45 ಗಂಟೆ, 20 ಸಭೆ, 10 ವಿಶ್ವನಾಯಕರ ಭೇಟಿ; ಜಿ20ಯಲ್ಲಿ ಇದು ಪ್ರಧಾನಿ ಮೋದಿ ವೇಳಾಪಟ್ಟಿ!

By Santosh Naik  |  First Published Nov 13, 2022, 10:18 PM IST

ಪ್ರಧಾನಿ ನವೆಂಬರ್ 14 ರಂದು ಇಂಡೋನೇಷ್ಯಾಕ್ಕೆ ತೆರಳಲಿದ್ದು, ನವೆಂಬರ್ 16 ರಂದು ಹಿಂತಿರುಗಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಇದು 17 ನೇ ಜಿ 20 ಶೃಂಗಸಭೆಯಾಗಿದ್ದು, ಸಮಾರೋಪ ಅಧಿವೇಶನದಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಅವರು ಜಿ 20 ಅಧ್ಯಕ್ಷ ಸ್ಥಾನವನ್ನು ಮೋದಿಗೆ ಸಾಂಕೇತಿಕವಾಗಿ ಹಸ್ತಾಂತರಿಸಲಿದ್ದಾರೆ.


ನವದೆಹಲಿ (ನ.13): ನರೇಂದ್ರ ಮೋದಿ ಜಿ20 ಶೃಂಗಸಭೆಗಾಗಿ ಸೋಮವಾರ ಇಂಡೋನೇಷ್ಯಾಕ್ಕೆ ತೆರಳಲಿದ್ದು, ನವೆಂಬರ್‌ 16ಕ್ಕೆ ದೇಶಕ್ಕೆ ವಾಪಸ್‌ ಆಗಲಿದ್ದಾರೆ. ಇಂಡೋನೇಷ್ಯಾದಲ್ಲಿ 45 ಗಂಟೆ ಕಳೆಯಲಿರುವ ಪ್ರಧಾನಿ ನರೇಂದ್ರ ಮೋದಿ ಈ ವೇಳೆ 10 ವಿಶ್ವ ನಾಯಕರನ್ನು ಅಧಿಕೃತವಾಗಿ ಭೇಟಿ ಮಾಡಲಿದ್ದಾರೆ. ಮೋದಿ ವೇಳಾಪಟ್ಟಿ ಎಷ್ಟು ನಿಬಿಡವಾಗಿದೆಯೆಂದರೆ, ಇಂಡೋನೇಷ್ಯಾದಲ್ಲಿ ಇದ್ದ 45 ಗಂಟೆಗಳಲ್ಲಿ ಅವರು 10 ವಿಶ್ವ ನಾಯಕರ ಭೇಟಿ ಮಾತ್ರವಲ್ಲದೆ, 20 ಅಧಿಕೃತ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅದರೊಂದಿಗೆ ಇನ್ನೂ ಕೆಲವು ಭೇಟಿಗಳು ನಿಗದಿಯಾಗಬಹುದು ಎಂದು ವರದಿಯಾಗಿದೆ. ಪ್ರಧಾನಿ ಸೋಮವಾರ (ನವೆಂಬರ್ 14) ಇಂಡೋನೇಷ್ಯಾಕ್ಕೆ ತೆರಳಲಿದ್ದು, ನವೆಂಬರ್ 16 ರಂದು ಭಾರತಕ್ಕೆ ಹಿಂತಿರುಗಲಿದ್ದಾರೆ. ಇದು 17 ನೇ ಜಿ 20 ಶೃಂಗಸಭೆಯಾಗಿದ್ದು, ಸಮಾರೋಪ ಅಧಿವೇಶನದಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಅವರು ಜಿ 20 ಅಧ್ಯಕ್ಷ ಸ್ಥಾನವನ್ನು ಮೋದಿಗೆ ಸಾಂಕೇತಿಕವಾಗಿ ಹಸ್ತಾಂತರ ಮಾಡುವ ಕಾರ್ಯಕಮ ಇರಿಸಿಕೊಂಡಿದ್ದಾರೆ.

ಈ ವರ್ಷದ ಜಿ20 ಥೀಮ್‌ನಲ್ಲಿ ಕೆಲವು ವಿಶ್ವ ನಾಯಕರ ಭೇಟಿ ಹಾಗು ಮಾತುಕತೆಯೊಂದಿಗೆ ಮೂರು ಕಾರ್ಯ ಅವಧಿಗಳನ್ನು ಕೂಡ ಹೊಂದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇಂಡೋನೇಷ್ಯಾದಲ್ಲಿರುವ ಭಾರತೀಯ ಸಮುದಾಯವನ್ನ ತಲುಪುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಯವರ ಕಾರ್ಯಕ್ರಮ ಕೂಡ ನೆರವೇರಲಿದೆ.

ಭಾರತವು ಔಪಚಾರಿಕವಾಗಿ ಡಿಸೆಂಬರ್ 1, 2022 ರಿಂದ ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಬಾಲಿ ಶೃಂಗಸಭೆಯ ಸಮಯದಲ್ಲಿ, ಜಿ20 ನಾಯಕರು ಜಾಗತಿಕ ಕಾಳಜಿಯ ಪ್ರಮುಖ ವಿಷಯಗಳ ಕುರಿತು 'ಒಂದಾಗಿ ಚೇತರಿಸಿಕೊಳ್ಳಿ, ಬಲಶಾಲಿಯಾಗಿ ಚೇತರಿಸಿಕೊಳ್ಳಿ (ರಿಕವರ್‌ ಟುಗೆದರ್‌, ರಿಕವರ್‌ ಸ್ಟ್ರಾಂಗರ್‌)' ಎಂಬ ವಿಷಯದ ಅಡಿಯಲ್ಲಿ ವ್ಯಾಪಕವಾಗಿ ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಈ ಹಿಂದೆ ಹೇಳಿದೆ. ಜಿ20 ಶೃಂಗಸಭೆಯ ಅಜೆಂಡಾದ ಭಾಗವಾಗಿ ಮೂರು ಕೆಲಸದ ಅವಧಿಗಳನ್ನು ನಡೆಸಲಾಗುತ್ತದೆ. ಅವುಗಳೆಂದರೆ, ಆಹಾರ ಮತ್ತು ಶಕ್ತಿ ಭದ್ರತೆ; ಆರೋಗ್ಯ ಹಾಗೂ ಡಿಜಿಟಲ್ ರೂಪಾಂತರ.

ಜಿ20 ಶೃಂಗಕ್ಕೆ ಭಾರತ ಬಿಡುಗಡೆ ಮಾಡಿದ ಲೋಗೋದಲ್ಲೂ ಲೋಟಸ್: ನೆಟ್ಟಿಗರು ಏನಂದ್ರು ನೋಡಿ
ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ, ಈ ವಿಚಾರವಾಗಿ ವಿಶ್ವ ನಾಯಕರ ನಿಲುವೇನು ಎಂದು ತಿಳಿದುಕೊಳ್ಳುವ ನಿಟ್ಟಿನಲ್ಲಿ ಈ ಶೃಂಗಸಭೆಯ ಬಹಳ ಪ್ರಮುಖವಾದದ್ದು ಎನ್ನಲಾಗಿದೆ. ಭಾರತ ಸತತವಾಗಿ ಈ ಯುದ್ಧದ ಕುರಿತಾಗಿ ತಟಸ್ಥ ಧೋರಣೆಯನ್ನು ಹೊಂದಿದೆ, ಸಶಸ್ತ್ರ ಸಂಘರ್ಷವನ್ನು ನಿಲ್ಲಿಸಲು ಪ್ರಯತ್ನ ಪಡುತ್ತಿರುವುದಾಗಿ ಹೇಳಿದ್ದು, ಎರಡೂ ಕಡೆಯವರು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದೆ.

Tap to resize

Latest Videos

G20 ಲೋಗೋ ವಿವಾದ, ರಾಜೀವ್ ಅಂದರೆ ಏನು ಗೊತ್ತಾ? ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು?

ಪಿಎಂ ಮೋದಿ ಅವರು ತಮ್ಮ ಹಿಂದಿನ ರಷ್ಯಾ ಭೇಟಿಯ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ "ಇಂದಿನ ಯುಗ ಯುದ್ಧವಲ್ಲ" ಎಂದು ಹೇಳಿದ್ದರು, ಇದನ್ನು ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಕೂಡ ಶ್ಲಾಘನೆ ಮಾಡಿದ್ದವು. ಇನ್ನು ಇಂಡೋನೇಷ್ಯಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಹೇಳಿದ್ದಾರೆ. ಎರಡೂ ರಾಷ್ಟ್ರಗಳು ತಮ್ಮ ಕಾರ್ಯತಂತ್ರದ ದ್ವಿಪಕ್ಷೀಯ ಪಾಲುದಾರಿಕೆಯನ್ನು ವಿಸ್ತರಿಸಲು ನೋಡುತ್ತಿರುವ ಕಾರಣ ಹೊಸ ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಮೋದಿ ನಡುವಿನ ದ್ವಿಪಕ್ಷೀಯ ಸಭೆಯನ್ನು ಮಹತ್ವದ ಭೇಟಿಯಾಗಿ ಪರಿಗಣಿಸಲಾಗಿದೆ.

click me!