Deep Ocean Mission:  ಸೃಷ್ಟಿಯ ರಹಸ್ಯ ಶೋಧನೆಗೆ ಆಳ ಸಮುದ್ರ ಅಧ್ಯಯನ

By Kannadaprabha News  |  First Published Mar 19, 2022, 3:56 AM IST

* ಸಮುದ್ರದಾಳದಲ್ಲಿ ಜೀವಿಗಳ ಉಗಮದ ಶೋಧ

*  ಆಳ ಸಮುದ್ರ ಅಧ್ಯಯನಕ್ಕೆ ಭಾರತ ಸಜ್ಜು

* ಸೃಷ್ಟಿಯ ರಹಸ್ಯ ಶೋಧನೆಗೆ ಈ ಅಧ್ಯಯನ

* ಸರ್ಕಾರದ 4077 ಕೋಟಿ ರು. ಯೋಜನೆ


ನವದೆಹಲಿ(ಮಾ. 19)  ಜೀವನದ ಅಥವಾ ಸೃಷ್ಟಿಯ (origins of life) ಮೂಲ ರಹಸ್ಯಗಳನ್ನು ಭೇದಿಸಲು ಸಮುದ್ರದ ತಳವನ್ನು (Deep Ocean Mission) ಅಧ್ಯಯನ ಮಾಡಲು ಭಾರತ (India) ಸಜ್ಜಾಗಿದ್ದು, ‘ಆಳ ಸಾಗರ ಮಿಷನ್‌’ ಅಡಿಯಲ್ಲಿ ಸಮುದ್ರದ ಮೇಲ್ಮೈನಿಂದ 6,000 ಮೀಟರ್‌ (6 ಕಿ.ಮೀ.) ಆಳದವರೆಗೆ ವಿಜ್ಞಾನಿಗಳು(Scientist) ಶೀಘ್ರದಲ್ಲೇ ಶೋಧ ನಡೆಸಲಿದ್ದಾರೆ.

ಯೋಜನೆಗಾಗಿ 4,077 ಕೋಟಿ ರು. ಮೀಸಲಿಡಲಾಗಿದೆ. ಆರಂಭದಲ್ಲಿ ವಿಜ್ಞಾನಿಗಳು 500 ಮೀಟರ್‌ ಆಳಕ್ಕೆ ಪ್ರಯಾಣಿಸುವ ಮೂಲಕ ಆಳ ಸಮುದ್ರ ಅಧ್ಯಯನಕ್ಕೆ ಅಭಿವೃದ್ಧಿಪಡಿಸುತ್ತಿರುವ ವಿವಿಧ ತಂತ್ರಜ್ಞಾನಗಳನ್ನು ಪರೀಕ್ಷಿಸಲಿದ್ದಾರೆ. ಬಳಿಕ 6 ಕಿ.ಮೀ. ಆಳಕ್ಕೆ ಇಳಿಯಲಿದ್ದಾರೆ.

Tap to resize

Latest Videos

undefined

ಈ ಬಗ್ಗೆ ಪ್ರತಿಕ್ರಿಯಿಸಿರುವ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರವಿಚಂದ್ರನ್‌, ‘ಸೃಷ್ಟಿಯ ಮೂಲದ ಬಗ್ಗೆ ಇನ್ನೂ ಕೆಲ ನಿಗೂಢಗಳಿವೆ. ಸಾಗರದಲ್ಲಿ 4ರಿಂದ 5 ಕಿ.ಮೀ. ಆಳದಲ್ಲಿ ಇರುವ ಜಲ-ಉಷ್ಣ ದ್ವಾರಗಳಲ್ಲಿ ಸೃಷ್ಟಿಆರಂಭವಾಗಿದೆ ಎಂಬ ಸಿದ್ಧಾಂತಗಳಿವೆ. ನಾಲ್ಕೈದು ಕಿಲೋಮೀಟರ್‌ ಆಳದಲ್ಲಿ ಸಂಪೂರ್ಣ ಕತ್ತಲಿದೆ. ಆದರೆ ಅಲ್ಲಿ ಜೀವಂತ ಜೀವಿಗಳಿವೆ. ಹಾಗಾಗಿ ಆ ಆಳದಲ್ಲಿ ಜೀವ ಹೇಗೆ ಹುಟ್ಟುತ್ತದೆ ಎಂದು ಅಧ್ಯಯನ ನಡೆಸಲು ಆಳ ಸಾಗರ ಮಿಷನ್‌ ನೆರವಾಗುತ್ತದೆ’ ಎಂದು ತಿಳಿಸಿದ್ದಾರೆ.

ಆಳ ಸಮುದ್ರ ಮಿಷನ್‌ ಮೂಲಕ ಸಾಗರದಾಳದ ಲೋಹ ಮತ್ತು ಖನಿಜ ಸಮೃದ್ಧಿಯ ಮೂಲವನ್ನು ಪತ್ತೆ ಮಾಡಬಹುದು. ಮುಂದೆ ಅಗತ್ಯವಿದ್ದಾಗ ತಂತ್ರಜ್ಞಾನದ ನೆರವಿನೊಂದಿಗೆ ಸಮುದ್ರಗಣಿಗಾರಿಕೆ ನಡೆಸಬಹುದು ಎಂದು ರವಿಚಂದ್ರನ್‌ ಹೇಳಿದರು.#

NASA JW Telescope: ಭೂಮಿಯಿಂದ 15,00,000 ಕಿ.ಮೀ ದರೂದಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಸ್ಥಿರ!

ಅಧ್ಯಯನ ಏಕೆ?:  ಸೃಷ್ಟಿಯ ಉಗಮದ ಬಗ್ಗೆ ಇನ್ನೂ ಅನೇಕ ಗೊಂದಲ ಅಥವಾ ಪ್ರಶ್ನೆಗಳು ಉಳಿದಿವೆ. ಸಾಗರದ ನಾಲ್ಕೈದು ಕಿಲೋಮೀಟರ್‌ ಆಳದಲ್ಲಿ ಸೃಷ್ಟಿಅಥವಾ ಜೀವಿಯ ಉಗಮವಾಗಿದೆ ಎನ್ನಲಾಗುತ್ತದೆ. ಆದರೆ ಇಷ್ಟುಆಳದಲ್ಲಿ ಸಂಪೂರ್ಣ ಕತ್ತಲಿದೆ. ಹಾಗಾಗಿ ಇಲ್ಲಿ ಜೀವಿಗಳ ಹುಟ್ಟು ಹೇಗೆ ಎಂಬ ಕೌತುಕವನ್ನು ಭೇದಿಸಲು ಭಾರತ ತನ್ನ ಮಹತ್ವಾಕಾಂಕ್ಷೆಯ ಆಳ ಸಾಗರ ಮಿಷನ್‌ ಯೋಜನೆ ಕೈಗೊಳ್ಳುತ್ತಿದೆ. ಇದು ಸಮುದ್ರದಾಳದಲ್ಲಿನ ಖನಿಜಗಳು, ಶಕ್ತಿ ಮತ್ತು ಸಮುದ್ರದೊಳಗಿನ ಜೀವ ವೈವಿಧ್ಯತೆಯ ಬಗ್ಗೆಯೂ ಶೋಧನೆ ನಡೆಸುವ ಉದ್ದೇಶ ಹೊಂದಿದೆ. ಜೊತೆಗೆ ಈ ಮಿಷನ್‌ನ ಮುಖ್ಯ ಉದ್ದೇಶವೆಂದರೆ ಪಾಲಿಮೆಟಾಲಿಕ್‌ ಗಡ್ಡೆಗಳನ್ನು ಅನ್ವೇಷಿಸುವುದು ಮತ್ತು ಅವುಗಳನ್ನು ಹೊರತೆಗೆಯುವುದು. ಇವು ಮ್ಯಾಂಗನೀಸ್‌, ನಿಕಲ…, ಕೋಬಾಲ್ಟ…, ತಾಮ್ರ ಮತ್ತು ಕಬ್ಬಿಣದ ಹೈಡ್ರಾಕ್ಸೈಡ್‌ನಂತಹ ಖನಿಜಗಳಿಂದ ಕೂಡಿದ ಆಲೂಗಡ್ಡೆ ತರಹದ ಗಡ್ಡೆಗಳಾಗಿವೆ. ಇವು ಹಿಂದೂ ಮಹಾಸಾಗರದ ತಳದಲ್ಲಿ ಸುಮಾರು 6,000 ಮೀ ಆಳದಲ್ಲಿ ಹರಡಿಕೊಂಡಿವೆ. ಈ ಲೋಹಗಳನ್ನು ಎಲೆಕ್ಟ್ರಾನಿಕ್‌ ಸಾಧನಗಳು, ಸ್ಮಾರ್ಟ್‌ಫೋನ್‌ಗಳು, ಬ್ಯಾಟರಿಗಳು ಮತ್ತು ಸೌರ ಫಲಕಗಳಲ್ಲಿ ಬಳಸಬಹುದು. ಭಾರತ ಬಾಹ್ಯಾಕಾಶ ಜಗತ್ತಿನಲ್ಲಿಯೂ  ಇಸ್ರೋದ (ISRO) ನೆರವಿನೊಂದಿಗೆ ಹೊಸ ಹೊಸ ಪ್ರಯೋಗ ಮಾಡಿ ಯಶಸ್ಸು ಕಾಣುತ್ತಿದೆ. 

 ಸೆಲ್ಫಿ ಜತೆಗೆ ಬಾಹ್ಯಾಕಾಶದಿಂದ ಮೊದಲ ಚಿತ್ರ ಕಳುಹಿಸಿದ ಜೇಮ್ಸ್ ವೆಬ್ ಟೆಲಿಸ್ಕೋಪ್!: ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು (James Webb Space Telescope) ತನ್ನ ಮೊದಲ ನಕ್ಷತ್ರವನ್ನು ಗುರುತಿಸಿದೆ ಮತ್ತು ಸೆಲ್ಫಿಯನ್ನು ಸೆರೆಹಿಡಿದಿದೆ ಎಂದು ನಾಸಾ ತಿಳಿಸಿತ್ತು.

ಬಾಹ್ಯಾಕಾಶದಿಂದ ಕಳುಹಿಸಲಾದ ಮೊದಲ ಚಿತ್ರವು ಅದ್ಭುತವಾಗಿದ್ದು ಕಪ್ಪು ಹಿನ್ನೆಲೆಯಲ್ಲಿ 18 ಮಸುಕಾದ ಬಿಳಿ ಚುಕ್ಕೆಗಳು, ಎಲ್ಲವೂ HD 84406 ಉರ್ಸಾ ಮೇಜರ್ (Ursa Major) ನಕ್ಷತ್ರಪುಂಜದಲ್ಲಿ ಪ್ರಕಾಶಮಾನವಾದ, ಪ್ರತ್ಯೇಕವಾದ ನಕ್ಷತ್ರವನ್ನು ತೋರಿಸುತ್ತಿವೆ. ಇದು ಒಂದು ಪ್ರಮುಖ ಮೈಲಿಗಲ್ಲು ಪ್ರತಿನಿಧಿಸುತ್ತದೆ. 18 ಚುಕ್ಕೆಗಳನ್ನು ಪ್ರಾಥಮಿಕ ಕನ್ನಡಿಯ 18 ​​ಪ್ರತ್ಯೇಕ ವಿಭಾಗಗಳಿಂದ ಸೆರೆಹಿಡಿಯಲಾಗಿತ್ತು. 

click me!