
ಇತ್ತೀಚೆಗಂತೂ ಎಲ್ಲಿ ನೋಡಿದರಲ್ಲಿ ಸೋಶೀಯಲ್ ಮೀಡಿಯಾ ಸ್ಟಾರ್‌ಗಳ ಹಾವಳಿ. ಇವರು ಸಾರ್ವಜನಿಕ ಸ್ಥಳವೆಂಬುವುದನ್ನು ನೋಡದೇ ರೈಲು ಬಸ್‌ಗಳಲ್ಲಿ ಮೆಟ್ರೋ ಇತ್ಯಾದಿ ಸಾರ್ವಜನಿಕ ಸಾರಿಗೆಯಲ್ಲಿ ಡಾನ್ಸ್ ಮಾಡಿ ಇನ್ಸ್ಟಾಗ್ರಾಮ್ ಮುಂತಾದ ಸೋಶಿಯಲ್ ಮೀಡಿಯಾ ಜಾಲತಾಣಗಳಲ್ಲಿ ವಿಡಿಯೋ ಹಾಕುವುದು ಸಾಮಾನ್ಯ ಎನಿಸಿಬಿಟ್ಟಿದೆ. ಕೆಲ ದಿನಗಳ ಹಿಂದೆ ದೆಹಲಿ ಮೆಟ್ರೋ ರೈಲಿನಲ್ಲಿ ಇಬ್ಬರು ಹುಡುಗರು ಹುಡುಗಿಯರ ಡ್ರೆಸ್ ಧರಿಸಿಕೊಂಡು ಬಂದು ಸುದ್ದಿಯಾಗಿದ್ದರು. ಈಗ ಭಾರತೀಯ ರೈಲ್ವೆಗೆ ಸೇರಿದ ರೈಲೊಂದರಲ್ಲಿ ಯುವತಿಯರ ಟೀಮ್ ಒಂದು ಸಖತ್ ಆಗಿ ಡಾನ್ಸ್ ಮಾಡ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು ಎಲ್ಲರ ಸೆಳೆಯುತ್ತಿದೆ.
ಯುವತಿಯರ ಗುಂಪೊಂದು ರೈಲಿನಲ್ಲಿ ಅಪ್ಪರ್ ಬರ್ತ್(Upper Berth), ಲೋವರ್ ಬರ್ತ್ ವಿಂಡೋ ಸೀಟ್‌ಗಳಲ್ಲೆಲ್ಲಾ ಕುಳಿತುಕೊಂಡು ಕುಳಿತಲ್ಲಿಯೇ ಸಖತ್ ಆಗಿ ಡಾನ್ಸ್ ಮಾಡುತ್ತಿದ್ದಾರೆ. ವಿಡಿಯೋದ ಮೊದಲಿಗೆ ಅಪ್ಪರ್ ಬರ್ತ್‌ನಲ್ಲಿ ಮಲಗಿಕೊಂಡೆ ಯುವತಿಯೊಬ್ಬಳು ಡಾನ್ಸ್ ಮಾಡುತ್ತಿದ್ದು, ನಂತರ ಕ್ಯಾಮರಾವೂ ರೈಲಿನ ಪ್ಯಾಸೇಜ್ ಬಳಿ ನಿಂತು ಡಾನ್ಸ್ ಮಾಡುತ್ತಿರುವ ಹುಡುಗಿಯತ್ತ ಹೊರಳುತ್ತದೆ. ನಂತರ ಅಪ್ಪರ್ ಬರ್ತ್‌ನಲ್ಲಿ ಇರುವ ಎಲ್ಲಾ ಹುಡುಗಿಯರತ್ತ ವಾಲುವ ಕ್ಯಾಮರಾ ತಾವಿದ್ದಲ್ಲೇ ಮಾಡುವ ನೃತ್ಯವನ್ನು(Dance) ಸೆರೆ ಹಿಡಿದಿದೆ. ಎಲ್ಲರೂ ಸಖತ್ ಆಗಿ ಡಾನ್ಸ್ ಮಾಡುತ್ತಿದ್ದು, ಕೊನೆಯಲ್ಲಿ ಎಲ್ಲರೂ ಪ್ಯಾಸೇಜ್‌ನಲ್ಲಿ ಸೇರಿ ಬಿಂದಾಸ್ ಆಗಿ ಹೆಜ್ಜೆ ಹಾಕುತ್ತಾರೆ. ಈ ವಿಡಿಯೋ ಈಗ ಟ್ವಿಟ್ಟರ್‌ನಲ್ಲಿ ಸಖತ್ ವೈರಲ್ ಆಗಿದೆ.
ಮೊದಲ ಮಳೆಗೆ ಕುಣಿದು ಕುಪ್ಪಳಿಸಿದ ನಾಯಿ... ವೈರಲ್ ವಿಡಿಯೋ
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ @vaidehihihaha ಎಂಬುವವರು ಅಪ್‌ಲೋಡ್ ಮಾಡಿದ್ದು, ಅವರು ಹೀಗೆ ಬರೆದುಕೊಂಡಿದ್ದಾರೆ, 'ಸಹೋದರ ನನಗೆ ರೈಲಿನಲ್ಲಿ ಡಾನ್ಸ್ ಮಾಡುವುದಿರಲಿ ಜನರೆದುರು ಇನ್ನಲು ಕೂಡ ಸಾಧ್ಯವಿಲ್ಲ' ಎಂದು ಅವರು ಹೇಳಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಯುವತಿಯರ ಆತ್ಮವಿಶ್ವಾಸವನ್ನು ಕೊಂಡಾಡಿದ್ದಾರೆ. ಈ ವಿಡಿಯೋ ನೋಡಿದ ಒಬ್ಬರು ನನಗೆ ಈಗಲೇ ರೈಲಿನಲ್ಲಿ ಪ್ರಯಾಣ ಬೆಳೆಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಮೊದಲಿಗೆ ಮೆಟ್ರೋ ಈಗ ಇದು, ಇದನ್ನು ನೋಡಿದರೆ ರೈಲುಗಳೇ ಇವರ ಗುರಿಯಾಗಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ರೈಲ್ವೆ ಹಾಗೂ ಇತರ ಪ್ರಾಧಿಕಾರಗಳು ಈ ಬಗ್ಗೆ ಕಠಿಣವಾದ ನಿಯಮಗಳನ್ನು ಜಾರಿಗೆ ತಂದು ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಎಲ್ಲರಿಗೂ ತೊಂದರೆ ಮಾಡುವುದನ್ನು ನಿಲ್ಲಿಸಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಸ್ನೇಹಿತರಿದ್ದರೆ ಯಾವ ಪ್ರಯಾಣವಾದರೂ ಸರಿ ಸುಂದರ ಅನುಭವ ನೀಡುತ್ತದೆ. ಕೀಟಲೆಗಳಾದರೂ ಒಳ್ಳೆಯ ಕೆಲಸಗಳಾದರೂ ಜೊತೆಯಲ್ಲಿ ನಾಲ್ಕು ಜನ ಸ್ನೇಹಿತರಿದ್ದರೆ ಹುರುಪು ಜಾಸ್ತಿ. ಅದೇ ರೀತಿ ಇಲ್ಲಿ ಗರ್ಲ್ಸ್ ಗ್ಯಾಂಗ್ ರೈಲಿನಲ್ಲಿ ತಮ್ಮನ್ಯಾರು ನೋಡುತ್ತಿಲ್ಲ ಎಂಬಂತೆ ಬಿಂದಾಸ್ ಆಗಿ ಡಾನ್ಸ್ ಮಾಡುತ್ತಿದ್ದು, ರೈಲಿನಲ್ಲಿದ್ದ ಇತರ ಪ್ರಯಾಣಿಕರನ್ನು ದಿಗ್ಭ್ರಮೆಗೊಳಿಸಿದ್ದಾರೆ. ಈ ವಿಡಿಯೋವನ್ನು 11 ಸೆಕೆಂಡ್‌ಗಳ ಈ ವಿಡಿಯೋವನ್ನು ಮೂರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಜಿಪಿಎಸ್ ನೋಡ್ಕೊಂಡು ಗಾಡಿ ಓಡಿಸಿ ಸಮುದ್ರಕ್ಕಿಳಿಸಿದ ಕುಡುಕಿ: ವಿಡಿಯೋ ವೈರಲ್
ಮತ್ತೆ ಕೆಲವರು ಇವರು ಸಾಮಾನ್ಯ ಹುಡುಗಿಯರಲ್ಲ ಇವರು ಇಂಡಿಯಾ ಗಾಟ್ ಟಾಲೆಂಟ್ (India got talent) ಎಂಬ ರಿಯಾಲಿಟಿ ಶೋದ (Reality Show) ಸೀಸನ್ ಒಂಭತ್ತರ ರನರ್ ಆಫ್ ಆಗಿದ್ದು, ಇಂತಹ ಆತ್ಮವಿಶ್ವಾಸ ಎಲ್ಲರಿಗೂ ಸಾಧ್ಯವಿಲ್ಲ ಎಂದು ಮತ್ತೊಬ್ಬರು ಮಾಹಿತಿ ನೀಡಿದ್ದಾರೆ. ಇವರು ನಾರ್ವೆಯ ಕ್ವಿಕ್ ಸ್ಟೈಲ್ ಡಾನ್ಸರ್‌ಗಳನ್ನು ಫಾಲೋ ಮಾಡುವಂತೆ ಕಾಣುತ್ತಿದೆ. ಇತ್ತೀಚೆಗೆ ಭಾರತಕ್ಕೆ ಆಗಮಿಸಿದ ನಾರ್ವೆಯ ಕ್ವಿಕ್ ಟೀಮ್ ಮುಂಬೈನ ರೈಲುಗಳಲ್ಲಿ ಈ ರೀತಿ ಡಾನ್ಸ್ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ