
ದುಬೈ (ಜುಲೈ 15, 2023): 2 ದಿನಗಳ ಫ್ರಾನ್ಸ್ ಪ್ರವಾಸ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಜುಲೈ 15 ರಂದು ಅಬುಧಾಬಿಗೆ ಆಗಮಿಸಿದರು. ತಮ್ಮ 1 ದಿನದ ಭೇಟಿಯಲ್ಲಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗ್ತಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ದ್ವಿಪಕ್ಷೀಯ ಬಾಂಧವ್ಯವನ್ನು ಪರಿಶೀಲಿಸಲು ನಾಯಕರು ಸಭೆ ನಡೆಸುತ್ತಿದ್ದಾರೆ. ನಿರೀಕ್ಷಿತವಾಗಿ, ಈ ಭೇಟಿಯು ವಿವಿಧ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಪ್ರೇರೇಪಿಸಿದೆ. ಈ ಮಧ್ಯೆ ದುಬೈನ ಬುರ್ಜ್ ಖಲೀಫಾವನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಪ್ರಧಾನಿ ಮೋದಿಯವರ ಭೇಟಿಯನ್ನು ಗುರುತಿಸಲು ವಿಶ್ವದ ಅತಿ ಎತ್ತರದ ಕಟ್ಟಡವು ಭಾರತೀಯ ತ್ರಿವರ್ಣ ಧ್ವಜದಿಂದ ಹಾಗೂ ಮೋದಿ ಫೋಟೋದಿಂದ ಬೆಳಗುತ್ತಿರುವುದನ್ನು ಕ್ಲಿಪ್ ತೋರಿಸುತ್ತದೆ.
ಎಎನ್‌ಐ ಟ್ವಿಟ್ಟರ್ ಈ ವಿಡಿಯೋ ಹಂಚಿಕೊಂಡಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. "ದುಬೈನ ಬುರ್ಜ್ ಖಲೀಫಾ ದೇಶಕ್ಕೆ ಪ್ರಧಾನಿ ಮೋದಿಯವರ ಅಧಿಕೃತ ಭೇಟಿಗೆ ಮುನ್ನ ನಿನ್ನೆ ಭಾರತದ ರಾಷ್ಟ್ರಧ್ವಜದ ಬಣ್ಣಗಳನ್ನು ಪ್ರದರ್ಶಿಸಿದೆ’’ ಎಂದು ಅವರು ಬರೆದಿದ್ದಾರೆ. ಗಗನಚುಂಬಿ ಕಟ್ಟಡವು ಭಾರತೀಯ ಧ್ವಜದ ಬಣ್ಣಗಳಲ್ಲಿ ಹೊಳೆಯುತ್ತಿರುವುದನ್ನು ತೋರಿಸುವ ಮೂಲಕ ಈ ವಿಡಿಯೋ ಆರಂಭವಾಗುತ್ತದೆ. ವಿಡಿಯೋ ಮುಂದುವರಿದಂತೆ, ಇದು ಪ್ರಧಾನಿ ಮೋದಿಯವರ ಚಿತ್ರವನ್ನು ಸಹ ತೋರಿಸುತ್ತದೆ. ಬಳಿಕ, "ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸ್ವಾಗತ" ಎಂಬ ಸಂದೇಶದೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ.
ಇದನ್ನು ಓದಿ: ಪ್ರಧಾನಿ ಮೋದಿಗೆ ಫ್ರಾನ್ಸ್ ವಿಶೇಷ ಗೌರವ: ರಾಣಿ ಎಲಿಜಬೆತ್‌ಗೆ ನೀಡಿದ್ದ ಮ್ಯೂಸಿಯಂನಲ್ಲಿ ಔತಣಕೂಟ; ತ್ರಿವರ್ಣ ಧ್ವಜಕ್ಕೂ ಆದ್ಯತೆ
ಬುರ್ಜ್ ಖಲೀಫಾವನ್ನು ತೋರಿಸುವ ವಿಡಿಯೋವನ್ನು ನೋಡೋಣ:
ಈ ವಿಡಿಯೋವನ್ನು ಕೆಲವು ಗಂಟೆಗಳ ಹಿಂದೆ ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡ ನಂತರ, ಇದು (ಈ ಲೇಖನ ಪ್ರಕಟವಾಗುವವರೆಗೆ) ಒಂದೂವರೆ ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಜೊತೆಗೆ, ಕ್ಲಿಪ್ 6,800 ಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಫ್ರಾನ್ಸ್ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪಾಲ್ಗೊಂಡ ಮೋದಿ, ಗಮನಸೆಳೆದ ವೈಮಾನಿಕ ಪ್ರದರ್ಶನ !
ಪ್ರಧಾನಿ ಮೋದಿಯವರ ಎರಡು ರಾಷ್ಟ್ರಗಳ ಪ್ರವಾಸ
ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಎರಡು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಪ್ಯಾರಿಸ್‌ಗೆ ಎರಡು ದಿನಗಳ ಭೇಟಿಯನ್ನು ಪೂರ್ಣಗೊಳಿಸಿದ ನಂತರ ಅವರು ಯುಎಇಗೆ ಆಗಮಿಸಿದರು. ಫ್ರಾನ್ಸ್‌ನಲ್ಲಿ ಅವರು ಬಾಸ್ಟಿಲ್ ಡೇ ಪರೇಡ್‌ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾದರು ಮತ್ತು ಗೌರವ ಅತಿಥಿಯಾಗಿದ್ದರು.
ಪ್ರಧಾನಿ ಮೋದಿ ತಮ್ಮ ಫ್ರಾನ್ಸ್ ಭೇಟಿಯನ್ನು "ಸ್ಮರಣೀಯ" ಎಂದು ಕರೆದರು, ಅವರು ಬಾಸ್ಟಿಲ್ ಡೇ ಆಚರಣೆಯಲ್ಲಿ ಭಾಗವಹಿಸಿದ್ದು ಹೆಚ್ಚು ಗಮನಾರ್ಹವಾಗಿದೆ ಎಂದು ಹೇಳಿದರು. ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ಫ್ರಾನ್ಸ್ ಜನರಿಗೆ ಅವರ ಆತಿಥ್ಯಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ: ಫ್ರಾನ್ಸ್‌ನಲ್ಲೂ ಭಾರತದ ಯುಪಿಐ ಸೇವೆಗೆ ಚಾಲನೆ
ಇನ್ನು, ಗಲ್ಫ್ ರಾಷ್ಟ್ರಕ್ಕೆ ಆತ್ಮೀಯ ಸ್ವಾಗತಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ ಪ್ರಧಾನಿ ಮೋದಿ, "ಇಂದು ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದ್ದಕ್ಕಾಗಿ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಕೃತಜ್ಞತೆಗಳು" ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ತಮ್ಮ ಎರಡು ದಿನಗಳ ಫ್ರಾನ್ಸ್ ಭೇಟಿಯನ್ನು ಮುಗಿಸಿದ ನಂತರ ಶನಿವಾರ ಮುಂಜಾನೆ ಯುಎಇಗೆ ಪ್ರಯಾಣ ಬೆಳೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ