
ನವದೆಹಲಿ: ಇತ್ತೀಚೆಗೆ ಭಾರಿ ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಉತ್ತರಾಖಂಡವು ಇಡೀ ದೇಶದಲ್ಲೇ ಅತಿಹೆಚ್ಚು ಭೂಕುಸಿತದ ಅಪಾಯ ಎದುರಿಸುತ್ತಿರುವ ರಾಜ್ಯ ಎಂಬ ಸಂಗತಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಇಸ್ರೋ ಕಲೆಹಾಕಿದ ಉಪಗ್ರಹ ಮಾಹಿತಿಯಲ್ಲಿ ಕಳೆದ ಎರಡು ದಶಕದಲ್ಲಿ ಅತಿಹೆಚ್ಚು ಭೂಕುಸಿತ ಉತ್ತರಾಖಂಡದ ರುದ್ರಪ್ರಯಾಗ ಮತ್ತು ತೆಹ್ರಿ ಘಡ್ವಾಲ್ ಜಿಲ್ಲೆಯಲ್ಲಿ ಸಂಭವಿಸಿದೆ ಎಂಬುದು ಗೊತ್ತಾಗಿದೆ.
ದೇಶದಲ್ಲಿ 1988ರಿಂದ ಈಚೆಗೆ 80,000 ಭೂಕುಸಿತಗಳು ಸಂಭವಿಸಿವೆ. ಭೂಕುಸಿತದ (Landslide) ಅಪಾಯ ಹೆಚ್ಚಿರುವ ಭಾರತದ 147 ಜಿಲ್ಲೆಗಳನ್ನು ಇಸ್ರೋ ಪಟ್ಟಿಮಾಡಿದೆ. ಆ ಪಟ್ಟಿಯಲ್ಲಿ ಉತ್ತರಾಖಂಡದ ಎರಡು ಜಿಲ್ಲೆಗಳ ನಂತರದ ಎಂಟು ಸ್ಥಾನದಲ್ಲಿ ಕ್ರಮವಾಗಿ ಕೇರಳದ (Kerala) ತ್ರಿಶೂರ್ (Thrissur), ಜಮ್ಮು ಕಾಶ್ಮೀರದ ರಾಜೌರಿ, ಕೇರಳದ ಪಾಲಕ್ಕಾಡ್, ಜಮ್ಮು ಕಾಶ್ಮೀರದ ಪೂಂಚ್, ಕೇರಳದ ಮಲಪ್ಪುರಂ, ಸಿಕ್ಕಿಂನ (Sikkim) ದಕ್ಷಿಣ ಮತ್ತು ಪೂರ್ವ ಜಿಲ್ಲೆ ಹಾಗೂ ಕೇರಳದ ಕಲ್ಲಿಕೋಟೆ(Kallikote) ಜಿಲ್ಲೆಗಳಿವೆ.
ಪ್ರತಿ ವರ್ಷ ಜೋಶಿಮಠ 6.5 ಸೆ.ಮೀ. ಕುಸಿತ: ಚಂಬಾದಲ್ಲೂ ಭೂಮಿ ಬಿರುಕು, ಕುಸಿತ ಭೀತಿ
ಉತ್ತರಾಖಂಡ, ಹಿಮಾಚಲ ಪ್ರದೇಶ (Himachal Pradesh), ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿದರೆ ದೇಶದಲ್ಲಿ ಕೇರಳ ಅತಿಹೆಚ್ಚು ಭೂಕುಸಿತದ ಅಪಾಯ ಹೊಂದಿರುವ ರಾಜ್ಯವಾಗಿದೆ. ಉತ್ತರಾಖಂಡ ಮತ್ತು ಕೇರಳದ ಜಿಲ್ಲೆಗಳಲ್ಲಿ ಜನಸಂಖ್ಯೆ ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ಭೂಕುಸಿತದಿಂದ ಉಂಟಾಗುವ ಅಪಾಯವೂ ಹೆಚ್ಚಿನದಾಗಿರುತ್ತದೆ ಎಂದು ಇಸ್ರೋದ ರಿಮೋಟ್ ಸೆನ್ಸಿಂಗ್ ಸೆಂಟರ್‌ನ (Remote Sensing Center) ಅಧ್ಯಯನ ವರದಿ ಹೇಳಿದೆ.
ಇನ್ನು, ಜಗತ್ತಿನಲ್ಲೇ ಅತಿಹೆಚ್ಚು ಭೂಕುಸಿತ ಸಂಭವಿಸುವ ನಾಲ್ಕು ದೇಶಗಳ ಪೈಕಿ ಭಾರತವೂ ಒಂದಾಗಿದೆ. ಇಲ್ಲಿನ ಶೇ.12.6ರಷ್ಟುಭೂಭಾಗ ಭೂಕುಸಿತದ ಅಪಾಯವನ್ನು ಹೊಂದಿದೆ. ಹಿಮಾಲಯ, ಪಶ್ಚಿಮ ಘಟ್ಟ, ಕೊಂಕಣ ಘಟ್ಟ ಹಾಗೂ ಪೂರ್ವ ಘಟ್ಟಪ್ರದೇಶಗಳು ಹೆಚ್ಚು ಭೂಕುಸಿತಕ್ಕೆ ಸಾಕ್ಷಿಯಾಗುತ್ತಿವೆ. ಹವಾಮಾನ ಬದಲಾವಣೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಭೂಕುಸಿತದ ಪ್ರಮಾಣ ಹೆಚ್ಚುತ್ತಿದೆ ಎಂದೂ ಇಸ್ರೋ ತಿಳಿಸಿದೆ.
ಪ್ರತಿ ವರ್ಷ ಜೋಶಿಮಠ 6.5 ಸೆ.ಮೀ. ಕುಸಿತ: ಚಂಬಾದಲ್ಲೂ ಭೂಮಿ ಬಿರುಕು, ಕುಸಿತ ಭೀತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ