ಆದಿಗುರು ಶಂಕರರ ಪುತ್ಥಳಿ ಅನಾವರಣ : ರೂ. 180 ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕು ಸ್ಥಾಪನೆ!

By Suvarna NewsFirst Published Nov 5, 2021, 1:22 PM IST
Highlights

*ಆದಿ ಗುರು ಶಂಕರಾಚಾರ್ಯರ 35 ಟನ್ ತೂಕದ ಪುತ್ಥಳಿ ಅನಾವರಣ 
*180 ರೂ. ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕು ಸ್ಥಾಪನೆ
*ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳನ್ನು ಹೆಮ್ಮೆಯಿಂದ ನೋಡಲಾಗುತ್ತಿದೆ ಎಂದ ಪ್ರಧಾನಿ

ಉತ್ತರಾಖಂಡ(ನ.05): ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi)ಶುಕ್ರವಾರ ಕೇದಾರನಾಥದ ಶಿವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ಆದಿ ಗುರು ಶಂಕಾರಾಚಾರ್ಯರ ಸಮಾಧಿ ಬಳಿ ಶಂಕರಾಚಾರ್ಯರ 12 ಅಡಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ  ಪ್ರಧಾನಮಂತ್ರಿ ಅವರು ಸರಸ್ವತಿ ತಡೆಗೋಡೆ ಆಸ್ಥಾಪತ್  ಮತ್ತು ಘಟ್ಟಗಳು, ಮಂದಾಕಿನಿ ತಡೆಗೋಡೆಯ ಆಸ್ಥಾಪತ್, ತೀರ್ಥ ಪುರೋಹಿತ ಮನೆಗಳು ಮತ್ತು ಮಂದಾಕಿನಿ ನದಿ ದಡದ ಗರುಡ್ ಚಟ್ಟಿ ಸೇತುವೆ ಸೇರಿದಂತೆ  ಪೂರ್ಣಗೊಂಡಿರುವ ಇತರ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿದರು. ಈ ಯೋಜನೆಗಳನ್ನು ರೂ. 130 . ಕೋಟಿಗೂ ಅಧಿಕ ವೆಚ್ಚದಲ್ಲಿ  ಪೂರ್ಣಗೊಳಿಸಲಾಗಿದ್ದು ರೂ. 180 ಕೋಟಿಗೂ ಅಧಿಕ ಮೊತ್ತದ ಬಹುವಿಧದ ಯೋಜನೆಗಳಿಗೆ ಇಂದು  ಮೋದಿ ಶಂಕುಸ್ಥಾಪನೆಯನ್ನೂ ನೆರವೇರಿಸಿದರು.

"

Shankaracharya Statue:ಕೇದಾರನಾಥದಲ್ಲಿನ ಶಂಕರಾಚಾರ್ಯ ಪ್ರತಿಮೆ ಕೆತ್ತಿದ್ದು ಮೈಸೂರು ಶಿಲ್ಪಿ!

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ 'ವರ್ಷಗಳ ಹಿಂದೆ ಈ ಸ್ಥಳವು [ಕೇದಾರನಾಥ] ಕಂಡ ವಿನಾಶವು ಊಹಿಸಲೂ ಅಸಾಧ್ಯವಾಗಿತ್ತು. ಈ ಸ್ಥಳಕ್ಕೆ ಭೇಟಿ ನೀಡಿದ ಜನರು, ನಮ್ಮ ಕೇದಾರ ಧಾಮವನ್ನು ಮತ್ತೆ ಪುನಃಸ್ಥಾಪಿಸಬಹುದೇ ಎಂದು ಸಂದೇಹ ಪಡುತ್ತಿದ್ದರು. ಆದರೆ ನನ್ನೊಳಗಿನ ಧ್ವನಿಯು ಅದನ್ನು  ಪುನರಾಭಿವೃದ್ಧಿ ಮಾಡಿ ವೈಭವದೊಂದಿಗೆ ಮೆರೆಯುವಂತೆ ಮಾಡಬಹುದು ಎಂದು ಹೇಳುತಿತ್ತು' ಎಂದು  ಹೇಳಿದರು.

ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳನ್ನು ಹೆಮ್ಮೆಯಿಂದ ನೋಡಲಾಗುತ್ತಿದೆ!

'ಆಧ್ಯಾತ್ಮ (Spirituality), ಭಾರತೀಯ ತತ್ವಶಾಸ್ತ್ರವು ಮತ್ತು ಧರ್ಮವನ್ನು ಕೇವಲ ಕ್ಷುಲ್ಲಕವಾಗಿ ಕಾಣುವ ಒಂದು ಕಾಲವಿತ್ತು. ಆದರೆ ಭಾರತೀಯ ತತ್ವಶಾಸ್ತ್ರವು ಮಾನವ ಕಲ್ಯಾಣದ ಬಗ್ಗೆ ಮಾತನಾಡುತ್ತದೆ ಮತ್ತು ಜೀವನವನ್ನು ಸಮಗ್ರವಾಗಿ ನೋಡುತ್ತದೆ. ಈ ಸತ್ಯವನ್ನು ಸಮಾಜಕ್ಕೆ ಅರಿವು ಮೂಡಿಸುವ ಕೆಲಸವನ್ನು ಆದಿ ಶಂಕರಾಚಾರ್ಯರು (Adi Shankaracharya) ಮಾಡಿದ್ದರು' ಎಂದು ಮೋದಿ ಹೇಳಿದರು.

ನಮ್ಮ ಸೈನಿಕರು ಭಾರತ ಮಾತೆಯ ರಕ್ಷಾ ಕವಚ : ಯೋಧರೊಂದಿಗೆ ಮೋದಿ ದೀಪಾವಳಿ ಸಂಭ್ರಮ!

ಧಾರ್ಮಿಕ ಅಭಿವೃದ್ಧಿಯ ನಿಟ್ಟಿನಲ್ಲಿ ದೇಶಾದ್ಯಂತ ನಡೆಯುತ್ತಿರುವ ವಿವಿಧ  ಮೂಲಸೌಕರ್ಯ ಯೋಜನೆಗಳ ಕುರಿತು ಮಾತನಾಡಿದ ಅವರು, 'ನಮ್ಮ ಸಾಂಸ್ಕೃತಿಕ ಪರಂಪರೆ, ನಂಬಿಕೆಯ ಕೇಂದ್ರಗಳನ್ನು ಈಗ ಹೆಮ್ಮೆಯಿಂದ ನೋಡಲಾಗುತ್ತಿದೆ. ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರ (Ayodhya Ram Mandir) ನಿರ್ಮಾಣವಾಗುತ್ತಿದೆ. ಅಯೋಧ್ಯೆ ತನ್ನ ವೈಭವವನ್ನು ಮರಳಿ ಪಡೆಯುತ್ತಿದೆ” ಎಂದು ಪ್ರಧಾನಿ ಹೇಳಿದರು.

ಕೇದಾರನಾಥದ ಅಭಿವೃದ್ಧಿ!

ಕೇದಾರನಾಥ ಮತ್ತು ಸುತ್ತಮುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, "ಚಾರ್ ಧಾಮ್ ರಸ್ತೆ ಯೋಜನೆಯಲ್ಲಿ ತ್ವರಿತ ಪ್ರಗತಿಯನ್ನು ಮಾಡಲಾಗುತ್ತಿದೆ, ಭವಿಷ್ಯದಲ್ಲಿ ಭಕ್ತರು ಕೇಬಲ್ ಕಾರ್ (Cable Car) ಮೂಲಕ ಕೇದಾರನಾಥವನ್ನು ತಲುಪಲು ಸಾಧ್ಯವಾಗುತ್ತದೆ, ಈ ಕೆಲಸ ಕೂಡ ಪ್ರಾರಂಭವಾಗಿದೆ. ಸಮೀಪದ ಹೇಮಕುಂಡ್ ಸಾಹಿಬ್‌ಗೆ ಭಕ್ತರಿಗೆ ಸುಲಭವಾಗಿ ಭೇಟಿ ನೀಡಲು ರೋಪ್‌ವೇ (Rope way) ನಿರ್ಮಿಸುವ ಯೋಜನೆಯು ಪ್ರಗತಿಯಲ್ಲಿದೆ" ಎಂದು ತಿಳಿಸಿದರು. 

"

ಜನರ ಮನೆ ಮನೆಗೆ ಹೋಗಿ ಲಸಿಕೆ ಹಾಕಿ : ಪಿಎಂ ಮೋದಿ

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಉತ್ತರಾಖಂಡ ಪ್ರದರ್ಶಿಸಿದ ಶಿಸ್ತನ್ನು ಶ್ಲಾಘಿಸಿ 'ಭೌಗೋಳಿಕ ತೊಂದರೆಗಳ ಹೊರತಾಗಿಯೂ, ಇಂದು ಉತ್ತರಾಖಂಡ ಮತ್ತು ಅದರ ಜನರು 100% ರಷ್ಟು ಮೊದಲ ಡೋಸ್ ಲಸಿಕೆ ಗುರಿಯನ್ನು ಸಾಧಿಸಿದ್ದಾರೆ. ಇದು ಉತ್ತರಾಖಂಡದ ಶಕ್ತಿಯಾಗಿದೆ" ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿಯವರ ಕನಸಿನ ಯೋಜನೆ! 

ಬೆಳಗ್ಗೆ ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಉತ್ತರಾಖಂಡ ಗವರ್ನರ್ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ (ನಿವೃತ್ತ) (Lt. Gen. Gurmit Singh), ಮುಖ್ಯಮಂತ್ರಿ ಪುಷ್ಕರ್ ಸಿಂಗ್  ಧಾಮಿ (Pushkar Singh Dhami) ಮತ್ತು ಅವರ ಸಂಪುಟ ಸಹೋದ್ಯೋಗಿಗಳಾದ ಸುಬೋಧ್ ಉನಿಯಾಲ್ ಮತ್ತು ಗಣೇಶ್ ಜೋಶಿ, ಉತ್ತರಾಖಂಡ ವಿಧಾನಸಭೆ ಸ್ಪೀಕರ್ ಪ್ರೇಮಚಂದ್ ಅಗರ್ವಾಲ್ (Premchand Aggarwal) ಅವರು ಬರಮಾಡಿಕೊಂಡರು. ಸುಮಾರು 35 ಟನ್ ತೂಕದ ಶಂಕರಾಚಾರ್ಯ ಪ್ರತಿಮೆಯ ಕೆಲಸ 2019 ರಲ್ಲಿ ಪ್ರಾರಂಭವಾಗಿತ್ತು. ಕೇದಾರಪುರಿ ಪುನರ್ನಿರ್ಮಾಣವನ್ನು ಪ್ರಧಾನ ಮಂತ್ರಿಯವರ ಕನಸಿನ ಯೋಜನೆ ಎಂದೇ ಪರಿಗಣಿಸಲಾಗಿದೆ. ಹಾಗಾಗಿ ಅದರ ಪ್ರಗತಿಯನ್ನು ನಿಯಮಿತವಾಗಿ ಮೋದಿ ವೈಯಕ್ತಿಕವಾಗಿ ಪರಿಶೀಲಿಸುತ್ತಿದ್ದರು.

ಉತ್ತರಾಖಂಡದ ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿರುವ ಆದಿಗುರು ಶಂಕರಾಚಾರ್ಯರ ಸುಂದರ ಪುತ್ಥಳಿಯನ್ನು ಕೆತ್ತಿದ್ದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj). ಸ್ವತಃ ಪ್ರಧಾನಿ ಕಾರ್ಯಾಲಯವೇ ದೇಶದೆಲ್ಲೆಡೆ ಶಿಲ್ಪಿಗಾಗಿ ಹುಡುಕಾಡಿ, ಕೊನೆಗೆ ಮೈಸೂರಿನ (Mysore) ಕಲಾವಿದನಿಂದ ಈ ಪುತ್ಥಳಿಯನ್ನು ಕೆತ್ತಿಸಿದೆ.  2013ರಲ್ಲಿ ಉತ್ತರಾಖಂಡದಲ್ಲಿ ಭಾರಿ ಪ್ರವಾಹ ಉಂಟಾಗಿ ಕೇದಾರನಾಥದಲ್ಲಿರುವ ಆದಿ ಶಂಕರಾಚಾರ್ಯರ ಸಮಾಧಿ ಕೊಚ್ಚಿಹೋಗಿತ್ತು. ನಂತರ ಅದರ ಮರುನಿರ್ಮಾಣದ ಭಾಗವಾಗಿ ಕೇಂದ್ರ ಹಾಗೂ ಉತ್ತರಾಖಂಡ ಸರ್ಕಾರಗಳು ಜಂಟಿಯಾಗಿ ಕೇದಾರೇಶ್ವರ ದೇವಾಲಯದ ಹಿಂಭಾಗದಲ್ಲಿ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಪುತ್ಥಳಿ ಸ್ಥಾಪಿಸಿವೆ.

click me!