ಅಯೋಧ್ಯೆ ಅಭಿವೃದ್ಧಿ ಪರಿಶೀಲನೆ, ನಾಳೆ 11 ಗಂಟೆಗೆ ಮೋದಿ ವರ್ಚುವಲ್ ಸಭೆ!

By Suvarna NewsFirst Published Jun 25, 2021, 7:45 PM IST
Highlights
  • ಮಂದಿರ ನಿರ್ಮಾಣದ ವೇಳೆ ಕೇಳಿ ಬಂದ ಆರೋಪದ ಬೆನ್ನಲ್ಲೇ ಮೋದಿ ಮೊದಲ ಸಭೆ
  • ಅಯೋಧ್ಯೆ ಮಂದಿರ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನೆ
  • ವರ್ಚುವಲ್ ಸಭೆಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಟ್ರಸ್ಟ್ ಪ್ರಮುಖರು ಭಾಗಿ

ನವದೆಹಲಿ(ಜೂ.25): ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣದಲ್ಲಿ ಅಕ್ರಮ ಎಸಲಾಗಿದೆ. ಭೂಮಿ ಖರೀದಿಯಲ್ಲಿ ಭಾರಿ ಅವ್ಯವಾಹರ ನಡೆದಿದೆ ಅನ್ನೋ ಆರೋಪ ಕೇಳಿ ಬಂದ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿ ಮೊದಲ ಸಭೆ ನಡೆಸಲು ಸಜ್ಜಾಗಿದ್ದಾರೆ. ನಾಳೆ(ಜೂ.26) ಬೆಳಗ್ಗೆ 11 ಗಂಟೆ ಮೋದಿ ರಾಮ ಮಂದಿರ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫೆರನ್ಸ್ ಮೂಲಕ ರಾಮ ಮಂದಿರ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಮೋದಿ ವಿಡಿಯೋ ಕಾನ್ಫೆರನ್ಸ್‌ನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ 13 ಮಂದಿ ಈ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ಶ್ರೀಲಂಕಾದಲ್ಲಿ ಸೀತೆ ಇದ್ದ ವನದ ಕಲ್ಲು ಅಯೋಧ್ಯೆ ರಾಮ ಮಂದಿರಕ್ಕೆ ಆಮದು!

1,200 ಏಕರೆ ವೇದಿಕ ನಗರ, ಪರಿಕ್ರಮ ಮಾರ್ಗ, ರಾಮ ಮಂದಿರ ಸುತ್ತಲಿನ ನಗರ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಕುರಿತು ಮೋದಿ ಪರಿಶೀಲನೆ ನಡೆಸಲಿದ್ದಾರೆ.  ಮಂದಿರ ನಿರ್ಮಾಣ ಟ್ರಸ್ಟ್ ಸದಸ್ಯರು ಕಾನ್ಫೆರೆನ್ಸ್‌ನಲ್ಲಿ ಅಭಿವೃದ್ಧಿ ಕಾರ್ಯಗಳ ಲೆಕ್ಕಪತ್ರಗಳ ವಿವರಣೆ ನೀಡಲಿದ್ದಾರೆ.

5 ನಿಮಿಷ, 2 ಕೋಟಿಯಿಂದ 18 ಕೋಟಿ: ರಾಮಮಂದಿರ ಜಮೀನು ಖರೀದಿಯಲ್ಲಿ ಅಕ್ರಮ ಆರೋಪ!.

ಇತ್ತೀಚೆಗೆ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಖರೀದಿಯಲ್ಲಿ ಅಕ್ರಮ ನಡೆದಿದೆ ಅನ್ನೋ ಆರೋಪ ಕೇಳಿಬಂದಿತ್ತು. 2 ಕೋಟಿ ರೂಪಾಯಿ ಮೌಲ್ಯದ ಜಮೀನನ್ನು ರಾಮಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ 18.5 ಕೋಟಿ ರೂಪಾಯಿ ಮೌಲ್ಯಕ್ಕೆ ಖರೀದಿಸಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಆದರೆ ಈ ರೀತಿಯ ಯಾವುದೇ ಅವ್ಯವಾಹರ ನಡೆದಿಲ್ಲ ಎಂದು ಟ್ರಸ್ಟ್ ದಾಖಲೆ ಬಹಿರಂಗ ಪಡಿಸಿತ್ತು. 

ಈ ಆರೋಪಗಳ ಬಳಿಕ ನಡೆಯತ್ತಿರುವ ಮೊದಲ ಸಭೆ ಇದಾಗಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಅಖಾಡಕ್ಕೆ ಇಳಿದಿದ್ದು, ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡಲಿದ್ದಾರೆ.

click me!