350 ಸೋಂಕಿತರ ಪ್ರಾಣ ಉಳಿಸಿದ ಪೊಲೀಸರು!

By Kannadaprabha NewsFirst Published Nov 29, 2020, 8:43 AM IST
Highlights

ಪೊಲೀಸರು ತಮ್ಮ ರಕ್ಷಣಾ ಕೆಲಸದ ಜೊತೆಗೆ ಪ್ರಾಣ ರಕ್ಷಣೆಯನ್ನು ಮಾಡಿದ್ದಾರೆ. 350 ಜನರ ಪ್ರಾಣ ರಕ್ಷಣೆ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ನವದೆಹಲಿ (ನ.29): ಲಾಕ್‌ಡೌನ್‌ ವೇಳೆ ವೈರಸ್‌ ಅನ್ನು ಲೆಕ್ಕಿಸದೇ ಆಹೋರಾತ್ರಿ ಸೇವೆ ಮಾಡಿದ್ದ ಪೊಲೀಸರು ಇದೀಗ ಪ್ಲಾಸ್ಮಾ ದಾನದ ಮೂಲಕ 350ಕ್ಕೂ ಹೆಚ್ಚು ಜನರ ಜೀವ ಉಳಿಸಿದ್ದಾರೆ. 

ಕೋವಿಡ್‌ಗೆ ತುತ್ತಾಗಿ ಗುಣಮುಖರಾದ ದೆಹಲಿ ಪೊಲೀಸರು ಮಾಡಿದ ಪ್ಮಾಸ್ಮ ದಾನದಿಂದಾಗಿ 350 ಜೀವಗಳು ಉಳಿದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಒಬ್ಬರು ಪ್ಮಾಸ್ಮ ದಾನ ಮಾಡಿದರೆ ಅದರಿಂದ ಮೂವರ ಜೀವ ಉಳಿಸಬಹುದು. 81,346 ಮಂದಿ ಬಲ ಇರುವ ದೆಹಲಿ ಪೊಲೀಸ್‌ನಲ್ಲಿ 6,937 ಮಂದಿ ಕೋವಿಡ್‌ಗೆ ತುತ್ತಾಗಿದ್ದಾರೆ.

ಗುಣಮುಖ ಆದವರಲ್ಲಿ ಮತ್ತೆ ಕೊರೋನಾ..! ..

26 ಮಂದಿ ಬಲಿಯಾದರೆ, 6,809 ಮಂದಿ ಗುಣ ಮುಖರಾಗಿದ್ದು, 822 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನಾ ಮಹಾಮಾರಿ ವಿಶ್ವದಾದ್ಯಂತ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು ಇನ್ನಾದರೂ ಕೂಡ ಕಡಿಮೆಯಾಗಿಲ್ಲ. ಈಗಾಗಲೇ ಲಕ್ಷಾಂತರ ಮಂದಿ ಪ್ರಾಣವನ್ನು ಬಲೆಪಡೆದುಕೊಂಡಿದ್ದು ಕೋಟ್ಯಂತರ ಜನ ಇದರ ಹಾವಳಿಯಿಂದ ತತ್ತರಿಸಿದ್ದಾರೆ. 

click me!