
ಭೋಪಾಲ್(ಮೇ.13): ದೇಶಕ್ಕೆ ದುಃಸ್ವಪ್ನದಂತೆ ಎಂಟ್ರಿ ಕೊಟ್ಟಿರುವ ಕೊರೋನಾ ಸಿಕ್ಕ ಸಿಕ್ಕವರನ್ನು ತನ್ನ ಪಾಶಕ್ಕೆ ಸಿಲುಕಿಸುತ್ತಿದೆ. ಈ ಕೊರೋನಾ ಅಟ್ಟಹಾಸಕ್ಕೆ ಜನ ಸಾಮಾನ್ಯರು ನಲುಗಿದ್ದಾರೆ. ತಮ್ಮ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಯಮನಂತೆ ಎರಗಿರುವ ಈ ಮಹಾಮಾರಿಯಿಂದಾಗಿ ಅನೇಕ ಮಂದಿ ತನ್ನ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಅನೇಕ ಮಂದಿ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದಾರೆ. ಸದ್ಯ ಇಂತಹ ಮಕ್ಕಳಿಗಾಗಿ ಮಧ್ಯಪ್ರದೇಶ ಸರ್ಕಾರ ವಿಶೇಷ ನೆರವು ಘೋಷಿಸಿದೆ.
1 ಸಾವಿರ ಬೆಡ್‌ನ ಕ್ವಾರಂಟೈನ್ ಕೇಂದ್ರ: ರೋಗಿಗಳಿಗೆ ರಾಮಾಯಣ, ಮಹಾಭಾರತದ ದರ್ಶನ!
ಹೌದು ಕೊರೋನಾದಿಂದಾಗಿ ತಮ್ಮ ತಂದೆ ತಾಯಿ ಕಳೆದುಕೊಂಡು ಅನಾಥವಾದ ಪ್ರತಿ ಮಗುವಿಗೂ ಮಧ್ಯಪ್ರದೇಶ ಸರ್ಕಾರ ಮಾಸಿಕ 5 ಸಾವಿರ ರೂಪಾಯಿ ಪೆನ್ಷನ್ ನೀಡುವುದಾಗಿ ಘೋಷಿಸಿದೆ. ಇದರೊಂದಿಗೆ ಉಚಿತ ಪಡಿತರ, ಉಚಿತ ವಿಧ್ಯಾಭ್ಯಾಸವನ್ನೂ ಸರ್ಕಾರ ನೀಡಲಿದೆ ಎಂದು ಇಲ್ಲಿನ ಸಿಎಂ ಶಿವರಾಜ್ ಸಿಂಗ್ ಘೋಷಣೆ ಮಾಡಿದ್ದಾರೆ. '
ಸರ್ಕಾರದ ಈ ಘೋಷಣೆ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಕೊಂಚ ಸಮಾಧಾನ ನೀಡಲಿದೆ. ಮಕ್ಕಳಿಗೆ ಬದುಕು ಕಟ್ಟಿಕೊಳ್ಳಲು ದಾರಿಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ