
ನವದೆಹಲಿ(ಏ.29): ಕೊರೋನಾ ವೈರಸ್ ಸ್ಥಿತಿಗತಿ, ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಸೇರಿದಂತೆ ಹಲವು ಮಹತ್ವದ ವಿಚಾರ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸಭೆ ಕರೆದಿದ್ದಾರೆ. ನಾಳೆ(ಏ.30) ಬೆಳಗ್ಗೆ 11 ಗಂಟೆಗೆ ಕೇಂದ್ರ ಮಂತ್ರಿ ಮಂಡಲ ಸಭೆ ಕರೆದಿದ್ದಾರೆ.
ಆಕ್ಸಿಜನ್ ಕೊರತೆಗೆ ಮೋದಿ ಪರಿಹಾರ; ಸರ್ಕಾರಿ ಆಸ್ಪತ್ರೆಗಳಲ್ಲಿ 551 ಉತ್ಪಾದಕ ಘಟಕ ಸ್ಥಾಪನೆ!
ವರ್ಚುವಲ್ ಮೀಟಿಂಗ್ ಮಾಡಲಿರುವ ಮೋದಿ, ದೇಶದ ಕೊರೋನಾ ವೈರಸ್ ಸ್ಥಿತಿಗತಿಗಳ ಕುರಿತ ಪರಿಶೀಲನೆ ನಡೆಸಲಿದ್ದಾರೆ. ಕೊರೋನಾ 2ನೇ ಅಲೆ ವಕ್ಕರಿಸಿದ ಬಳಿಕ ಕರೆದ ಮೊದಲ ಮಂತ್ರಿಮಂಡಲ ಸಭೆ ಇದಾಗಿದ್ದು, ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಕೊರೋನಾ ನಿರ್ವಹಿಸಲು ಸೇನೆ ಸಜ್ಜು, ತಯಾರಿ ಪರಿಶೀಲಿಸಿದ ಪಿಎಂ!...
ದೇಶದಲ್ಲಿನ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಭಾರತೀಯ ಸೇನಾ ಪಡೆ ಕೈಗೊಂಡಿರುವ ಕಾರ್ಯಗಳ ಕುರಿತು ಪ್ರಧಾನಿ ಮೋದಿ ಸಭೆ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಫಾರ್ಮಾ ಕಂಪನಿಗಳ ಜೊತೆ ಲಸಿಕೆ ಪೂರೈಕೆ ಕುರಿತು ಸಭೆ ನಡೆಸಲಾಗಿದೆ. ಇದೀಗ ಮಂತ್ರಿ ಮಂಡಲ ಸಭೆ ಈ ನಿಟ್ಟಿನಲ್ಲಿ ಮತ್ತಷ್ಟು ಮಹತ್ವ ಪಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ