ರಾಜ್ಯಗಳಿಗೂ ಕೊರೋನಾ ಲಸಿಕೆ ಲಭ್ಯವಿದೆ/ ದರವನ್ನು ಪ್ರಕಟ ಮಾಡಿದ ಭಾರತ್ ಬಯೋಟೆಕ್/ ಎಲ್ಲರಿಗೂ ಲಸಿಕೆ ನೀಡಬೇಕಾದದ್ದು ಜವಾಬ್ದಾರಿ/ ರಾಜ್ಯ ಸರ್ಕಾರಗಳಿಗೆ ಕೋವ್ಯಾಕ್ಸೀನ್ 400 ರೂ. ಗೆ ಲಭ್ಯವಿದೆ
ನವದೆಹಲಿ (ಏ. 29) ಲಸಿಕೆ ಅಭಿಯಾನ ಆರಂಭವಾಗಿದ್ದು ಮೇ ಆರಂಭದಿಂದ ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಕೆಲ ರಾಜ್ಯ ಸರ್ಕಾರಗಳು ಕೇಂದ್ರವೇ ಲಸಿಕೆಯನ್ನು ಬುಕ್ ಮಾಡಿಕೊಂಡಿದ್ದು ಸಿಗುತ್ತಿಲ್ಲ ಎಂದು ಆರೋಪಿಸಿದ್ದವು.
ಈ ನಡುವೆ ಕೋವ್ಯಾಕ್ಸೀನ್ ತಯಾರಿಕ ಸಂಸ್ಥೆ ಭಾರತ್ ಬಯೋಟೆಕ್ ಮಹತ್ವದ ಸುದ್ದಿಯೊಂದನ್ನು ತಿಳಿಸಿದೆ. ರಾಜ್ಯ ಸರ್ಕಾರಗಳಿಗೆ ಕೋವ್ಯಾಕ್ಸೀನ್ 400 ರೂ. ಗೆ ಲಭ್ಯವಿದೆ ಎಂದು ತಿಳಿಸಿದೆ.
ಲಸಿಕೆ ಹಾಕಿಸದಿದ್ದರೆ ಮೂರನೇ ಅಲೆ ಭೀಕರ
ಜನರ ಆರೋಗ್ಯ ಕಾಪಾಡುವುದು ನಮ್ಮ ಮೊದಲ ಆದ್ಯತೆ ಎಂದಿರುವ ಸಂಸ್ಥೆ ನಾವು ದಿನದ 24 ಗಂಟಯೂ ಕೆಲಸ ಮಾಡುತ್ತೇವೆ ಎಂದು ಹೇಳಿದೆ.
ಇಡೀ ದೇಶ ಸುರಕ್ಷಿತವಾಗಿರಬೇಕು. ಅದನ್ನೇ ನಾವು ಬಯಸುತ್ತಿದ್ದೇವೆ ಎಂದು ಸಂಸ್ಥೆ ಹೇಳಿದೆ. ಪ್ರಪಂಚದಲ್ಲೇ ಅತಿದೊಡ್ಡ ಲಸಿಕಾ ಅಭಿಯಾನಕ್ಕೆ ಭಾರತದಲ್ಲಿ ಚಾಲನೆ ನೀಡಲಾಗಿತ್ತು. ಆದ್ಯತೆ ಮೇರೆಗೆ ಮೊದಲು ಕೊರೋನಾ ವಾರಿಯರ್ಸ್ ಗೆ ನಂತರ ಹಿರಿಯ ನಾಗರಿಕರಿಗೆ ನೀಡಿಕೊಂಡು ಬರಲಾಗಿತ್ತು.
Bharat Biotech - COVAXIN® Announcement - April 29, 2021 pic.twitter.com/RgnROIfUCe
— BharatBiotech (@BharatBiotech)