ಕೊರೋನಾ ನಡುವೆ ಜನ ಜೀವನ ಅಸ್ತವ್ಯಸ್ತ| ಪಿಪಿಇ ಕಿಟ್ ಧರಿಸಿಕೊಂಡೇ ಮದುವೆ| ವೈರಲ್ ಆಯ್ತು ವಿಡಿಯೋ
ಜೈಪುರ(ಡಿ.07): ರಾಜಸ್ಥಾನದ ಬಾರಾಂದಲ್ಲಿ ನಡೆದ ಘಟನೆಯೊಂದು ಅನೇಕರನ್ನು ಅಚ್ಚರಿಗೀಡು ಮಾಡಿದೆ. ಮದುವೆ ದಿನದಂದು ವಧುವಿನ ಕೊರೋನಾ ರಿಪೋರ್ಟ್ ಪಾಸಿಟಿವ್ ಬಂದಿದೆ. ಹೀಗಿರುವಾಗ ಬೇರೆ ಹಾದಿ ಕಾಣದ ಜೋಡಿ ಪಿಪಿಇ ಕಿಟ್ ಧರಿಸಿಕೊಂಡೇ ಕೋವಿಡ್ ಸೆಂಟರ್‌ನಲ್ಲಿ ಸಪ್ತಪದಿ ತುಳಿದಿದ್ದಾರೆ. ವಧು ವರ ಸೇರಿ ಮದುವೆ ಮಾಡಿಸಿದ ಅರ್ಚಕ ಹಾಗೂ ಕನ್ಯಾದಾನ ಮಾಡಿದ ತರಂದೆ ತಾಯಿಯೂ ಪಿಪಿಇ ಕಿಟ್ ಧರಿಸಿದ್ದರು.
ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ತುರ್ತು ಬಳಕೆ ಅನುಮತಿ ಕೇಳಿದ ಸೀರಂ!
undefined
ಈ ಮದುವೆ ಶಾಹಬಾದ್ ತಾಲೂಕಿನ ಕೆಲ್ವಾಡಾ ಹಳ್ಳಿಯ ಕೋವಿಡ್ ಸೆಂಟರ್‌ನಲ್ಲಿ ನಡೆದಿದೆ. ಸದ್ಯ ಈ ದೃಶ್ಯಗಳು ವೈರಲ್ ಆಗಿದ್ದು, ಐಎಎಸ್ ಆಫೀಸರ್ ಒಬ್ಬರು ಮಜಾದಾಯಕ ರಿಯಾಕ್ಷನ್ ನೀಡಿದ್ದಾರೆ. ಈ ವಿಡಿಯೋ ಶೇರ್ ಮಾಡಿಕೊಂಡಿರುವ ಅಧಿಕಾರಿ 2020ರಲ್ಲಿ ಇದೊಂದೇ ನೋಡೋದು ಬಾಕಿ ಇತ್ತು. ನವ ದಂಪತಿಗೆ ಶುಭಾಶಯಗಳು ಎಂದು ಬರೆದಿದ್ದಾರೆ.
बस यही देखना बचा था 2020 में.😷
Wish the couple Happy Married Life. pic.twitter.com/U0xeHTVM8U
ದೇಶಾದ್ಯಂತ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಒಂದು ಕೋಟಿ ತಲುಪಲಿದೆ. ಹೀಗಿರುವಾಗ ಕೊರೋನಾ ಲಸಿಕೆ ಪ್ರಯೋಗ ಮುಂದುವರೆದಿದೆ. ಈ ಎಲ್ಲಾ ಜಂಜಾಟಗಳ ನಡುವೆ ಸರ್ಕಾರ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸುವಂತೆ ಎಚ್ಚರಿಸುತ್ತಲೇ ಇದೆ. ಜೊತೆಗೆ ಜನರಿಗೆ ನಿತ್ಯದ ಕೆಲಸಗಳನ್ನು ಮಾಡಲು ಅನುಮತಿಯನ್ನೂ ನೀಡಿದೆ. ಮದುವೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಂಖ್ಯೆಯನ್ನೂ ನಿಗಧಿಪಡಿಸಲಾಗಿದೆ.