National Youth Day ಯುವ ಭಾರತದತ್ತ ಜಗತ್ತಿನ ಭರವಸೆಯ ನೋಟ: ಯುವಜನೋತ್ಸವದಲ್ಲಿ ಮೋದಿ ಮಾತು

By Suvarna NewsFirst Published Jan 12, 2022, 12:52 PM IST
Highlights
  • ದೇಶದ ಯುವ ಜನತೆಯನ್ನುದ್ದೇಶಿ ಪ್ರಧಾನಿ ನರೇಂದ್ರ ಮೋದಿ ಭಾಷಣ
  • ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಣೆ
  • ದೇಶದ ಯುವಜನಾಂಗ ಕೊಂಡಾಡಿದ ಮೋದಿ, ಯುವಕರಿಗೆ ಮಹತ್ವದ ಸಂದೇಶ

ನವದೆಹಲಿ(ಜ.12):   ಪ್ರಧಾನಿ ನರೇಂದ್ರ ಮೋದಿ(PM Narnedra Modi) ಇಂದು 25ನೇ ರಾಷ್ಟ್ರೀಯ ಯುವಜನೋತ್ಸವ(25th National Youth Festival ) ಉದ್ಘಾಟನೆ ಮಾಡಿದ್ದಾರೆ. ವಿಡೀಯೋ ಕಾನ್ಫೆರನ್ಸ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಮೋದಿ ದೇಶದ ಯುವಜನತೆಯನ್ನುದ್ದೇಶಿ ಮಾತನಾಡಿದ್ದಾರೆ. ಸ್ವಾಮಿ ವಿವೇಕಾನಂದರ(swami vivekananda) 159ನೇ ಜಯಂತಿಯನ್ನು ದೇಶದಲ್ಲಿ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮೋದಿ, ವಿವೇಕಾನಂದರ ಆದರ್ಶ, ಅವರ ಜೀವನ ಪದ್ಧತಿ, ದೇಶದ ಯುವಕರಲ್ಲಿ ಚಿಮ್ಮಿಸಿದ ಚೈತನ್ಯ ನಮಗೆ ದಾರಿದೀಪವಾಗಿದೆ ಎಂದು ಮೋದಿ ಹೇಳಿದ್ದಾರೆ. ಯುವಕರನ್ನು ಹೊಂದಿರುವ ಭಾರತವನ್ನು ಜಗತ್ತು ಭರವಸೆಯಿಂದ ನೋಡುತ್ತಿದೆ.  ಭಾರತದ ಕನಸು, ಚಿಂತನೆ, ಆವಿಷ್ಕಾರ, ಕಾರ್ಯಗಳಲ್ಲಿ ಯುವಕರನ್ನು ಪ್ರತಿನಿಧಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಪುದುಚೇರಿಯಲ್ಲಿ ಆಯೋಜಿಸಿದ 25ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನು ಮೋದಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಉದ್ಘಾಟನೆ ಮಾಡಿದ್ದಾರೆ. ಜನವರಿ 12 ಮತ್ತು 13ರ ಕಾರ್ಯಕ್ರಮಗಳು ವರ್ಚುವಲ್ ಮೊಡ್‌ನಲ್ಲಿ ನಡೆಯಲಿದೆ.. ಒಟ್ಟು   5 ದಿನಗಳವರೆಗೆ ನಡೆಯಲಿರುವ ಯುವಜನೋತ್ಸವ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಬಳಿಕ ಯುವಜನತೆಯನ್ನುದ್ದೇಶಿ ಮೋದಿ ಮಾತನಾಡಿದ್ದಾರೆ. 

Swami Vivekananda 159th Birthday: ಸ್ವಾಮಿ ವಿವೇಕಾನಂದರಿಂದ ಯುವಜನ ಕಲಿಯಬೇಕಾದ 10 ಜೀವನ ಪಾಠಗಳು

ಭಾರತ ಹೆಚ್ಚಿನ ಯುವಕರನ್ನು ಹೊಂದಿದೆ. ಭಾರತದ ಮನಸ್ಸು ಕೂಡ ಯುವಕ, ಭಾರತ ತನ್ನ ಸಾಮರ್ಥ್ಯದಲ್ಲೂ ಯುವ ಶಕ್ತಿಯಾಗಿದೆ, ಭಾರತ ತನ್ನ ಕನಸುಗಳಲ್ಲಿ ಯುವತನ ಹೊಂದಿದೆ. ಭಾರತದ ಚಿಂತನೆಯೂ ಯುವಕರಂತೆ ಇದೆ. ಭಾರತ ಎಂದೂ ಯುವ ದೇಶವಾಗಿದೆ. ಕಾರಣ ಭಾರತ ಯುವಕರಂತೆ ಆಧುನೀಕರಣವನ್ನು, ತಂತ್ರಜ್ಞಾನವನ್ನು ಸ್ವೀಕರಿಸುವ ದೇಶವಾಗಿದೆ. ಭಾರತ  ಪರಿವರ್ತನೆಯನ್ನೂ ಅಂಗೀಕರಿಸದ ದೇಶವಾಗಿದೆ. ಪ್ರಾಚೀನ ಸಂಸ್ಕೃತಿಯೂಲ್ಲೂ ನವೀನತೆಯನ್ನು ಅಳವಡಿಸಿದ ದೇಶ ಭಾರತವಾಗಿದೆ ಎಂದು ಮೋದಿ ಹೇಳಿದ್ದಾರೆ.

ನಮ್ಮ ಸಾವಿರಾರು ವರ್ಷಗಳ ಹಿಂದಿನ ವೇದದಲಲ್ಲಿ ಯುವಕರ ಕುರಿತು ಮಹತ್ವದ ಮಾತನ್ನು ಹೇಳಲಾಗಿದೆ. ಯುವಕರು ನಮ್ಮ ದೇಶದ ಸುಖ ಹಾಗೂ ಸುರಕ್ಷತೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಎಂದು ವೇದದಲ್ಲಿ ಹೇಳಲಾಗಿದೆ. ಹೀಗಾಗಿ ಭಾರತದ ಇತಿಹಾಸದಲ್ಲಿ ಯುವಕರ ಕೊಡುಗೆಯನ್ನು ಇಲ್ಲಿ ಸ್ಮರಿಸಬಹುದು. ದೇಶದ ಹೋರಾಟ, ಬಲಿದಾನ, ದೇಶದ ರಕ್ಷಣೆ, ಸ್ವಯಂ ಸೇವಕ ಸೇವೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಭಾರತದ ಯುವ ಶಕ್ತಿಯ ಕೊಡುಗೆ ಅಪಾರವಾಗಿದೆ ಎಂದು ಮೋದಿ ಹೇಳಿದ್ದಾರೆ.

National Youth Day: ಜಗತ್ತಿನಲ್ಲೇ ಭಾರತ ಶಕ್ತಿಯ ಉತ್ತುಂಗಕ್ಕೇರಲಿದೆ, ವಿವೇಕಾನಂದರ ಭವಿಷ್ಯ ನಿಜವಾಗಿಸೋಣ!

ಭಾರತದ ಸ್ವಾತಂತ್ರ್ಯದಲ್ಲಿ ಕ್ರಾಂತಿಕಾರಿ ಹೋರಾಟದ ಅವಶ್ಯಕತೆ ಇದೆ ಎನಿಸಿದಾಗ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಯುವಕರ ದಂಡೆ ಈ ದೇಶಕ್ಕೆ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಭಾರತದ ಆಧ್ಯಾತ್ಮಕ ಶಕ್ತಿಯ ಅವಶ್ಯಕತೆ ಇದ್ದಾಗ, ಸುಬ್ರಹ್ಮಣ್ಯ ಭಾರತಿಯಿಂದ ಹಿಡಿದು ಅನೇಕರು ಆಧ್ಯಾತ್ಮ ಚಿಂತನೆ ಮೂಲಕ ಸಿದ್ಧಿ ಪಡೆದುಕೊಂಡು ಯವಕರಿಗೆ ಮಾರ್ಗದರ್ಶನ ನೀಡಿದ್ದಾರೆ. ದಾಳಿಕೋರರಿಂದ ಭಾರತದ ಯುವ ಶಕ್ತಿ ಧೈರ್ಯ ಕಳೆದುಕೊಂಡಾಗ, ಭಾರತದ ಮೈಕೊಡವಿ ನಿಲ್ಲಲು, ಭಾರತದ ಗೌರವನ್ನು ಮತ್ತೆ ಸಂಪಾದಿಸಲು ಸ್ವಾಮಿ ವಿವೇಕಾನಂದ ಭಾರತದ ಶಕ್ತಿಯನ್ನು ವಿಶ್ವಕ್ಕೆ ಸಾರಿ ಹೇಳಿದ್ದಾರೆ ಎಂದು ಮೋದಿ ಹೇಳಿದ್ದಾರೆ.

 

Inaugurating the National Youth Festival. Watch. https://t.co/gQTuE89cnx

— Narendra Modi (@narendramodi)

ಭಾರತದಲ್ಲಿ ಎರಡು ಪ್ರಮುಖ ಶಕ್ತಿಗಳಿದೆ. ಒಂದು ಜನಂಖ್ಯೆ, ಮತ್ತೊಂದು ಪ್ರಜಾಪ್ರಭುತ್ವ. ನಮ್ಮ ಜನಶಕ್ತಿ ಸಾಮರ್ಥ್ಯ ನಾವು ಊಹಿಸಿದಕ್ಕಿಂತಲೂ ಮಿಗಿಲಾಗಿದೆ. ನಮ್ಮ ಯುವಶಕ್ತಿಯಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿ ಬಳಸಿಕೊಂಡರೆ ದೇಶದ ಪ್ರಗತಿ ಮಿಂಚಿನಂತೆ ದುಪ್ಪಟ್ಟಲಾಗಲಿದೆ. ಯುವಶಕ್ತಿ ಭವಿಷ್ಯ ಶಕ್ತಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಹೊಸ ವರ್ಷ ಭಾರತ ಯುವಶಕ್ತಿಗೆ ಅತೀ ಮುಖ್ಯ ವರ್ಷವಾಗಿದೆ. ಈ ವರ್ಷ ನೇತಾಜಿ ಸುಭಾಷ್ ಚಂದ್ರ 125ನೇ ಜಯಂತಿ ವರ್ಷವಾಗಿದೆ. 25 ವರ್ಷದ ಬಳಿಕ ಭಾರತ 100ನೇ ವರ್ಷದ ಸ್ವಾತಂತ್ರ ದಿನಾಚರಣೆ ಆಚರಿಸುತ್ತಿದೆ. ದೇಶ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ.  ಭಾರತದ ಯುವ ಶಕ್ತಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ. ಹೊಸ ಅಭಿವೃದ್ಧಿ ಮಾರ್ಗಗಳನ್ನು ಹುಡುಕುತ್ತಿದೆ. ತಂತ್ರಜ್ಞಾನ ಬಳಸಿಕೊಂಡು ದೇಶದ ಪ್ರಗತಿಯಲ್ಲಿ ಅತೀ ದೊಡ್ಡ ಕೊಡುಗೆಯನ್ನು ಯುವಶಕ್ತಿ ನೀಡುತ್ತಿದೆ. ಡಿಜಿಟಲ್ ಪೇಮೆಂಟ್ ಸೇರಿದಂತೆ ಹಲವು ಡಿಜಿಟಲ್ ಇಂಡಿಯಾದಲ್ಲಿ ಯುವಕರ ಕೊಡುಗೆಯನ್ನು ನಾವು ನೆನಪಿಸಿಕೊಳ್ಳಲೇಬೇಕು. ದೇಶದಲ್ಲಿ ಯುವಜನತೆ ಆರಂಭಿಸಿದ ಸ್ಟಾರ್ಟ್ ಆಪ್ ಕಂಪನಿಗಳು ವಿಶ್ವದ ಎಲ್ಲಾ ಸ್ಟಾರ್ಟ್ ಅಪ್ ಕಂಪನಿಗಳಿಂತ ಅಧಿಕವಾಗಿದೆ. ಈ ಎಲ್ಲಾ ಕೊಡುಗೆ ಯುವಜನಾಂಗದ್ದಾಗಿದೆ ಎಂದು ಮೋದಿ ಹೇಳಿದ್ದಾರೆ. 

click me!