
ನವದೆಹಲಿ (ಫೆ.1): ಪ್ರಸಿದ್ಧ ಪಬ್ 'ಒಲಿ ಪಬ್'ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬಂಗಾಳಿ ನಟ ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಯಕ್ ಚಕ್ರವರ್ತಿ ಶುಕ್ರವಾರ ರಾತ್ರಿ ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಅವರು 'ಮಟನ್ ಸ್ಟೀಕ್' ಆರ್ಡರ್ ಮಾಡಿದ್ದರು. ಆದರೆ ಮಟನ್ ಬದಲಿಗೆ ಅವರಿಗೆ ಗೋಮಾಂಸವನ್ನು ರೆಸ್ಟೋರೆಂಟ್‌ನವರು ಬಡಿಸಿದ್ದಾರೆ. ತಿನ್ನುವ ಮೊದಲು ಅದು ಮಟನ್ ಅಲ್ಲ, ಗೋಮಾಂಸ ಎಂದು ತನಗೆ ತಿಳಿದಿರಲಿಲ್ಲ ಎಂದು ಸಯಕ್ ಹೇಳಿಕೊಂಡಿದ್ದಾನೆ.
ಸಯಕ್ ಮತ್ತು ಅವನ ಸ್ನೇಹಿತರು ಒಂದೇ ಒಂದು ಮಟನ್ ಸ್ಟೀಕ್ ಅನ್ನು ಮಾತ್ರ ಆರ್ಡರ್ ಮಾಡಿದ್ದರು. ಆದರೆ ಹೆಚ್ಚುವರಿ ಮಟನ್ ಸ್ಟೀಕ್ ಅನ್ನು ಟೇಬಲ್‌ನಲ್ಲಿ ನೀಡಲಾಗಿತ್ತು. ಈ ಬಗ್ಗೆ ಸಯಕ್ ರೆಸ್ಟೋರೆಂಟ್ ಸಿಬ್ಬಂದಿಯ ಕೇಳಿದಾಗ, ಸಿಬ್ಬಂದಿ ಅವನಿಗೆ ಎರಡು ಸ್ಟೀಕ್‌ಗಳನ್ನು ಆರ್ಡರ್ ಮಾಡಿರುವುದಾಗಿ ಹೇಳಿದ್ದ. ಅದರಲ್ಲಿ ಒಂದು ಮಟನ್ ಮತ್ತು ಮತ್ತೊಂದು ಗೋಮಾಂಸ. ಇದನ್ನು ಕೇಳಿ ಸಯಕ್ ಆಘಾತಕ್ಕೆ ಒಳಾಗಿದ್ದರು. ಬ್ರಾಹ್ಮಣನಾಗಿದ್ದ ಕಾರಣ ಇದರಿಂದ ತನ್ನ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಹೇಳಿದ್ದಾನೆ. ಈ ವೇಳೆ ಆತ, 'ನಾನು ಬ್ರಾಹ್ಮಣ ಅನ್ನೋದು ನಿಮಗೆ ತಿಳಿದಿದ್ಯಾ, ನಾನು ಕೇಳಿದ್ದು ಮಟನ್ ಆದರೆ ನೀವು ನನಗೆ ಗೋಮಾಂಸ ನೀಡಿದ್ದೀರಿ' ಎಂದು ಹೇಳಿದ್ದಾರೆ.
ಈ ಘಟನೆಯ ಸಂಪೂರ್ಣ ವಿಡಿಯೋವನ್ನು ಸಯಕ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಅವರು ರೆಸ್ಟೋರೆಂಟ್ ಸಿಬ್ಬಂದಿ ಮತ್ತು ವ್ಯವಸ್ಥಾಪಕರಿಂದ ವಿವರಣೆ ಕೇಳುತ್ತಿರುವುದು ಕಂಡುಬರುತ್ತದೆ. ವಿಡಿಯೋದಲ್ಲಿ, ವ್ಯವಸ್ಥಾಪಕರು ಇದು ಗಂಭೀರ ತಪ್ಪು ಎಂದು ಕ್ಷಮೆಯಾಚಿಸುತ್ತಿರುವುದು ಕಂಡುಬಂದಿದೆ.
ಈ ವಿಡಿಯೋ ವೈರಲ್ ಆದ ನಂತರ, ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್ ಪೊಲೀಸರು ದೂರು ದಾಖಲಿಸಿಕೊಂಡು, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 299 ರ ಅಡಿಯಲ್ಲಿ ಹೋಟೆಲ್ ಸಿಬ್ಬಂದಿ ಶೇಖ್ ನಸೀರುದ್ದೀನ್ ಅವರನ್ನು ಶನಿವಾರ ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ರೆಸ್ಟೋರೆಂಟ್‌ನಿಂದ ಆಹಾರ ಮಾದರಿಗಳನ್ನು ಪರೀಕ್ಷಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋ ವೈರಲ್ ಆದ ನಂತರ, ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆ ನಡೆಯಿತು. ಕೆಲವರು ಸಯಕ್ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುತ್ತಿದ್ದಾರೆ ಮತ್ತು ರಾಜಕೀಯ ಕಾರ್ಯಸೂಚಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಹೆಚ್ಚುತ್ತಿರುವ ವಿವಾದವನ್ನು ಗಮನಿಸಿದ ಸಯಕ್ ಹಳೆಯ ವೀಡಿಯೊವನ್ನು ಅಳಿಸಿಹಾಕಿ ಹೊಸ ಸ್ಪಷ್ಟೀಕರಣವನ್ನು ನೀಡಿದರು.
"ಹಿಂದೂ-ಮುಸ್ಲಿಂ ಗಲಭೆಗಳನ್ನು ಪ್ರಚೋದಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನನಗೆ ಅನೇಕ ಮುಸ್ಲಿಂ ಸ್ನೇಹಿತರಿದ್ದಾರೆ ಮತ್ತು ನಾನು ಅವರ ಮನೆಗಳಲ್ಲಿ ಈದ್ ಆಚರಿಸುತ್ತೇನೆ. ನನ್ನ ಪ್ರತಿಕ್ರಿಯೆ ಸಂಪೂರ್ಣವಾಗಿ ಭಾವನಾತ್ಮಕವಾಗಿತ್ತು ಏಕೆಂದರೆ ನನ್ನ ಧರ್ಮವು ಗೋಮಾಂಸ ತಿನ್ನೋದನ್ನು ನಿರ್ಬಂಧಿಸಿದೆ. ನಾನು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ' ಎಂದಿದ್ದಾರೆ.
"ನನ್ನ ಅಸಮಾಧಾನ ಯಾವುದೇ ಧರ್ಮದ ವಿರುದ್ಧವಲ್ಲ, ಆದರೆ ರೆಸ್ಟೋರೆಂಟ್‌ನ ನಿರ್ಲಕ್ಷ್ಯದ ವಿರುದ್ಧ. ರಾತ್ರಿಯಲ್ಲಿ ಅಲ್ಲಿ ಜನದಟ್ಟಣೆ ಇರುತ್ತದೆ, ಆದರೆ ಅಂತಹ ತಪ್ಪುಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಇದು ಭವಿಷ್ಯದಲ್ಲಿ ಬೇರೆಯವರಿಗೆ ಸಂಭವಿಸಬಹುದು" ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ