ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಇಂದು, ಭಾರತದ ಸಾಮರ್ಥ್ಯವು ಹೊಸ ದೃಷ್ಟಿಕೋನದಿಂದ ಹೊರಹೊಮ್ಮುತ್ತಿದೆ ಮತ್ತು ನಮ್ಮ ಮಹಿಳೆಯ ಶಕ್ತಿಯು ಅದರಲ್ಲಿ ಬಹಳ ದೊಡ್ಡ ಪಾತ್ರವನ್ನು ಹೊಂದಿದೆ ಎಂದು ಮೋದಿ ತಮ್ಮ 99ನೇ ಮನ್ ಕೀ ಬಾತ್‌ನಲ್ಲಿ ಹೇಳಿದ್ದಾರೆ.
ನವದೆಹಲಿ (ಮಾರ್ಚ್ 26, 2023): ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬೆಳಗ್ಗೆ 11 ಗಂಟೆಗೆ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮವಾದ ‘ಮನ್ ಕಿ ಬಾತ್’ ನ 99 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮನ್ ಕೀ ಬಾತ್ ಆರಂಭದಲ್ಲಿ ಅಂಗಾಂಗ ದಾನದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ ಮೋದಿ ತಮ್ಮ ದಿವಂಗತ ಕುಟುಂಬ ಸದಸ್ಯರ ಅಂಗಾಂಗಗಳನ್ನು ದಾನ ಮಾಡುವ ಪ್ರಕ್ರಿಯೆಯಲ್ಲಿ ವೈಯಕ್ತಿಕ ಅನುಭವ ಹೊಂದಿರುವ ಜನರೊಂದಿಗೆ ಮಾತನಾಡಿದರು.
"2013 ರಲ್ಲಿ ದೇಶದಲ್ಲಿ 5,000 ಕ್ಕಿಂತ ಕಡಿಮೆ ಅಂಗಾಂಗ ದಾನ ಕೇಸ್‌ಗಳಿದ್ದವು. ಆದರೆ 2022 ರಲ್ಲಿ ಇದು 15,000 ಕ್ಕೂ ಹೆಚ್ಚು ಕೇಸ್‌ಗಳಿಗೆ ಏರಿಕೆಯಾಗಿದೆ" ಎಂದು ಪ್ರಧಾನಮಂತ್ರಿ ತಮ್ಮ ಮಾರ್ಚ್ ತಿಂಗಳ ಹಾಗೂ 2023ರ ಮೂರನೇ ಮನ್ ಕೀ ಬಾತ್ ವೇಳೆ ಹೇಳಿದ್ದಾರೆ.
ಇದನ್ನು ಓದಿ: Mann Ki Baat: ಏಕತಾ ದಿನದ ಸ್ಪರ್ಧೆ ವಿಜೇತ ಚಾಮರಾಜನಗರ ಜಿಲ್ಲೆಯ ಮಂಜುನಾಥ್‌ಗೆ ಪ್ರಧಾನಿ ಮೋದಿ ಶ್ಲಾಘನೆ
ಮಹಿಳೆಯರಿಗೆ ಶ್ಲಾಘನೆ
ಪ್ರಧಾನಮಂತ್ರಿಯವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮಹಿಳೆಯರನ್ನು ಶ್ಲಾಘಿಸಿದ್ದಾರೆ. ಹಾಗೂ "ಉದಯೋನ್ಮುಖ ಭಾರತೀಯ ಶಕ್ತಿಯಲ್ಲಿ ಮಹಿಳಾ ಶಕ್ತಿಯು ಮಹತ್ವದ ಪಾತ್ರವನ್ನು ವಹಿಸುತ್ತಿದೆ" ಎಂದು ಮೋದಿ ಹೇಳಿದ್ದಾರೆ. ನಾಗಾಲ್ಯಾಂಡ್‌ನಲ್ಲಿ 75 ವರ್ಷಗಳಲ್ಲಿ ಮೊದಲ ಬಾರಿಗೆ ಇಬ್ಬರು ಮಹಿಳಾ ಶಾಸಕರು ತಮ್ಮ ಗೆಲುವಿನ ಮೂಲಕ ವಿಧಾನ ಸಭೆಗೆ ಕಾಲಿಟ್ಟಿದ್ದಾರೆ. ಇನ್ನು, ಭಾರತ ಯುಎನ್ ಮಿಷನ್ ಅಡಿಯಲ್ಲಿ ಶಾಂತಿಪಾಲನೆಯಲ್ಲಿ ಮಹಿಳಾ-ಮಾತ್ರ ತುಕಡಿಯನ್ನು ನಿಯೋಜಿಸಿದೆ. ಹೀಗೆ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಇಂದು, ಭಾರತದ ಸಾಮರ್ಥ್ಯವು ಹೊಸ ದೃಷ್ಟಿಕೋನದಿಂದ ಹೊರಹೊಮ್ಮುತ್ತಿದೆ ಮತ್ತು ನಮ್ಮ ಮಹಿಳೆಯ ಶಕ್ತಿಯು ಅದರಲ್ಲಿ ಬಹಳ ದೊಡ್ಡ ಪಾತ್ರವನ್ನು ಹೊಂದಿದೆ ಎಂದು ಮೋದಿ ತಮ್ಮ 99ನೇ ಮನ್ ಕೀ ಬಾತ್‌ನಲ್ಲಿ ಹೇಳಿದ್ದಾರೆ.
ಇನ್ನು, ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಯುದ್ಧ ಘಟಕದಲ್ಲಿ ಕಮಾಂಡ್ ನೇಮಕಾತಿಯನ್ನು ಪಡೆದ ಮೊದಲ ಮಹಿಳಾ ವಾಯುಪಡೆ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಕೆಗೆ ಸುಮಾರು 3,000 ಗಂಟೆಗಳ ಹಾರಾಟದ ಅನುಭವವಿದೆ. ಅದೇ ರೀತಿ ಭಾರತೀಯ ಸೇನೆಯ ಕ್ಯಾಪ್ಟನ್ ಶಿವ ಚೌಹಾಣ್ ಅವರು ಸಿಯಾಚಿನ್‌ನಲ್ಲಿ ನೇಮಕಗೊಂಡ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಅವರು ವಂದೇ ಭಾರತ್‌ನ ಮೊದಲ ಮಹಿಳಾ ಲೋಕೋ ಪೈಲಟ್ ಕೂಡ ಆಗಿದ್ದಾರೆ ಎಂದೂ ಮೋದಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: Mann Ki Baat: ಹಲವು ದೇಶಗಳಲ್ಲಿ ಕೋವಿಡ್ ಕೇಸ್ ಹೆಚ್ಚುತ್ತಿದೆ; ಎಚ್ಚರವಾಗಿರಿ ಎಂದು ನಮೋ ಸಲಹೆ
ನವೀಕರಿಸಬಹುದಾದ ಇಂಧನದ ಮೇಲಿನ ಜಾಗತಿಕ ಗಮನದ ಬಗ್ಗೆಯೂ ಮಾತನಾಡಿದ ಪ್ರಧಾನಿ ಮೋದಿ, “ಮಹಾರಾಷ್ಟ್ರದ ಪುಣೆಯಲ್ಲಿ, ಅಂತಹ ಒಂದು ಅತ್ಯುತ್ತಮ ಪ್ರಯತ್ನವು ನನ್ನ ಗಮನವನ್ನು ಸೆಳೆದಿದೆ. ಹಾಗೆ, ದಿಯು ಎಲ್ಲಾ ಹಗಲು ವೇಳೆಯ ಅಗತ್ಯಗಳಿಗಾಗಿ 100% ಶುದ್ಧ ಶಕ್ತಿಯನ್ನು ಬಳಸುತ್ತಿರುವ ಭಾರತದ ಮೊದಲ ಜಿಲ್ಲೆಯಾಗಿದೆ.
ಫೆಬ್ರವರಿ 26 ರಂದು ಕಡೆಯ 'ಮನ್ ಕಿ ಬಾತ್' ಕಾರ್ಯಕ್ರಮವು ಫೆಬ್ರವರಿ 26 ರಂದು ಪ್ರಸಾರವಾಗಿತ್ತು. ಇನ್ನು, ಏಪ್ರಿಲ್ 30 ರಂದು ಪ್ರಸಾರವಾಗಲಿರುವ 'ಮನ್ ಕಿ ಬಾತ್' ನ 100 ನೇ ಸಂಚಿಕೆಯ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಲು ಶಿಕ್ಷಣ ಸಚಿವಾಲಯ (MoE) ಈ ವಾರದ ಆರಂಭದಲ್ಲಿ ಪ್ರಸ್ತಾಪಿಸಿದೆ. ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳಲ್ಲಿ ಮನ್ ಕಿ ಬಾತ್ ಬ್ಯಾನರ್‌ಗಳನ್ನು ಪ್ರದರ್ಶಿಸುವ ಜತೆಗೆ 100ನೇ ಮನ್ ಕೀ ಬಾತ್ ಅನ್ನು ಪ್ರಸಾರ ಮಾಡಲು ಮುಂದಾಗಿದೆ.
ಇದನ್ನೂ ಓದಿ: Mann Ki Baat: ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಬಹುದೊಡ್ಡ ಅವಕಾಶ: ಪ್ರಧಾನಿ ಮೋದಿ