ಕೇಜ್ರಿವಾಲ್ ಮನೆ ನವೀಕರಣಕ್ಕೆ 45 ಕೋಟಿ ಅಲ್ಲ, 171 ಕೋಟಿ ಖರ್ಚು,ಆಪ್‌ಗೆ ಕಾಂಗ್ರೆಸ್ ಶಾಕ್!

By Suvarna NewsFirst Published May 7, 2023, 5:22 PM IST
Highlights

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆ ನವೀಕರಣಕ್ಕೆ 45 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಅನ್ನೋ ಆರೋಪ ಈಗಾಗಲೇ ಆಪ್‌ನಲ್ಲಿ ಸುಂಟರಗಾಳಿ ಎಬ್ಬಿಸಿದೆ. ಆದರೆ ಕೇಜ್ರಿವಾಲ್ ಮನೆ ನವೀಕರಣಕ್ಕೆ 45 ಕೋಟಿ ಅಲ್ಲ, 171 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಕಾಂಗ್ರೆಸ್ ದಾಖಲೆ ಬಿಡುಗಡೆ ಮಾಡಿದೆ.

ನವದೆಹಲಿ(ಮೇ.07): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿಾಲ್‌ಗೆ ಇದೀಗ ಸಂಕಷ್ಟಗಳ ಸರಮಾಲೆ ಎದುರಾಗಿದೆ. ಅಬಕಾರಿ ನೀತಿ ಹಗರಣದಲ್ಲಿ ಈಗಾಗಲೇ ವಿಚಾರಣೆ ಎದುರಿಸಿದ ಕೇಜ್ರಿವಾಲ್‌ಗೆ ಮತ್ತೆ ಮನೆ ನವೀಕರಣ ತಲೆನೋವು ಶುರುವಾಗಿದೆ. ಕೇಜ್ರಿವಾಲ್ ಮನೆ ನವೀಕರಣಕ್ಕೆ 45 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಅನ್ನೋ ವರದಿ ಬೆನ್ನಲ್ಲೇ ಲೆಫ್ಟಿನೆಂಟ್ ಗವರ್ನರ್ ವರದಿ ಕೇಳಿದ್ದಾರೆ. ಇದೀಗ ಕೇಜ್ರಿವಾಲ್ ತಮ್ಮ ಮನೆ ನವೀಕರಣಕ್ಕೆ 45 ಕೋಟಿ ಅಲ್ಲ 171 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕೇನ್ ಆರೋಪಿಸಿದ್ದಾರೆ.

ಕೇಜ್ರಿವಾಲ್ ಬಂಗಲೆ ಪಕ್ಕದಲ್ಲೇ 22 ಸರ್ಕಾರಿ ಹಿರಿಯ ಅಧಿಕಾರಿಗಳ ಮನೆ ಇದೆ. ಆದರೆ ಕೇಜ್ರಿವಾಲ್ ತಮ್ಮ ಮನೆ ನವೀಕರಣದ ಜೊತೆ ಗಾತ್ರವನ್ನು ಹಿಗ್ಗಿಸಿದ್ದಾರೆ. ಹೆಚ್ಚುವರಿ ಕೋಣೆಗಳನ್ನು ನಿರ್ಮಿಸಿದ್ದಾರೆ. ಹೀಗಾಗಿ ಇಲ್ಲಿಂದ ಒಕ್ಕಲೆಬ್ಬಿಸಿದ ಅಧಿಕಾರಿಗಳಿಗೆ ಕಾಮನ್‌ವೆಲ್ತ್ ಗ್ರಾಮದಲ್ಲಿ 5 ಮನೆಗಳನ್ನು ಕೇಜ್ರಿ ಸರ್ಕಾರ ಖರೀದಿಸಿದೆ. ಪ್ರತಿ ಒಂದು ಮನೆಯ ಬೆಲೆ 6 ಕೋಟಿ ರೂಪಾಯಿ. ಅರವಿಂದ್ ಕೇಜ್ರಿವಾಲ್ ತಮ್ಮ ಮನೆಯ ನವೀಕರಣದಡಿಯಲ್ಲಿ ಈ ಮನೆಗಳನ್ನು ಖರ್ಚು ಮಾಡಲಾಗಿದೆ. ಹೀಗಾಗಿ ಅರವಿಂದ್ ಕೇಜ್ರಿವಾಲ್ ಮನೆ ನವೀಕರಣಕ್ಕೆ ತಗುಲಿರುವ ವೆಚ್ಚ 171 ಕೋಟಿ ರೂಪಾಯಿ ಎಂದು ಅಜಯ್ ಮಾಕೇನ್ ಹೇಳಿದ್ದಾರೆ.

Latest Videos

ಆಮ್‌ ಆದ್ಮಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಐಷಾರಾಮಿ ಪ್ಯಾಲೆಸ್‌ನ Exclusive ಚಿತ್ರಗಳು!

ಕೇಜ್ರಿವಾಲ್ ನಿಯಮ ಮೀರಿ ಮನೆ ನವೀಕರಣ ಮಾಡಿದ್ದಾರೆ. ಕೇಜ್ರಿವಾಲ್ ಮನೆ 1 ಮಹಡಿಯ ಕಟ್ಟವಾಗಿತ್ತು. ಇದೀಗ ಇದು 3 ಮಹಡಿಗೆ ಏರಿಸಲಾಗಿದೆ. ಹೆಚ್ಚುವರಿ ಕೋಣೆಗಳು, ಹೆಚ್ಚುವರಿ ಸ್ಥಳವನ್ನು ಆಕ್ರಮಿಸಿಕೊಂಡಿದೆ. ಕೇಜ್ರಿವಾಲ್ ಮನೆ ನವೀಕರಣ ಅಡಿಯಲ್ಲಿ ಕೋಟಿ ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಅಜಯ್ ಮಾಕೇನ್ ಆರೋಪಿಸಿದ್ದಾರೆ. 20,0000 ಚದರ ಅಡಿ ವಿಸ್ತೀರ್ಣತೆಗೆ ಮನೆ ಹೆಚ್ಚಿಸಿಕೊಳ್ಳಲಾಗಿದೆ. ಈ ಅಕ್ರಮ ಕುರಿತು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾಗೆ ದೂರು ನೀಡುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಅಧಿಕೃತ ನಿವಾಸವನ್ನು ನವೀಕರಿಸಲು 45 ಕೋಟಿ ರು. ವ್ಯಯಿಸಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಈ ಕುರಿತ ಎಲ್ಲಾ ಮಾಹಿತಿಯನ್ನು 15 ದಿನಗಳ ಒಳಗಾಗಿ ತಮಗೆ ಸಲ್ಲಿಸುವಂತೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ ಸಕ್ಸೇನಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರೊಂದಿಗೆ ಕೇಂದ್ರ ಸರ್ಕಾರ ಮತ್ತು ದೆಹಲಿಯ ಆಪ್‌ ಸರ್ಕಾರದ ನಡುವೆ ಮತ್ತೊಂದು ಸಂಘರ್ಷ ಆರಂಭವಾಗುವ ಸಾಧ್ಯತೆ ಇದೆ.

ಹೆಸರಿಗೆ ಮಾತ್ರ ಆಮ್‌ ಆದ್ಮಿ, ಮನೆ ಐಷಾರಾಮಿ; ವರದಿ ಬಿಚ್ಚಿಟ್ಟಿದೆ ಕೇಜ್ರಿವಾಲ್ ಅಸಲೀ ಕಹಾನಿ!

ಸಿಎಂ ನಿವಾಸ ನವೀಕರಣಕ್ಕೆ ಬರೋಬ್ಬರಿ 45 ಕೋಟಿ ವೆಚ್ಚ ಮಾಡಲಾಗಿದೆ ಎಂದು ಆಪ್‌ ಹಾಗೂ ಕೇಜ್ರಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಸಕ್ಸೇನಾ ವರದಿ ಕೇಳಿದ್ದಾರೆ. ಸಾಮಾನ್ಯರ ಸಿಎಂ ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಿದ್ದ ಕೇಜ್ರಿವಾಲ್‌, ತಮ್ಮ ಮನೆಗೆ 45 ಕೋಟಿ ರು. ವೆಚಚ್ಚದಲ್ಲಿ ನವೀಕರಣ ಮಾಡಿಸಿಕೊಂಡಿದ್ದಾರೆ. ಮನೆಗೆ ಖರೀದಿಸಿದ 8 ಕರ್ಟೈನ್‌ಗಳ ಬೆಲೆ ಕನಿಷ್ಠ 3.57 ಲಕ್ಷ ರು. ಇಂದ 7.94 ಲಕ್ಷ ರು. ಇದೆ. ಅಲ್ಲದೇ ವಿಯೆಟ್ನಾಂನಿಂದ 1.15 ಕೋಟಿ ರು. ಬೆಲೆಯ ಅಮೃತಶಿಲೆ ತರಲಾಗಿದೆ ಎನ್ನಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ 80 ವರ್ಷಗಳಷ್ಟುಹಳೆಯ ಮನೆ ಅಲ್ಲಲ್ಲಿ ಪತನಗೊಳ್ಳುತ್ತಿದ್ದ ಕಾರಣ ಕೇಂದ್ರ ಲೋಕೋಪಯೋಗಿ ಸಚಿವಾಲಯದ ಶಿಫಾರಸಿನ ಅನ್ವಯ ನವೀಕರಣ ಮಾಡಲಾಗಿದೆ ಎಂದು ಆಪ್‌ ಸ್ಪಷ್ಟನೆ ನೀಡಿತ್ತು.
 

click me!