ಇಂಡಿಯಾ ಮೊಬೈಲ್ ಕಾಂಗ್ರೆಸ್‌ ಉದ್ದೇಶಿಸಿ ಮೋದಿ ಮಾತು, ಮುಕೇಶ್ ಅಂಬಾನಿಯೂ ಭಾಗಿ!

Published : Dec 07, 2020, 05:20 PM ISTUpdated : Dec 07, 2020, 05:22 PM IST
ಇಂಡಿಯಾ ಮೊಬೈಲ್ ಕಾಂಗ್ರೆಸ್‌ ಉದ್ದೇಶಿಸಿ ಮೋದಿ ಮಾತು, ಮುಕೇಶ್ ಅಂಬಾನಿಯೂ ಭಾಗಿ!

ಸಾರಾಂಶ

ಇಂಡಿಯಾ ಮೊಬೈಲ್ ಕಾಂಗ್ರೆಸ್‌ ಉದ್ದೇಶಿಸಿ ಮೋದಿ ಮಾತು| ಇದೇ ಮೊದಲ ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿರುವ ಕಾರ್ಯಕ್ರಮ| ಮುಕೇಶ್ ಅಂಬಾನಿಯೂ ಭಾಗಿ

ನವದೆಹಲಿ(ಡಿ.07): ಪಿಎಂ ಮೋದಿ ಡಿಸೆಂಬರ್ 8, ಮಂಗಳವಾರದಂದು ಬೆಳಗ್ಗೆ 10.45ಕ್ಕೆ ವರ್ಚುವಲ್ ಇಂಡಿಯಾ ಮೊಬೈಲ್ ಕಾಂಗ್ರೆಸ್ ಉದ್ದೇಶಿಸಿ ಮಾತನಾಡಲಿದ್ದಾರೆ. ದೂರ ಸಂಪರ್ಕ ವಿಭಾಗ, ಭಾರತ ಸರ್ಕಾರ ಹಾಗೂ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಇದನ್ನು ಆಯೋಜಿಸಿದ್ದು,. ಡಿಸೆಂಬರ್ 8 ರಿಂದ 10ರವರೆಗೆ ನಡೆಯಲಿದೆ.

ಕೇರಳ ಜೈವಿಕ ತಂತ್ರಜ್ಞಾನ ಕೇಂದ್ರಕ್ಕೆ ಗೋಲ್ವಾಲ್ಕರ್‌ ಹೆಸರು: ವಿವಾದ

ನಾಲ್ಕನೇ ಬಾರಿ ನಡೆಯುತ್ತಿರುವ ಕಾರ್ಯಕ್ರಮ

ಈ ಕಾರ್ಯಕ್ರಮದಲ್ಲಿ ಭಾರತದ ಕೋಟ್ಯಾಧಿಪತಿ ಮುಕೇಶ್ ಅಂಬಾನಿಯೂ ಭಾಗಿಯಾಗಲಿದ್ದಾರೆ. ದೂರ ಸಂಪರ್ಕ ವಿಭಾಗದ ಈ ಕಾರ್ಯಕ್ರಮದ ನಾಲ್ಕನೇ ಆವೃತ್ತಿಯ ಈ ಕಾರ್ಯಕ್ರಮ ಕೊರೋನಾ ಮಹಾಮಾರಿಯಿಂದಾಗಿ ಇದೇ ಮೊದಲ ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿದೆ. ಈ ಕಾರ್ಯಕ್ರಮ ಮೂರು ದಿನ ನಡೆಯಲಿದೆ.

ಏನಿದು ಐಎಂಸಿ 2020?

ಐಎಂಸಿ 2020ರ ಥೀಮ್ ಅಂತರ್ಗತ ನಾವೀನ್ಯತೆ - ಸ್ಮಾರ್ಟ್, ಸುರಕ್ಷಿತ, ಸುಸ್ಥಿರ ಎಂದಿದೆ. ಈ ಮೂಲಕ ಆತ್ಮನಿರ್ಭರ ಭಾರತ, ಡಿಜಿಟಲ್ ಸಮಾವೇಶಕ್ಕೆ ಮತ್ತಷ್ಟಯು ಪ್ರೋತ್ಸಾಹ ನೀಡುವುದಾಗಿದೆ. ಜೊತೆಗೆ ಇದು ವಿದೇಶಿ ಮತ್ತು ಸ್ಥಳೀಯ ಹೂಡಿಕೆಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ 170 ಸ್ಥಾನದ ಭರ್ಜರಿ ಗೆಲುವು, 7ಕ್ಕೆ ಕುಸಿದ ಕಾಂಗ್ರೆಸ್
ಲೇಡಿಸ್ ಕೋಚ್‌ಗೆ ಹತ್ತಿ ಚಲಿಸುವ ರೈಲಿನಿಂದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಕೆಳಗೆ ತಳ್ಳಿದ್ದ ದುಷ್ಕರ್ಮಿಯ ಬಂಧನ