ನಂಜನಗೂಡಿನಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಶ್ರೀಕಂಠೇಶ್ವರ ದರ್ಶನ ಪಡೆಯುವುದಾಗಿ ಮೋದಿ ಹೇಳಿದ್ದರು. ಇದರಂತೆ ಮೋದಿ, ಶ್ರೀಕಂಠೇಶ್ವರ ದೇಗುಲಕ್ಕೆ ಆಗಮಿಸಿದ ಮೋದಿ, ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಂಜನಗೂಡು(ಮೇ.07): ಕರ್ನಾಟಕ ವಿಧಾನಸಭಾ ಚುನಾವಣಾ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ನಂಜನಗೂಡಿನಲ್ಲಿ ಮೋದಿ ಕೊನೆಯ ಪ್ರಚಾರ ಸಮಾವೇಶ ನಡೆಸಿದ ಮೋದಿ, ಕರ್ನಾಟಕದಲ್ಲಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ರಚಿಸಲು ಜನತೆಗೆ ಮನವಿ ಮಾಡಿದ್ದಾರೆ. ಈ ಸಮಾವೇಶದ ಬಳಿಕ ಮೋದಿ ನೇರವಾಗಿ ದೆಹಲಿಗೆ ಹಿಂತಿರುಗಬೇಕಿತ್ತು. ಆದರೆ ಭಾಷಣದ ವೇಳೆ ಮೋದಿ, ನಂಜನಗೂಡು ಕ್ಷೇತ್ರಕ್ಕೆ ಆಗಮಿಸಿರುವ ಹಿನ್ನಲೆಯಲ್ಲಿ ದಕ್ಷಿಣ ಕಾಶಿ ಶ್ರೀಕಂಠೇಶ್ವರನ ದರ್ಶನ ಪಡೆಯುವುದಾಗಿ ಹೇಳಿದ್ದರು. ಇದರಂತೆ ಪ್ರಧಾನಿ ಮೋದಿ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. ಇದೇ ವೇಳೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಂಜನಗೂಡು ದೇವಸ್ಥಾನ ಪ್ರವೇಶಿಸಿದ ಪ್ರಧಾನಿ ಮೋದಿ, ಮಹಾಗಣಪತಿಗೆ ಮೊದಲ ಪೂಜೆ ಸಲ್ಲಿಸಿದರು. ಶಕ್ತಿ ಗಣಪತಿಗೆ ಪ್ರಧಾನಿ ಮೋದಿ ಉದ್ದಂಡ ನಮಸ್ಕಾರ ಮಾಡಿದರು. ಬಳಿಕ ಶ್ರೀ ಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಬಿಲ್ವಪತ್ರ ಹಿಡಿದು ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದಾರೆ. ಮೋದಿ ಹಣೆಗೆ ವಿಭೂತಿ ಇಟ್ಟು, ಶಾಲು ಹೊದಿಸಿಸಿ ಹೂವಿನ ಹಾರ ಹಾಕಿದ ಅರ್ಚಕರು, ಪೂಜೆ ನೆರವೇರಿಸಿದರು. ಲೋಕಕಲ್ಯಾಣಕ್ಕಾಗಿ ಪೂಜೆ ನಡೆಸಿದ್ದಾರೆ. ದೇಗುಲದ ಪ್ರಧಾನ ಅರ್ಚಕ ನೀಲಕಂಠ ದೀಕ್ಷಿತ್ ಪೂಜೆ ನೆರವೇರಿಸಿ, ಮೋದಿಗೆ ತಾಂಬೂಲ ಪ್ರಸಾದ ವಿತರಿಸಿದರು. ಸುಮಾರು 30 ನಿಮಿಷಗಳೂ ಹೆಚ್ಚು ಕಾಲ ದೇಗುದಲ್ಲಿದ್ದ ಮೋದಿ ಪ್ರಸಾದ ಪಡೆದು ಧ್ಯಾನದಲ್ಲಿ ಮಗ್ನರಾದರು.
undefined
ಭಾರತದಿಂದ ಕರ್ನಾಟಕವನ್ನು ಪ್ರತ್ಯೇಕಿಸಲು ಹೊರಟಿದೆ ಕಾಂಗ್ರೆಸ್, ಸೋನಿಯಾ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ!
ದೇಗುಲದಿಂದ ಹೊರಬಂದ ಮೋದಿ ಅರ್ಚಕರ ಜೊತೆ ಮಾತನಾಡಿದ ಮೋದಿ, ಎಲ್ಲರಿಗೂ ನಮಸ್ಕರಿಸಿದರು. ವಿಶೇಷ ಪೂಜೆ ಸಲ್ಲಿಸಿದ ಮೋದಿ ಶ್ರೀಕಂಠೇಶ್ವರ ದೇಗುಲದಿಂದ ಮೋದಿ ಮೈಸೂರಿಗೆ ತೆರಳಿದರು. ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ. ಪ್ರಧಾನಿ ಮೋದಿ ಭಾಷಣದಲ್ಲಿ ದೇಗುಲ ದರ್ಶನ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ದೇವಸ್ಥಾನದ ಆವರಣದಲ್ಲಿ ಭಾರಿ ಬಿಗಿಭದ್ರತೆ ಕೈಗೊಳ್ಳಲಾಗಿತ್ತು. ಶ್ರೀಕಂಠೇಶ್ವರ ದೇವಸ್ಥಾನದ ದಾರಿಯಲ್ಲೂ ಭದ್ರತೆ ಕೈಗೊಳ್ಳಲಾಗಿತ್ತು.
ನಂಜನಗೂಡಿನಲ್ಲಿ ಆಯೋಜಿಸಿದ್ದ ಬೃಹತ್ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ನನ್ನ ವಿರುದ್ದ ಟೀಕೆ ಮಾಡುತ್ತಲೇ ಇದೆ.ಈ ಟೀಕೆಗಳನ್ನೇ ಮೆಟ್ಟಿಲು ಮಾಡಿ ಲೋಕಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಲೋಕವನ್ನು ರಕ್ಷಿಸಲು ವಿಷವನ್ನು ನುಂಗಿದ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೆ ಭೇಟಿ ನೀಡುವುದಾಗಿ ಮೋದಿ ಭಾಷಣದಲ್ಲಿ ಹೇಳಿದರು. ಇದರಂತೆ ಶ್ರೀಕಂಠೇಶ್ವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಂದು ಮಕ್ಕಳ ಭವಿಷ್ಯದ ನೀಟ್ ಪರೀಕ್ಷೆ, ನಮ್ಮ ಪರೀಕ್ಷೆ ಮೇ.10ಕ್ಕೆ; ಶಿವಮೊಗ್ಗದಲ್ಲಿ ಮೋದಿ ಭಾಷಣ!