ತರಕಾರಿ ಬೆಲೆ ಏರಿಕೆಗೆ ''ಮಿಯಾ'' ಮುಸ್ಲಿಂ ವ್ಯಾಪಾರಿಗಳೇ ಕಾರಣ: ಅಸ್ಸಾಂ ಸಿಎಂ

Published : Jul 15, 2023, 02:29 PM ISTUpdated : Jul 15, 2023, 02:31 PM IST
ತರಕಾರಿ ಬೆಲೆ ಏರಿಕೆಗೆ ''ಮಿಯಾ'' ಮುಸ್ಲಿಂ ವ್ಯಾಪಾರಿಗಳೇ ಕಾರಣ: ಅಸ್ಸಾಂ ಸಿಎಂ

ಸಾರಾಂಶ

ಮುಸ್ಲಿಮ್ ತರಕಾರಿ ಮಾರಾಟಗಾರರು ತರಕಾರಿ ಬೆಲೆಗಳನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಶುಕ್ರವಾರ ವಿವಾದ ಹುಟ್ಟುಹಾಕಿದ್ದಾರೆ.

ಹೊಸದಿಲ್ಲಿ (ಜುಲೈ 15, 2023): ಇತ್ತೀಚೆಗೆ ದೇಶದ ಬಹುತೇಕ ಭಾಗಗಳಲ್ಲಿ ತರಕಾರಿ ಮುಂತಾದ ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆ ಉಂಟಾಗಿದೆ. ತರಕಾರಿಗಳ ಬೆಲೆ ಏರಿಕೆಗೆ ‘’ಮಿಯಾ’’ ಮುಸ್ಲಿಂ ಮಾರಾಟಗಾರರೇ ಕಾರಣ ಎಂದು  ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ದೂಷಿಸಿದ್ದಾರೆ. 

ಮುಸ್ಲಿಮ್ ತರಕಾರಿ ಮಾರಾಟಗಾರರು ತರಕಾರಿ ಬೆಲೆಗಳನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಶುಕ್ರವಾರ ವಿವಾದ ಹುಟ್ಟುಹಾಕಿದ್ದಾರೆ. ಮತ್ತು "ಅಸ್ಸಾಮಿ ಜನರು" ತರಕಾರಿಗಳನ್ನು ಮಾರಾಟ ಮಾಡಿದರೆ, ಅವರು ಎಂದಿಗೂ "ತಮ್ಮ ಅಸ್ಸಾಮಿ ಜನರಿಗೆ" ಹೆಚ್ಚು ಶುಲ್ಕ ವಿಧಿಸುವುದಿಲ್ಲ ಎಂದೂ ಹೇಳಿದ್ದಾರೆ. 

ಇದನ್ನು ಓದಿ: ಅಲ್ಪಸಂಖ್ಯಾತರಿಗೆ ಕಿರುಕುಳ ವಿಚಾರ: ಭಾರತ​ದಲ್ಲಿನ ‘ಹುಸೇನ್‌ ಒಬಾಮ’ಗಳ ಮೇಲೆ ಕ್ರಮ; ಅಸ್ಸಾಂ ಸಿಎಂ ಪ್ರತಿಕ್ರಿಯೆ

"ತರಕಾರಿಗಳ ಬೆಲೆಯನ್ನು ಇಷ್ಟು ಹೆಚ್ಚಿಸಿದ ಜನರು ಯಾರು? ಅವರು ಹೆಚ್ಚಿನ ಬೆಲೆಗೆ ತರಕಾರಿಗಳನ್ನು ಮಾರಾಟ ಮಾಡುವ ಮಿಯಾ ವ್ಯಾಪಾರಿಗಳು" ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ದೂಷಿಸಿದ್ದಾರೆ. ಸ್ಥಳೀಯ ಭಾಷೆಯಲ್ಲಿ,  'ಮಿಯಾ' ಅಂದರೆ ಅಸ್ಸಾಂನಲ್ಲಿ ವಾಸಿಸುವ ಬಂಗಾಳಿ ಮಾತನಾಡುವ ಮುಸ್ಲಿಮರು. ಅವರೆಲ್ಲ ಮೂಲತಃ ಬಾಂಗ್ಲಾದೇಶದಿಂದ ವಲಸೆ ಬಂದವರು ಎಂದು ನಂಬಲಾಗಿದೆ. ಅಸ್ಸಾಂ ಮುಖ್ಯಮಂತ್ರಿಯು ಮಿಯಾ ಸಮುದಾಯವನ್ನು "ಅತ್ಯಂತ ಕೋಮುವಾದಿ" ಎಂದು ಆಗಾಗ್ಗೆ ಟೀಕೆ ಮಾಡುತ್ತಿದ್ದಾರೆ. ಅವರು ಅಸ್ಸಾಮಿ ಸಂಸ್ಕೃತಿ ಮತ್ತು ಭಾಷೆಯನ್ನು ವಿರೂಪಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಅವರು 'ಹೊರಗಿನವರು' ಎಂದೂ ಅಸ್ಸಾಂ ಸಿಎಂ ಸೂಚಿಸಿದ್ದಾರೆ.

"ಮಿಯಾ ವ್ಯಾಪಾರಿಗಳು ಗುವಾಹಟಿಯಲ್ಲಿ ಅಸ್ಸಾಮಿ ಜನರಿಂದ ತರಕಾರಿಗಳಿಗೆ ಹೆಚ್ಚಿನ ಬೆಲೆಯನ್ನು ವಸೂಲಿ ಮಾಡುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಅಸ್ಸಾಮಿ ವ್ಯಾಪಾರಿಗಳು ಇಂದು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರೆ, ಅವರು ತಮ್ಮ ಅಸ್ಸಾಮಿ ಜನರಿಂದ ಎಂದಿಗೂ ಹೆಚ್ಚಿನ ಶುಲ್ಕ ವಿಧಿಸುತ್ತಿರಲಿಲ್ಲ" ಎಂದು ಅಸ್ಸಾಂ ಸಿಎಂ ಹೇಳಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ: ಇನ್ನೂ 300 ಮದ್ರಸಾ ಬಂದ್‌ ಆಗುತ್ತೆ: ಅಸಾದುದ್ದೀನ್‌ ಓವೈಸಿಗೆ ಅಸ್ಸಾಂ ಸಿಎಂ ಚಾಲೆಂಜ್‌

ಅಸಾದುದ್ದೀನ್ ಓವೈಸಿ ತಿರುಗೇಟು
ಅಸ್ಸಾಂ ಸಿಎಂ ಆರೋಪಕ್ಕೆ ಶುಕ್ರವಾರ ರಾತ್ರಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ತಿರುಗೇಟು ನೀಡಿದ್ದಾರೆ. ಬಹುಶಃ ಅವರು ತಮ್ಮ ವೈಯಕ್ತಿಕ ವೈಫಲ್ಯಗಳನ್ನು "ಮಿಯಾ ಭಾಯ್" ಮೇಲೆ ದೂಷಿಸುತ್ತಾರೆ ಎಂದೂ ವ್ಯಂಗ್ಯವಾಡಿದ್ದಾರೆ. ಬಿಬಿಸಿ ವರದಿಯ ಟ್ವೀಟ್‌ ಅನನ್ಉ ಉಲ್ಲೇಖಿಸಿ ಟ್ವಿಟ್ಟರ್‌ನಲ್ಲೇ ಅಸ್ಸಾಂ ಸಿಎಂಗೆ ಪ್ರತ್ಯುತ್ತರ ನೀಡಿದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್‌ ಓವೈಸಿ, ಎಮ್ಮೆ ಹಾಲು ಕೊಡದಿದ್ದರೂ ಅಥವಾ ಕೋಳಿ ಮೊಟ್ಟೆ ಇಡದಿದ್ದರೂ ಮಿಯಾಜಿಯನ್ನು ದೂಷಿಸುವ ಇಂತಹ ಮಂಡಲಿ (ಗುಂಪು) ದೇಶದಲ್ಲಿದೆ. ಬಹುಶಃ ಅವರು ತಮ್ಮ 'ವೈಯಕ್ತಿಕ' ವೈಫಲ್ಯಗಳನ್ನು ಮಿಯಾ ಭಾಯಿಯ ಮೇಲೆ 
ಆರೋಪಿಸುತ್ತಾರೆ’’ ಎಂದು ಲೇವಡಿ ಮಾಡಿದ್ದಾರೆ.

  ಪ್ರಧಾನಿ ಮತ್ತು ವಿದೇಶಿ ಮುಸ್ಲಿಮರ ನಡುವೆ ಆಳವಾದ ಸ್ನೇಹವಿದೆ ಎಂದು ಹೇಳಿದರು. "ಟೊಮ್ಯಾಟೊ, ಪಾಲಕ, ಆಲೂಗಡ್ಡೆ ಇತ್ಯಾದಿಗಳನ್ನು ಕೇಳುವ ಮೂಲಕ ನಿರ್ವಹಿಸಿ." ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಗೆ ಪ್ರಧಾನಿಯವರ ಇತ್ತೀಚಿನ ಭೇಟಿಗಳನ್ನು ಉಲ್ಲೇಖಿಸಿ ಅವರು ವ್ಯಂಗ್ಯವಾಡಿದರು.

ಇದನ್ನೂ ಓದಿ: ಬಾಲ್ಯವಿವಾಹಕ್ಕೆ ಬ್ರೇಕ್‌ ಬೆನ್ನಲ್ಲೇ ಬಹುಪತ್ನಿತ್ವ ಬ್ಯಾನ್‌ ಮಾಡಲು ಮುಂದಾದ ಅಸ್ಸಾಂ ಸಿಎಂ

ಅಲ್ಲದೆ, ಮೋದಿಗೂ ವ್ಯಂಗ್ಯವಾಡಿದ ಅಸಾದುದ್ದೀನ್‌ ಓವೈಸಿ,   ಪ್ರಧಾನಿ ಮತ್ತು ವಿದೇಶಿ ಮುಸ್ಲಿಮರ ನಡುವೆ ಆಳವಾದ ಸ್ನೇಹವಿದೆ. "ಟೊಮ್ಯಾಟೊ, ಪಾಲಕ, ಆಲೂಗಡ್ಡೆ ಇತ್ಯಾದಿಗಳನ್ನು ಕೇಳುವ ಮೂಲಕ (ಬೆಲೆ ಏರಿಕೆ) ನಿರ್ವಹಿಸಿ’’ ಎಂದು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಗೆ ಪ್ರಧಾನಿಯವರ ಇತ್ತೀಚಿನ ಭೇಟಿಗಳನ್ನು ಉಲ್ಲೇಖಿಸಿ ವ್ಯಂಗ್ಯವಾದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯುಎಇಗೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಟರ್ಕಿಗೂ ಅಧಿಕೃತ ಪ್ರವಾಸ ಮಾಡಿದ್ದರು. 

ಇದನ್ನೂ ಓದಿ: ಶಾರುಖ್‌ ಖಾನ್‌ ನನಗೆ ಮಧ್ಯರಾತ್ರಿ 2 ಗಂಟೆಗೆ ಕರೆ ಮಾಡಿದ್ರು ಎಂದ ಅಸ್ಸಾಂ ಸಿಎಂ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?