3 ಈಶಾನ್ಯದ ಸಿಎಂಗಳ ಪ್ರಮಾಣವಚನ ಸಮಾರಂಭಕ್ಕೆ ಮೋದಿ

Published : Mar 05, 2023, 10:57 AM ISTUpdated : Mar 05, 2023, 10:58 AM IST
3 ಈಶಾನ್ಯದ ಸಿಎಂಗಳ ಪ್ರಮಾಣವಚನ ಸಮಾರಂಭಕ್ಕೆ ಮೋದಿ

ಸಾರಾಂಶ

ಇತ್ತೀಚೆಗೆ ಚುನಾವಣೆ ನಡೆದ ಮೂರು ಈಶಾನ್ಯ ರಾಜ್ಯಗಳಾದ ತ್ರಿಪುರ, ನಾಗಾಲ್ಯಾಂಡ್‌ ಹಾಗೂ ಮೇಘಾಲಯಗಳ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.

ನವದೆಹಲಿ: ಇತ್ತೀಚೆಗೆ ಚುನಾವಣೆ ನಡೆದ ಮೂರು ಈಶಾನ್ಯ ರಾಜ್ಯಗಳಾದ ತ್ರಿಪುರ, ನಾಗಾಲ್ಯಾಂಡ್‌ ಹಾಗೂ ಮೇಘಾಲಯಗಳ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಮಾರ್ಚ್‌ 7 ರಂದು ನಾಗಾಲ್ಯಾಂಡ್‌ ಹಾಗೂ ಮೇಘಾಲಯಗಳಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ (ಎನ್‌ಡಿಎ) ಸರ್ಕಾರಗಳ ಮತ್ತು ಮಾರ್ಚ್‌ 8 ರಂದು ತ್ರಿಪುರದಲ್ಲಿ ಬಿಜೆಪಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಮೋದಿ ತೆರಳಲಿದ್ದಾರೆ.

ನಾಗಾಲ್ಯಾಂಡ್‌ನಲ್ಲಿ ನೆಫಿಯೋ ರಿಯೋ, ಮೇಘಾಲಯದಲ್ಲಿ ಕಾನ್ರಾಡ್‌ ಸಂಗ್ಮಾ ಮುಖ್ಯಮಂತ್ರಿಗಳಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ತ್ರಿಪುರದಲ್ಲಿ ಹಾಲಿ ಮುಖ್ಯಮಂತ್ರಿ ಮಾಣಿಕ್‌ ಸಾಹಾ ಅವರೇ ಮುಖ್ಯಮಂತ್ರಿಯಾಗಿ ಶಪಥ ಸ್ವೀಕರಿಸುವ ನಿರೀಕ್ಷೆಯಿದೆ. ಇತ್ತೀಚೆಗೆ ಮೂರೂ ರಾಜ್ಯಗಳ ಪೈಕಿ 2ರಲ್ಲಿ ಬಿಜೆಪಿ ಹಾಗೂ ಅದರ ಬೆಂಬಲಿತರು ಗೆದ್ದಿದ್ದರೆ, ಮೇಘಾಲಯದಲ್ಲಿ ಬಹುಮತ ಸಿಗದ ಕಾರಣ ಎನ್‌ಪಿಪಿ ಹಾಗೂ ಬಿಜೆಪಿ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿವೆ.

.ಕರ್ನಾಟಕ ಬಿಜೆಪಿ ಚುನಾವಣೆಗೆ ದೇಶದ ದೇವಮೂಲೆ ಫಲಿತಾಂಶ ಬೂಸ್ಟರ್ ಡೋಸ್

ತ್ರಿಪುರದಲ್ಲಿ ಮತ್ತೆ ಸಾಹಾ, ನಾಗಲ್ಯಾಂಡ್‌ಗೆ 5ನೇ ಬಾರಿ ರಿಯೋ, ಮೇಘಾಲಯದಲ್ಲಿ ಸಂಗ್ಮಾಗೆ ಮತ್ತೆ ಗಾದಿ

ಆಡಳಿತ ವಿರೋಧಿ ಅಲೆ ಎದುರಿಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ತ್ರಿಪುರದ ಮುಖ್ಯಮಂತ್ರಿ (Tripura cm) ಮಾಣಿಕ್‌ ಸಾಹಾ (Manik Saha) ಯಶಸ್ವಿಯಾಗಿದ್ದಾರೆ. 2016ರಲ್ಲಿ ಬಿಜೆಪಿ ಸೇರಿದ್ದ ಅವರು, ಅದಕ್ಕೂ ಮುನ್ನ ಕೆಲ ಕಾಲ ಕಾಂಗ್ರೆಸ್‌ನಲ್ಲಿದ್ದರು. ಅದಕ್ಕೂ ಮುನ್ನ ತ್ರಿಪುರ ಮೆಡಿಕಲ್‌ ಕಾಲೇಜಿನಲ್ಲಿ ಪ್ರೊಫೆಸರ್‌ ಆಗಿದ್ದರು. ಶಸ್ತ್ರಚಿಕಿತ್ಸಾ ತಜ್ಞರಾಗಿರುವ ಸಾಹಾ, ಬಿಹಾರ (Bihar)ಮತ್ತು ಉತ್ತರ ಪ್ರದೇಶದಲ್ಲಿ ಓದಿದ್ದಾರೆ. ಕಳೆದ ವರ್ಷವಷ್ಟೇ ಬಿಪ್ಲಪ್‌ ದೇಬ್‌ ಅವರನ್ನು ಬದಲಿಸಿ ಸಾಹಾ ಅವರನ್ನು ಬಿಜೆಪಿ ಮುಖ್ಯಮಂತ್ರಿಯಾಗಿ ನೇಮಿಸಿತ್ತು. ಈಗ ಅವರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಿದ್ದಾರೆ.

ಕೊಹಿಮಾ: ರಾಜ್ಯದ ಪ್ರಮುಖ ರಾಜಕೀಯ ನಾಯಕ ನೆಫಿಯೂ ರಿಯೋ (Neiphiu Rio) ಸತತ 5ನೇ ಬಾರಿಗೆ ನಾಗಾಲ್ಯಾಂಡ್‌ನ ಮುಖ್ಯಮಂತ್ರಿಯಾಗಿ ಅಧಿಕಾರವೇರಲಿದ್ದಾರೆ. ಬಿಜೆಪಿ ಮೈತ್ರಿಯೊಂದಿಗೆ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಕಾಲೇಜಿನಲ್ಲಿದ್ದಾಗಲೇ ರಾಜಕೀಯ ಪ್ರವೇಶಿಸಿದ ರಿಯೋ 5 ದಶಕಗಳಿಗೂ ಹೆಚ್ಚು ರಾಜಕೀಯ ಜೀವನ ನಡೆಸಿದ್ದಾರೆ. ಕೊಹಿಮಾದ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ನ (UDF)ಯುವಸೇನೆಯ ಅಧ್ಯಕ್ಷರಾಗಿ ಆರಂಭವಾದ ರಾಜಕೀಯ ಜೀವನ ಮುಖ್ಯಮಂತ್ರಿ ಸ್ಥಾನಕ್ಕೆ ಬಂದು ತಲುಪಿದೆ.

ರಿಯೋ ತಾವು ಸ್ಪರ್ಧಿಸಿದ 8 ವಿಧಾನಸಭೆ ಚುನಾವಣೆಗಳಲ್ಲಿ 7 ಬಾರಿ ಜಯಗಳಿಸಿದ್ದಾರೆ. 1989ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದ ರಿಯೋ 2002ರಲ್ಲಿ ಗೃಹ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. 2003ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. 2008ರಲ್ಲಿ ರಾಷ್ಟ್ರಪತಿ ಆಳ್ವಿಕೆಯಿಂದ ಸ್ಥಾನ ಕಳೆದುಕೊಂಡರೂ 2008ರಲ್ಲಿ ಮತ್ತೆ ಗೆಲುವು ಸಾಧಿಸುವ ಮೂಲಕ ಮುಖ್ಯಮಂತ್ರಿಯಾದರು. ಈ ನಡುವೆ ಲೋಕಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಈಶಾನ್ಯ ರಾಜ್ಯಗಳ ಚುನಾವಣೆ: ನಿಜವಾದ ಚುನಾವಣೋತ್ತರ ಸಮೀಕ್ಷೆಗಳು

ಶಿಲ್ಲಾಂಗ್‌: ತಮ್ಮ ತಂದೆ ಪಿ.ಎ.ಸಂಗ್ಮಾ ಸ್ಥಾಪಿಸಿದ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (NPP)ಯನ್ನು ಮುನ್ನಡೆಸುತ್ತಿರುವ ಕಾನ್ರಾಡ್‌ ಸಂಗ್ಮಾ (conrad sangma) 2004ರಲ್ಲಿ ತಮ್ಮ ಮೊದಲ ಯತ್ನದಲ್ಲಿ ಸೋಲುಂಡಿದ್ದರು. ಆದರೆ 2018 ಬಿಜೆಪಿ ಮತ್ತು ಇತರೆ ಪಕ್ಷಗಳ ಜೊತೆಗೂಡಿ ಸರ್ಕಾರ ರಚಿಸಿದ್ದ ಸಂಗ್ಮಾ ಇದೀಗ 2ನೇ ಬಾರಿಗೆ ಸಿಎಂ ಹುದ್ದೆ ಏರಲು ಸಜ್ಜಾಗಿದ್ದಾರೆ. ತಂದೆಯ ಗರಡಿಯಲ್ಲಿ ರಾಜಕೀಯದ ಪಟ್ಟು ಕಲಿತಿರುವ ಕಾನ್ರಾಡ್‌, 2008ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಹಣಕಾಸು ವಿಷಯದಲ್ಲಿ ಎಂಬಿಎ(MBA) ಮುಗಿಸಿರುವ ಸಂಗ್ಮಾ 2009ರವರೆಗೆ ರಾಜ್ಯದ ವಿತ್ತ ಸಚಿವರಾಗಿ (Finance Minister) ಕಾರ್ಯನಿರ್ವಹಿಸಿದ್ದರು. 2009ರಿಂದ 2013ರವರೆಗೆ ವಿಪಕ್ಷ ನಾಯಕನಾಗಿದ್ದ ಸಂಗ್ಮಾ 2015ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದರು. ತಂದೆಯ ಸಾವಿನ ಬಳಿಕ 2016ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದ ಸಂಗ್ಮಾ, 2018ರಲ್ಲಿ ಮತ್ತೆ ರಾಜ್ಯ ರಾಜಕೀಯಕ್ಕೆ ಮರಳಿದರು. 2018ರ ಚುನಾವಣೆಯ ಬಳಿಕ ಬಿಜೆಪಿ ಮೈತ್ರಿಯೊಂದಿಗೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
India Latest News Live: ಕೋಲ್ಕತಾ ಸ್ಟೇಡಿಯಂನಿಂದ ಲಿಯೋನೆಲ್ ಮೆಸ್ಸಿ ಬೇಗ ನಿರ್ಗಮನ; ಮಿತಿಮೀರಿದ ಅಭಿಮಾನಿಗಳ ದಾಂಧಲೆ!