಪಾಯಿ ವ್ಯಯಿಸಲಿದೆ.
ಮಹಾರಾಷ್ಟ್ರ ಸಾಮಾನ್ಯ ಆಡಳಿತ ಇಲಾಖೆ ಬುಧವಾರ ಈ ಬಗ್ಗೆ ಅಂಡರ್-ಸೆಕ್ರೆಟರಿ ಆರ್ ಎನ್ ಮುಸಲೆ ಸಹಿ ಮಾಡಿದ ಆದೇಶವೊಂದನ್ನು ಪ್ರಕಟಿಸಿದ್ದು, ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುವ ಹೊಣೆಯನ್ನು ಬಾಹ್ಯ ಏಜೆನ್ಸಿಗೆ ವಹಿಸಿದೆ. ಈ ಮೂಲಕ ಅಜಿತ್ ಪವಾರ್ ತೆಗೆದುಕೊಂಡ ನಿರ್ಧಾರಗಳು ಜನ ಸಾಮಾನ್ಯರಿಗೆ ತಲುಪುವಂತೆ ಮಾಡುವ ಹೊಣೆ ವಹಿಸಿದ್ದಾರೆ.
ಉದ್ಧವ್ ಉದ್ಧಟತನ ಹೇಳಿಕೆ: ಮತ್ತೆ ಬೆಳಗಾವಿ ಗಡಿ ವಿವಾದ ಕೆದಕಿದ ಮಹಾ ಸಿಎಂ
ಈ ಆದೇಶದನ್ವಯ ಬಾಹ್ಯ ಏಜೆನ್ಸಿ ಅಜಿತ್ ಪವಾರ್‌ರವರ ಟ್ವಿಟರ್, ಫೇಸ್ಬುಕ್, ಬ್ಲಾಗರ್, ಯೂಟ್ಯೂಬ್, ಇನ್ಸ್ಟಾಗ್ರಾಂ ಖಾತೆ ನಿರ್ವಹಿಸಲಿದೆ. ಇದನ್ನು ಹೊರತುಪಡಿಸಿ ಸೌಂಡ್ ಕ್ಲೌಡ್, ವಾಟ್ಸಾಪ್ ಬುಲೆಟಿನ್, ಟೆಲಿಗ್ರಾಮ್ ಹಾಗೂ ಸಂದೇಶ ಇವೆಲ್ಲವನ್ನೂ ನಿರ್ವಹಿಸಲಿದೆ. ಉಪ ಮುಖ್ಯಮಂತ್ರಿಗಳ ಕಾರ್ಯದರ್ಶಿ ಮತ್ತು ಮಾಹಿತಿ ಮತ್ತು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಡೈರೆಕ್ಟರ್ ಜನರಲ್ ಅಭಿಪ್ರಾಯದ ಮೇರೆಗೆ ಈ ಬಾಹ್ಯ ಏಜೆನ್ಸಿಯಲ್ಲಿ ನೇಮಕ ಮಾಡಲಾಗಿದೆ ಎನ್ನಲಾಗಿದೆ.
ಮಹಾ ಡಿಸಿಎಂ ಪವಾರ್ ಹೇಳಿಕೆಗೆ ಪಕ್ಷಾತೀತ ಆಕ್ರೋಶ, ಕರ್ನಾಟಕ ಕೆಂಡ!
ಮಹಾರಾಷ್ಟ್ರದಲ್ಲಿ ಕೊರೋನಾ ಅಬ್ಬರ
ಮಹಾರಾಷ್ಟ್ರದಲ್ಲಿ ಕೊರೋನಾ ಹಾವಳಿ ಮಿತಿ ಮೀರಿದೆ. ಎರಡನೇ ಅಲೆ ದಾಳಿ ಇಟ್ಟಾಗಿನಿಂದ ದೇಶದಲ್ಲೇ ಅತೀ ಹೆಚ್ಚು ಪ್ರಕರಣಗಳು ಇಲ್ಲಿ ದಾಖಲಾಗುತ್ತಿದ್ದವು. ಸದ್ಯ ಕಳೆದೆರಡು ದಿನಗಳಿಂದ ಕರ್ನಾಟಕ ಮೊದಲ ಸ್ಥಾನಕ್ಕೇರಿ, ಮಹಾರಾಷ್ಟ್ರ ಎರಡನೇ ಸ್ಥಾನಕ್ಕಿಳಿದಿದೆ. ಹೀಗಿದ್ದರೂ ಇದು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಈ ಉಪಯೋಗಕ್ಕೆ ಬಾರದ ಖರ್ಚಿನ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ