ಚಾಂದಿಪುರ ವೈರಸ್‌ಗೆ ಮತ್ತೆ ಐವರು ಬಲಿ... ಸಾವಿನ ಸಂಖ್ಯೆ 32ಕ್ಕೆ ಏರಿಕೆ, ಹೆಚ್ಚಿದ ಆತಂಕ

By Kannadaprabha News  |  First Published Jul 22, 2024, 9:10 AM IST

ಚಾಂದಿಪುರ ವೈರಸ್ ತಡೆಗಟ್ಟಲು ರಾಜ್ಯ ಸರ್ಕಾರ ಈಗಾಗಲೇ 1.16 ಲಕ್ಷ ಮನೆಗಳಿಗೆ ಸೋಂಕು ನಿರೋಧಕಗಳನ್ನು ಸಿಂಪಡಣೆ ಮಾಡಿದ್ದು, 19,000 ಸ್ಥಳಗಳಲ್ಲಿ ತಪಾಸಣೆಗಳನ್ನು ನಡೆಸುತ್ತಿದೆ.


ಅಹಮದಾಬಾದ್‌: ಗುಜರಾತ್‌ನಲ್ಲಿ ಕಾಣಿಸಿಕೊಂಡಿರುವ ಚಾಂದಿಪುರ ಸೋಂಕಿಗೆ ಭಾನುವಾರ ಮತ್ತೆ ಐವರು ಮೃತಪಟ್ಟಿದ್ದಾರೆ. ಇದರಿಂದಾಗಿ ಈವರೆಗೆ ಸೋಂಕಿಗೆ ಬಲಿಯಾದವರಸಂಖ್ಯೆ 32ಕ್ಕೆ ಏರಿಕೆಯಾಗಿದೆ. ವಡೋದರಾ, ಮಹಿಸಾಗರ್ ಹಾಗೂಖೇಡಾದಲ್ಲಿ ತಲಾ ಒಂದೊಂದುಹಾಗೂ ಬನಸ್ಕಾಂತಾದಲ್ಲಿ ಇಬ್ಬರು ಸೋಂಕಿಗೆ ಸಾವನ್ನಪ್ಪಿದ್ದಾರೆ. ಇದೇ ವೇಳೆ ಹೊಸದಾಗಿ 13 ಜನರಲ್ಲಿ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 84ಕ್ಕೆ ತಲುಪಿದೆ. 

ಈ ನಡುವೆ ಚಾಂದಿಪುರ ವೈರಸ್ ತಡೆಗಟ್ಟಲು ರಾಜ್ಯ ಸರ್ಕಾರ ಈಗಾಗಲೇ 1.16 ಲಕ್ಷ ಮನೆಗಳಿಗೆ ಸೋಂಕು ನಿರೋಧಕಗಳನ್ನು ಸಿಂಪಡಣೆ ಮಾಡಿದ್ದು, 19,000 ಸ್ಥಳಗಳಲ್ಲಿ ತಪಾಸಣೆಗಳನ್ನು ನಡೆಸುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗುಜರಾತ್, ರಾಜಸ್ಥಾನ ಹಾಗೂಮಧ್ಯ ಪ್ರದೇಶಗಳಿಗೆಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸೂಚನೆ ಹೊರಡಿಸಿದೆ.

Latest Videos

undefined

ಸೋಂಕಿನ ಲಕ್ಷಣಗಳೇನು?

ಚಾಂದಿಪುರ ಸೋಂಕು ಸೊಳ್ಳೆ, ನೊಣೆ, ಉಣ್ಣೆ ಹುಳುವಿನಿಂದ ಹರಡುವ ವೈರಸ್ ಇದಾಗಿದೆ. ಇದಕ್ಕೆ ತುತ್ತಾದವರು ದಿಢೀರ್ ಜ್ವರ, ತೀವ್ರ ತಲೆನೋವು, ವಾಂತಿ, ಸ್ನಾಯು ಸೆಳೆತ, ಪ್ರಜ್ಞಾಹೀನತೆ, ಅರೆನಿದ್ರಾವಸ್ಥೆ ಸೇರಿದಂತೆ ಕೆಲ ಲಕ್ಷಣಗಳು ಈ ರೋಗ ಬಂದವರಲ್ಲಿ ಕಾಣಿಸಿಕೊಳ್ಳುತ್ತದೆ.

ಕೇರಳದಲ್ಲಿ ನಿಫಾ ವೈರಸ್

 

ಕೇರಳದ ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಚಿಕಿತ್ಸೆ ಫಲಿಸದೇ ಭಾನುವಾರ ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ನಿಫಾ ಸೋಂಕಿಗೆ ಈ ವರ್ಷ ಮೊದಲ ಬಲಿಯಾಗಿದೆ.

ನಿಫಾ ವೈರಸ್ ಖಚಿತಗೊಂಡ ಬೆನ್ನಲ್ಲೇ ಕೇರಳದ 14ರ ಬಾಲಕ ಸಾವು, ಕರ್ನಾಟಕದಲ್ಲಿ ಅಲರ್ಟ್!

ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಮಾಹಿತಿ ನೀಡಿದ್ದು,‘ಪಂಡಿಕ್ಕಾಡ್‌ ಮೂಲದ 14 ವರ್ಷದ ಬಾಲಕನಲ್ಲಿ ನಿಫಾ ವೈರಸ್‌ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ತೀವ್ರ ಹೃದಯಾಘಾತದಿಂದ ಬಾಲಕ ಸಾವನ್ನಪ್ಪಿದ್ದಾನೆ’ ಎಂದು ಹೇಳಿದ್ದಾರೆ. ಇನ್ನು ಬಾಲಕನ ಸಂಪರ್ಕದಲ್ಲಿದ್ದ ಪೋಷಕರನ್ನು ಐಸೋಲೆಷನ್ ಮಾಡಲಾಗಿದೆ. ಮೃತ ಬಾಲಕನ ಅಂತ್ಯಕ್ರಿಯೆಯನ್ನು ಮಾರ್ಗಸೂಚಿಗಳ ರೀತಿಯಲ್ಲಿ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಹೇಳಿದೆ.

ಕೇರಳದಲ್ಲಿ ನಿಫಾ ವೈರಸ್‌ ಸೋಂಕಿತ ಬಾಲಕನ ಸಾವು ಮತ್ತು ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಕ್ಕೆ ನೆರವಾಗಲು ಕೇಂದ್ರ ಸರ್ಕಾರ ತಜ್ಞರ ತಂಡವೊಂದನ್ನು ಕಳುಹಿಸಿಕೊಡಲು ನಿರ್ಧರಿಸಿದೆ. ಸಾಂಕ್ರಾಮಿಕ ರೋಗ ಬಗ್ಗೆ ಎಚ್ಚರಿಕೆ ನೀಡಲು ಮತ್ತು ಆ ಬಾಲಕನ ಜೊತೆ ಕಳೆದ 12 ದಿನಗಳಿಂದ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಅವರ ಮಾದರಿಯನ್ನು ಸಂಗ್ರಹಿಸಲು ಹಾಗೂ ತಾಂತ್ರಿಕವಾಗಿ ನೆರವು ನೀಡಲು ಈ ತಂಡ ನೆರವು ನೀಡಲಿದೆ.

ಮಕ್ಕಳಲ್ಲಿ ಕಂಡು ಬರುತ್ತಿದೆ ಚಾಂದಿಪುರ ವೈರಸ್; ಒಂದು ವಾರದಲ್ಲಿ 6 ಕಂದಮ್ಮಗಳ ಸಾವು!

click me!