ಎತ್ತಿನ ಮೇಲೆ QR Code: Digital ಕ್ರಾಂತಿಗೆ ಉದಾಹರಣೆ ಎಂದ ನಿರ್ಮಲಾ ಸೀತಾರಾಮನ್!

Suvarna News   | Asianet News
Published : Nov 05, 2021, 11:53 AM ISTUpdated : Aug 04, 2022, 08:20 PM IST
ಎತ್ತಿನ ಮೇಲೆ QR Code: Digital ಕ್ರಾಂತಿಗೆ ಉದಾಹರಣೆ ಎಂದ ನಿರ್ಮಲಾ ಸೀತಾರಾಮನ್!

ಸಾರಾಂಶ

*ಭಿಕ್ಷೆ ಪಡೆಯಲು ಎತ್ತಿನ ಮೇಲೆ QR Code ಅಳವಡಿಕೆ *ಜಾನಪದ ಕಲಾವಿದರನ್ನೂ ಕೂಡ ತಲುಪಿದ  PhonePe  *ಡಿಜಿಟಲ್‌ ಕ್ರಾಂತಿ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ನವದೆಹಲಿ(ನ.5):  ಭಾರತದಲ್ಲಿ ಕೊರೊನಾ ಲಾಕ್‌ಡೌನ್ (Lockdown) ನಂತರ ಡಿಜಿಟಲ್‌ ಪಾವತಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ನಗದು ರೂಪದಲ್ಲಿರುವ ಹಣವನ್ನು ಬಳಸುವ ಬದಲಾಗಿ ಜನರು ಗೂಗಲ್‌ ಪೇ (Google Pay), ಫೋನ್‌ ಪೇ (Phonepay) ಪೇಟಿಎಮ್‌ (Paytm) ನಂತಹ ಡಿಜಿಟಲ್‌ ಪೇಮೆಂಟ್‌ಗಳ  (Digital Payments) ಮೊರೆ ಹೋಗಿದ್ದಾರೆ. ಡೊಡ್ಡ ವ್ಯಾಪಾರಿಗಳಿಂದ ಹಿಡಿದು ಸಣ್ಣ ಪುಟ್ಟ ಅಂಗಡಿಗಳಲ್ಲೂ ಕೂಡ ಈಗ ಡಿಜಿಟಲ್‌ ಪೇಮೆಂಟ್‌ನದ್ದೇ ದರ್ಬಾರ್.‌ ಈ ಮಧ್ಯೆ ಡಿಜಿಟಲ್‌ ಪಾವತಿಯ ಕ್ರಾಂತಿಗೆ ನಿದರ್ಶನವೆಂಬತೆ ಎತ್ತಿನ ತಲೆ ಮೇಲೆ ಕ್ಯೂಆರ್ ಕೋಡ್‌ (QR Code) ಇರುವ ವಿಡಿಯೋವೊಂದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಟ್ವೀಟರ್‌ನಲ್ಲಿ ಶೇರ್‌ ಮಾಡಿದ್ದಾರೆ.  ಭಾರತದಲ್ಲಿ ಹಣಕಾಸು ಪಾವತಿ ವ್ಯವಸ್ಥೆಯಲ್ಲಿನ ಕ್ರಾಂತಿಯನ್ನು ಎತ್ತಿ ಹಿಡಿಯುವ ಜಾನಪದ ಕಲಾವಿದರ  ವೀಡಿಯೊವನ್ನು ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ ಟ್ವೀಟ್‌ ಮಾಡಿ ದೇಶದ  ಡಿಜಿಟಲ್‌ ಪಾವತಿ ಜಾನಪದ ಕಲಾವಿದರನ್ನು (Folk Artist) ತಲುಪುತ್ತಿದೆ ಎಂದು ಹೇಳಿದ್ದಾರೆ.

One Nation One Health ID: ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ಗೆ ಚಾಲನೆ ಕೊಟ್ಟ ಮೋದಿ!

ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ಎತ್ತಿನ ತಲೆಗೆ ಜೋಡಿಸಲಾದ PhonePe QR ಕೋಡ್ ಅನ್ನು ಸ್ಕ್ಯಾ ನ್ (Scan) ಮಾಡುತ್ತಿದ್ದಾರೆ. 30 ಸೆಕೆಂಡ್‌ಗಳ ರೆಕಾರ್ಡಿಂಗ್ ಗಂಗಿರೆದ್ದುಲತಾ/ಗಂಗಿರೆದ್ದುಲ ಸಮುದಾಯಗಳದ್ದಾಗಿದ್ದು, ಕ್ಯೂಆರ್ ಕೋಡ್ ಮೂಲಕ ಹಣ ಪಾವತಿ ಮಾಡುತ್ತಿದ್ದಾರೆ. ಈ ಮೂಲಕ ಡಿಜಿಟಲ್ ಕ್ರಾಂತಿಯು ಜಾನಪದ ಕಲಾವಿದರನ್ನೂ ತಲುಪಿದೆ ಎಂಬುದನ್ನು ಈ ವಿಡಿಯೋ ತೋರಿಸುತ್ತಿದೆ. ಆಂಧ್ರಪ್ರದೇಶ(Andra Pradesh) ಮತ್ತು ತೆಲಂಗಾಣದಲ್ಲಿ (Telangana), ಅಲೆಮಾರಿ ಬುಡಕಟ್ಟು ಜನಾಂಗದ ಗಂಗಿರೆದ್ದುಲವಲ್ಲು (Gangireddulavallu), ಸಂಕ್ರಾಂತಿ ಹಬ್ಬದ ಸಮಯದಲ್ಲಿ ತಮ್ಮ ಸಿಂಗಾರಗೊಂಡ ಗೂಳಿಗಳೊಂದಿಗೆ ಮನೆಗಳಿಗೆ ಭೇಟಿ ನೀಡಿ ಭಿಕ್ಷೆ ಬೇಡುತ್ತ ನಾದಸ್ವರಮ್ (ಸಂಗೀತ ವಾದ್ಯ - Music) ನುಡಿಸುತ್ತಾರೆ ಮತ್ತು ನೃತ್ಯ (Dance) ಮಾಡುತ್ತಾರೆ.

ವಾಟ್ಸಾಪ್ ಮೂಲಕ ಪಾವತಿಸಿದರೆ 51 ರೂ. ಕ್ಯಾಶ್‌ಬ್ಯಾಕ್?

"ಗಂಗಿರೆದ್ದುಲತಾಳ ವೀಡಿಯೊ  ರೆಕಾರ್ಡ್ ಇದಾಗಿದ್ದು, ಇಲ್ಲಿ QR ಕೋಡ್ ಮೂಲಕ ಭಿಕ್ಷೆ ನೀಡಲಾಗುತ್ತಿದೆ! ಭಾರತದ #ಡಿಜಿಟಲ್ ಪಾವತಿಯ ಕ್ರಾಂತಿ, ಜಾನಪದ ಕಲಾವಿದರನ್ನು ತಲುಪುತ್ತಿದೆ" ಎಂದು ಸೀತಾರಾಮನ್ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಜತೆಗೆ ಹೊಲಗಳಲ್ಲಿ ಉಪಯೋಗ ಮಾಡಲಾಗಾದ ಹಳೆಯ ಎತ್ತುಗಳಿಗೆ ಗಂಗಿರೆದ್ದುಲವಾಲ್ಲು ಬಟ್ಟೆ ಹಾಕಿಸಿ, ಹಬ್ಬಗಳ ಸಮಯದಲ್ಲಿ ಮನೆ ಮನೆಗೆ ತೆರಳುತ್ತಾರೆ, ಅವರ ನಾದಸ್ವರಗಳೊಂದಿಗೆ ಪ್ರದರ್ಶನ ನೀಡುತ್ತಾರೆ" ಎಂದು ಸೀತಾರಾಮನ್ ಮಾಹಿತಿ ನೀಡಿದ್ದಾರೆ.

 

 

ಆನ್‌ಲೈನ್ ವಂಚನೆ ನಿಯಂತ್ರಿಸಲು ಭಾರತೀಯ ರೈಲ್ವೇಗೆ ಟ್ರೂಕಾಲರ್ ಸಹಯೋಗ!

ಪ್ರೇಕ್ಷಕರನ್ನು ರಂಜಿಸಲು ಎತ್ತುಗಳಿಗೆ, ನೃತ್ಯ ಮಾಡಲು ಅಥವಾ ಚಮತ್ಕಾರಗಳನ್ನು ಮಾಡಲು ತರಬೇತಿ ನೀಡಲಾಗುತ್ತದೆ. ಸಾಂಪ್ರದಾಯಿಕವಾಗಿ, ಎತ್ತುಗಳಿಗೆ ಪೂಜಾ ಗೊಲ್ಲ ಸಮುದಾಯದ ತಜ್ಞರು (Pooja Golla community) ತರಬೇತಿ ನೀಡುತ್ತಾರೆ. ಅವರು ಎತ್ತುಗಳನ್ನು ಇತರರಿಂದ ಪಡೆದುಕೊಂಡು ಅವುಗಳಿಗೆ ತರಬೇತಿ ನೀಡುತ್ತಾರೆ. ಬೇರೆ ಬೇರೆ ಗ್ರಾಮಗಲ್ಲಿ ಎತ್ತುಗಳನ್ನು ಬಳಸಿ ಪ್ರದರ್ಶನ ನೀಡಿ ಜೀವನೊಪಾಯಕ್ಕೆ ಬೇಕಾದ ಹಣ ಮತ್ತು ಧವಸ ಧಾನ್ಯಗಳನ್ನು ಇವರು ಸಂಪಾದಿಸುತ್ತಾರೆ. ಈಗ ಜನರಿಂದ ಭಿಕ್ಷೆ ಪಡೆಯಲು QR ಬಳಕೆ ಮಾಡಿರುವ ವಿಡಿಯೋ ಎಲ್ಲರ ಗಮನ ಸೆಳೆದಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಈ ವಿಡಿಯೋ ಹಂಚಿಕೊಳ್ಳುವ ಮೂಲಕ ಭಾರತದಲ್ಲಿ ಆಗಿರುವ ಡಿಜಿಟಲ್‌ ಕ್ರಾಂತಿಯ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು