ಮೇ ಬಳಿಕ ಮೋದಿ ರಾಜೀನಾಮೆ? ಯೋಗಿ ಆಗಲ್ಲ ಪಿಎಂ- 10 ರೋಚಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

Published : Feb 01, 2026, 07:44 PM IST
2026 Prediction

ಸಾರಾಂಶ

ಖ್ಯಾತ ಜ್ಯೋತಿಷಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆ ಮತ್ತು  ಮುಂದಿನ ಪ್ರಧಾನಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದರೊಂದಿಗೆ, ಅಮಿತಾಭ್ ಬಚ್ಚನ್, ಐಶ್ವರ್ಯ-ಅಭಿಷೇಕ್, ವಿರಾಟ್-ಅನುಷ್ಕಾ ಸೇರಿದಂತೆ ಹಲವು ಸೆಲೆಬ್ರಿಟಿಗಳ ಭವಿಷ್ಯದ ಬಗ್ಗೆಯೂ ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇದಾಗಲೇ ಮೂರು ಅವಧಿಯಲ್ಲಿ ಅತ್ಯಧಿಕ ಮತಗಳನ್ನು ಗಳಿಸುವ ಮೂಲಕ ಪ್ರಧಾನಿ ಹುದ್ದೆ ಏರಿದ್ದಾರೆ. 1950ರಲ್ಲಿ ಹುಟ್ಟಿರೋ ಮೋದಿ ಅವರಿಗೆ ಈಗ 75 ವರ್ಷ ಮುಗಿದಿದೆ. ಆದರೂ ಅದೇ ಉತ್ಸಾಹದಿಂದ, ಯುವಕರೂ ನಾಚುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಿನದಲ್ಲಿ ಕೇವಲ ಮೂರ್ನಾಲ್ಕು ಗಂಟೆಯಷ್ಟೇ ನಿದ್ದೆ ಮಾಡಿ, ಉಳಿದ ವೇಳೆಯಲ್ಲಿ, ಕರ್ತವ್ಯನಿರತರಾಗಿರುವ ಕಾರಣದಿಂದಲೇ ಇಂದು ದೇಶದ ಅರ್ಥವ್ಯವಸ್ಥೆ ಘಟಾನುಘಟಿ ದೇಶಗಳನ್ನು ಮೀರಿ ಕೇವಲ 10 ವರ್ಷಗಳಲ್ಲಿ ನಾಲ್ಕನೆಯ ಸ್ಥಾನಕ್ಕೆ ಏರಿದ್ದು, ಶೀಘ್ರದಲ್ಲಿಯೇ ಮೂರನೆಯ ಸ್ಥಾನಕ್ಕೆ ಏರಲಿದೆ. ನರೇಂದ್ರ ಮೋದಿ ಅವರ ಬಳಿಕ ಪ್ರಧಾನಿ ಆಗುವ ಅರ್ಹತೆ ಇರುವುದು ಕೇವಲ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮಾತ್ರ ಎನ್ನಲಾಗುತ್ತಿದೆ.

10 ಭವಿಷ್ಯ ವಾಣಿ!

ಆದರೆ, ಇದೀಗ ಖ್ಯಾತ ಜ್ಯೋತಿಷಿಯೊಬ್ಬರು ರಾಜಕಾರಣ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳ 10 ಭವಿಷ್ಯವನ್ನು ನುಡಿದಿದ್ದಾರೆ. ಅದರಲ್ಲಿ ಅವರು ಮೊದಲು ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಬರುವ ಮೇ ತಿಂಗಳ ಬಳಿಕ, ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆ ಎನ್ನುವುದು. ಅವರು ರಾಜೀನಾಮೆ ನೀಡುತ್ತಿದ್ದಂತೆಯೇ ಯೋಗಿ ಆದಿತ್ಯನಾಥ ಅವರು ಪಿಎಂ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದು ಮಾತುಗಳು ಕೇಳಿಬರುತ್ತವೆ. ಆದರೆ, ಅವರು ಪ್ರಧಾನಿ ಆಗುವುದಿಲ್ಲ. ಆದರೆ ಉತ್ತರ ಪ್ರದೇಶವು ದೇಶದ ನಂಬರ್​ 1 ಬೆಸ್ಟ್​ ರಾಜ್ಯವಾಗಿ ಉಳಿಯುತ್ತದೆ. ಕೇಂದ್ರ ಸಚಿವ ಶಿವರಾಜ್​ ಸಿಂಗ್​ ಚೌಹಾಣ್ ಅವರ ಹೆಸರು ಕೂಡ ಕೇಳಿಬರುತ್ತದೆ. ಅವರು ಆಗುವ ಸಾಧ್ಯತೆ ಇದೆ. ಆದರೆ ಹೆಚ್ಚಿನ ಪಕ್ಷ ಅವರು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಆಗಲಿದ್ದಾರೆ ಎಂದಿರುವ ಜ್ಯೋತಿಷಿ, ಪ್ರಧಾನಿ ಆಗಲಿರುವವರ ಹೆಸರನ್ನು ಕೂಡ ಬಹಿರಂಗಪಡಿಸಿದ್ದಾರೆ.

ಸರ್ಕಾರ ಶೇಕ್​!

ಕೇಂದ್ರ ಗೃಹ ಸಚಿವ ಆಗಿರುವ ಅಮಿತ್​ ಷಾ ಅವರು ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದು ಅವರು ಭವಿಷ್ಯವಾಣಿ ನುಡಿದಿದ್ದಾರೆ. ಇದೇ ವೇಳೆ, ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಕೂಡ ದೆಹಲಿಯ ಮುಖ್ಯಮಂತ್ರಿ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ ಎನ್ನುವ ಭವಿಷ್ಯವನ್ನೂ ಅವರು ನುಡಿದಿದ್ದಾರೆ. ಮಾರ್ಚ್​ ನಂತರ ಯಾವುದೋ ದೊಡ್ಡ ವಂಚನೆಯಲ್ಲಿ ಸರ್ಕಾರವು ಶೇಕ್​ ಆಗಲಿದೆ. ಪಕ್ಷವೂ ಪೂರ್ತಿಯಾಗಿ ಅಲ್ಲೋಲ ಕಲ್ಲೋಲವಾಗಲಿದೆ. ಆ ಸಮಯದಲ್ಲಿಯೇ ಹುದ್ದೆಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಅವರು ನುಡಿದಿದ್ದಾರೆ.

ಸಿನಿಮಾ ಸೆಲೆಬ್ರಿಟಿಗಳ ಭವಿಷ್ಯ ಹೀಗಿದೆ

2026ರಲ್ಲಿ, ಅಮಿತಾಭ್​ ಬಚ್ಚನ್​ ಅವರು ಸಾವಿನ ಬಳಿ ಹೋಗಿ ಬರಲಿದ್ದಾರೆ ಎನ್ನುವ ಭಯಾನಕ ಭವಿಷ್ಯವನ್ನೂ ಅವರು ನುಡಿದಿದ್ದಾರೆ. ಸಲ್ಮಾನ್​ ಖಾನ್​ ಅವರು ಅಧ್ಯಾತ್ಮದ ಹಾದಿಯನ್ನು ಹಿಡಿಯಲಿದ್ದಾರೆ. ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರ ಡಿವೋರ್ಸ್​ ಆಗುತ್ತದೆ ಎಂದು ಇದಾಗಲೇ ಸುದ್ದಿಗಳು ಬರುತ್ತಲೇ ಇವೆ. ಆದರೆ 2026ರಲ್ಲಿ ಅವರಿಬ್ಬರ ನಡುವೆ ಅನ್ಯೋನ್ಯತೆ ಹೆಚ್ಚಾಗುತ್ತದೆ ಎಂದಿದ್ದಾರೆ ಜ್ಯೋತಿಷಿ.

ವಿರಾಟ್​- ಅನುಷ್ಕಾ ಭವಿಷ್ಯ

ವಿರಾಟ್​ ಕೊಹ್ಲಿ ಇನ್ನೂ ಉನ್ನತ ಸ್ಥಾನಕ್ಕೆ ಏರುತ್ತಾರೆ. ಮದುವೆಯ ಬಳಿಕ ಚಿತ್ರರಂಗದಿಂದ ದೂರ ಆಗಿರುವ ಅನುಷ್ಕಾ ಶರ್ಮಾ ವಾಪಸ್​ ಬಣ್ಣದ ಲೋಕಕ್ಕೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ, ಇವರಿಬ್ಬರ ನಡುವೆ ಮೊದಲಿನ ರೀತಿಯಲ್ಲಿ ಅನ್ಯೋನ್ಯತೆ ಇರುವುದಿಲ್ಲ. ಒಬ್ಬರಿಗೊಬ್ಬರು ಸಮಯ ಕೊಡಲು ಆಗುವುದಿಲ್ಲ. ಹಾಗೆಂದು ಇವರಿಬ್ಬರೂ ಬೇರೆಯಾಗುವುದಿಲ್ಲ, ಆದರೆ ಈಗಿರುವ ರೀತಿಯಲ್ಲಿ ಬಾಂಧವ್ಯ ಇರುವುದಿಲ್ಲ ಎಂದಿದ್ದಾರೆ. ಇದೇ ವೇಳೆ 6ಜಿ ಬರುವ ಕಾರಣದಿಂದ ಜನರಿಗೆ ಅನುಕೂಲ ಆಗುತ್ತದೆ. ಆದರೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ನುಡಿದಿದ್ದಾರೆ. gyaansutraofficial ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Uorfi Javed: ಮುಸ್ಲಿಂ ಧರ್ಮದಿಂದ ಈ ನಟಿಯನ್ನು ಉಚ್ಛಾಟಿಸಲಾಗಿದ್ಯಾ? ಉರ್ಫಿ ಜಾವೇದ್ ಹಿಂದೂ ಧರ್ಮ ಸ್ವೀಕರಿಸಿದ್ದಾರಾ?
ಭಾರತದ ಈ ಸಿಟಿ ರಸ್ತೆಯಲ್ಲಿ 50 ವರ್ಷದಿಂದ ಗುಂಡಿಯೇ ಇಲ್ಲ, ಹೊಟ್ಟೆ ಉರಿದುಕೊಳ್ತಿದ್ದಾರೆ ಬೆಂಗಳೂರಿಗರು