
ನವದೆಹಲಿ(ಡಿ.07): ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ನೀಡಿರುವ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ. ಕಪಿಲ್ ಮಿಶ್ರಾ ಆರೋಪವೊಂದನ್ನು ಮಾಡುತ್ತಾ ಇವರು ರೈತರ ವಿಚಾರವನ್ನಿಟ್ಟುಕೊಂಡು ಶಹೀನ್‌ಭಾಗ್-2 ಮಾಡಲಿಚ್ಛಿಸುತ್ತಿದ್ದಾರೆ. ಈ ಪ್ರೊಫೆಷನಲ್ ಪ್ರತಿಭಟನಾಕಾರರು ಮೂರು ನಾಲ್ಕು ತಿಂಗಳಿಗೊಮ್ಮೆ ದೆಹಲಿಗರಾದ ನಮ್ಮನ್ನು ಕೈದಿಗಳಾಗಿಸಲು ಬರುತ್ತಾರೆ. ಇನ್ನು ಇವರನ್ನು ಸ್ವೀಕರಿಸಲು ಸಾಧ್ಯ ಇಲ್ಲ ಎಂದಿದ್ದಾರೆ.
ಕಲ್ಲು, ಪೆಟ್ರೋಲ್ ಬಾಂಬ್ ಜೊತೆ ತಾಹಿರ್ ಮನೆಯಲ್ಲಿ ಮತ್ತೊಂದು ಶಾಕಿಂಗ್ ವಸ್ತು ಪತ್ತೆ!
ಪದೇ ಪದೇ ದೆಹಲಿಗರಾದ ನಮ್ಮನ್ನು ಬಂಧಿಯಾಗಿಸುವುದನ್ನು ನಿಲ್ಲಿಸಿ ಎಂದು ಈ ಪ್ರೊಫೆಷನಲ್ ಪ್ರತಿಭಟನಾಕಾರರಿಗೆ ಎಚ್ಚರಿಸುತ್ತೇನೆ. ಇಲ್ಲದಿದ್ದರೆ, ನಿಮ್ಮ ಮನೆಗಳನ್ನೇ ಮುಚ್ಚಲಾಗುತ್ತದೆ. ನಿಮ್ಮ ಮನೆಗೆ ನೀಡಲಾಗುವ ನೀರು, ವಿದ್ಯುತ್ ಜನರೇ ಕಟ್ ಮಾಡುತ್ತಾರೆ. ನಿಮ್ಮ ಅಗತ್ಯ ಸೇವೆಗಳನ್ನು ನಿಲ್ಲಿಸಲು ದೆಹಲಿಗರೇ ಮುಂದೆ ಬರುತ್ತಾರೆ ಎಂದಿದ್ದಾರೆ. ಇದೇ ವೇಳೆ ದೆಹಲಿ ಸಿಎಂ ಕೇಜ್ರೀವಾಲ್ ಹಾಗೂ ಯೋಗೇಂದ್ರ ಯಾದವ್ ಮೇಲೂ ಅವರು ಆರೋಪ ಮಾಡಿದ್ದಾರೆ.
ಕಾನೂನು ಸಮರ್ಥಿಸಿಕೊಂಡಿದ್ದೆ, ಕ್ಷಮೆ ಕೇಳೋ ಮಾತೇ ಇಲ್ಲ: ಕಪಿಲ್ ಮಿಶ್ರಾ
ನಕ್ಸಲರನ್ನು ಜೈಲಿನಿಂದ ಬಿಡುಗಡೆಗೊಳಿಸುವವರು ಹಾಗೂ ದೆಹಲಿ ಸ್ತಬ್ಧಗೊಳಿಸುವವರು ರೈತರೇ ಅಲ್ಲ
ರೈತ ಪ್ರತಿಭಟನೆ ಹಾಗೂ ಭಾರತ್ ಬಂದ್ ವಿಚಾರವಾಗಿಯೂ ಮಾತನಾಡಿದ ಕಪಿಲ್ ಮಿಶ್ರಾ 'ರೈತರು ಆಂದೋಲನ ನಡೆಸಿದರೂ, ಧರಣಿ ನಡೆಸಿದರೂ ಇದು ಅವರ ಹಾಗೂ ಸರ್ಕಾರದ ನಡುವಿನ ವಿಚಾರ. ನಾನು ಅವರ ಸಮಸ್ಯೆಗೆ ಪರಿಹಾರ ಸಿಗಲಿ ಎಂದು ಆಶಿಸುತ್ತೇನೆ. ನಾನು ರೈತರಿಗೆ ಋಣಿಯಾಗಿರುವೆ. ಆದರೆ ದೆಹಲಿಯ ಔಷಧಿ, ಹಾಗೂ ಅವಶ್ಯಕ ಸೌಲಭ್ಯವನ್ನು ನಿಲ್ಲಿಸುತ್ತೇನೆ ಎನ್ನುತ್ತಿರುವ ಯೋಗೇಂದ್ರ ಯಾದವ್ ಓರ್ವ ರೈತರಾ? ' ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ