ಭಾರತ-ಅಮೆರಿಕ ನಡುವೆ ಮಹಾ ಒಪ್ಪಂದ: ಬಾಹ್ಯಾಕಾಶ, ರಕ್ಷಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವ

By Kannadaprabha News  |  First Published Jun 23, 2023, 6:50 AM IST

ಪ್ರಧಾನಿ ನರೇಂದ್ರ ಮೋದಿ ಅವರ ಅಮೆ​ರಿಕ ಪ್ರವಾಸ ಭರ್ಜರಿ ಯಶಸ್ಸು ಕಂಡಿದ್ದು, ಎರಡೂ ದೇಶ​ಗಳ ನಡುವೆ ಅನೇಕ ಮಹ​ತ್ವದ ಒಪ್ಪಂದ​ಗ​ಳಿ​ಗೆ ಸಹಿ ಬಿದ್ದಿದೆ. ರಕ್ಷಣೆ, ರಾಜ​ತಾಂತ್ರಿಕ, ವಿಜ್ಞಾನ ಹಾಗೂ ತಂತ​ಜ್ಞಾನ ಹಾಗೂ ಬಾಹ್ಯಾ​ಕಾಶ ಕ್ಷೇತ್ರ​ಗ​ಳಲ್ಲಿ ಈ ಒಪ್ಪಂದ​ಗಳು ಏರ್ಪ​ಟ್ಟಿದೆ.


ವಾಷಿಂಗ್ಟ​ನ್‌: ಪ್ರಧಾನಿ ನರೇಂದ್ರ ಮೋದಿ ಅವರ ಅಮೆ​ರಿಕ ಪ್ರವಾಸ ಭರ್ಜರಿ ಯಶಸ್ಸು ಕಂಡಿದ್ದು, ಎರಡೂ ದೇಶ​ಗಳ ನಡುವೆ ಅನೇಕ ಮಹ​ತ್ವದ ಒಪ್ಪಂದ​ಗ​ಳಿ​ಗೆ ಸಹಿ ಬಿದ್ದಿದೆ. ರಕ್ಷಣೆ, ರಾಜ​ತಾಂತ್ರಿಕ, ವಿಜ್ಞಾನ ಹಾಗೂ ತಂತ​ಜ್ಞಾನ ಹಾಗೂ ಬಾಹ್ಯಾ​ಕಾಶ ಕ್ಷೇತ್ರ​ಗ​ಳಲ್ಲಿ ಈ ಒಪ್ಪಂದ​ಗಳು ಏರ್ಪ​ಟ್ಟಿದ್ದು, ಉಭಯ ದೇಶ​ಗಳ ನಡುವಿನ ಸಂಬಂಧ ಗಟ್ಟಿ​ಗೊ​ಳ್ಳಲು ನಾಂದಿ ಹಾಡಿ​ದೆ. ಭಾರ​ತೀಯ ಕಾಲ​ಮಾನ ಗುರು​ವಾರ ನಸು​ಕಿನ ಜಾವ (ಅ​ಮೆ​ರಿಕ ಕಾಲ​ಮಾನ ಬುಧ​ವಾರ ರಾತ್ರಿ) ಮೋದಿ ಅವ​ರಿಗೆ ಅಮೆ​ರಿ​ಕ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಪತ್ನಿ ಜಿಲ್‌ ಬೈಡೆನ್‌ ಶ್ವೇತ​ಭ​ವ​ನ​ದಲ್ಲಿ ಖಾಸ​ಗಿ ಔತ​ಣ​ಕೂಟ ಏರ್ಪ​ಡಿಸಿ​ದ್ದರು. ಆಗ ಮೋದಿ ಅವರು 80 ವರ್ಷ ಪೂರೈ​ಸಿದ ಬೈಡೆನ್‌ ಅವ​ರಿ​ಗೆ ಸಹ​ಸ್ರ​ಚಂದ್ರ ದರ್ಶನ ಸಂಪ್ರ​ದಾ​ಯದ ಪ್ರತೀ​ಕ​ವಾಗಿ ‘ದ​ಶ​ದಾ​ನ​’​ಗ​ಳನ್ನು ಮೈಸೂ​ರಿನ ಶ್ರೀಗಂಧ​ದಿಂದ ತಯಾ​ರಿ​ಸ​ಲಾದ ಪೆಟ್ಟಿಗೆಯಲ್ಲಿ ಇಟ್ಟು ನೀಡಿ​ದ​ರು.

ಈ ನಡುವೆ, ಗುರು​ವಾರ ಸಂಜೆ ಮೋದಿ ಹಾಗೂ ಬೈಡೆನ್‌ ನಡುವೆ ದ್ವಿಪ​ಕ್ಷೀಯ ಚರ್ಚೆ ಶ್ವೇತ​ಭ​ವ​ನ​ದಲ್ಲಿ ನಡೆ​ಯಿತು. ಮೋದಿ ಅವರಿಗೆ ಸಾಂಪ್ರ​ದಾ​ಯಿ​ಕ​ವಾಗಿ ಈ ವೇಳೆ ಜೋ ಬೈಡೆನ್‌ ಸ್ವಾಗ​ತಿ​ಸಿ​ದರು ಹಾಗೂ ಭಾರ​ತ-ಅಮೆ​ರಿಕ ನಡುವೆ ಹೊಸ ಶಕೆಗೆ ಈ ಭೇಟಿಯು ನಾಂದಿ ಹಾಡ​ಲಿದೆ. ‘2 ಸೂಪರ್‌ ಪವರ್‌ ದೇಶ​ಗಳ, 2 ಮಹಾನ್‌ ಶಕ್ತಿ​ಗಳ ಹಾಗೂ ಇಬ್ಬರು ಸ್ನೇಹಿ​ತರ ಮಹಾ ಸಮ್ಮಿ​ಲ​ನನ ಇದಾ​ಗ​ಲಿ​ದೆ ಎಂದು ಶ್ಲಾಘಿ​ಸಿ​ದ​ರು. ಈ ವೇಳೆ ಹಲವು ಮಹ​ತ್ವದ ಒಪ್ಪಂದ​ಗಳ ಘೋಷಣೆ ಆಯಿ​ತು.

Tap to resize

Latest Videos

ಶ್ವೇತಭವನದ ಆತ್ಮೀಯ ಅತಿಥ್ಯಕ್ಕೆ ವಿಡಿಯೋ ಮೂಲಕ ಪ್ರಧಾನಿ ಮೋದಿ ಧನ್ಯವಾದ!

ಭಾರತದಲ್ಲಿ ಸೆಮಿಕಂಡಕ್ಟರ್‌ ಉತ್ಪಾದನೆಗೆ ಅಮೆರಿಕ ಮೂಲದ ಮೈಕ್ರಾನ್‌ ಕಂಪನಿಯಿಂದ (Micron) ಘಟಕ ಆರಂಭಿಸುವುದು, ಭಾರತದ ಇಸ್ರೋ (Isro) ಹಾಗೂ ಅಮೆರಿಕದ ನಾಸಾ (NASA) ಸೇರಿ 2024ರಲ್ಲಿ ಅಂತರಿಕ್ಷಕ್ಕೆ ಮಾನವಸಹಿತ ಜಂಟಿ ಯಾನ ಕೈಗೊಳ್ಳುವುದು, ಭಾರತದಲ್ಲೇ ಯುದ್ಧವಿಮಾನದ ಎಂಜಿನ್‌ ಉತ್ಪಾದನೆಗೆ ಅಮೆರಿಕವು ಸಂಪೂರ್ಣ ತಂತ್ರಜ್ಞಾನವನ್ನು ನೀಡುವುದು, ಭಾರತದಿಂದ ಅಮೆರಿಕಕ್ಕೆ ತೆರಳುವ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಗೆ ಅನುಕೂಲವಾಗುವಂತೆ ಎಚ್‌1ಬಿ ವೀಸಾ ನಿಯಮಗಳನ್ನು ಸಡಿಲಗೊಳಿಸುವುದು, ಅಮೆರಿಕದಿಂದ ಭಾರತಕ್ಕೆ ಅತ್ಯಂತ ಸುಧಾರಿತ ಡ್ರೋನ್‌ಗಳನ್ನು (Drone) ಪೂರೈಸುವುದು ಸೇರಿದಂತೆ ಹಲವು ಒಪ್ಪಂದಗಳು ಏರ್ಪಟ್ಟವು.

ಏನೇನು ಒಪ್ಪಂದ?

ಭಾರ​ತ​ದಲ್ಲಿ ಚಿಪ್‌ ಉತ್ಪಾ​ದ​ನೆ

ಗುಜರಾತ್‌ನಲ್ಲಿ ಸೆಮಿಕಂಡಕ್ಟರ್‌ (ಚಿ​ಪ್‌​) ಜೋಡಣೆ ಮತ್ತು ಪರೀಕ್ಷಾ ಘಟಕ ಅರಂಭಿಸುವುದಾಗಿ ಅಮೆರಿಕ ಮೂಲದ ಮೈಕ್ರಾನ್‌ ಟೆಕ್ನಾಲಜಿ ಘೋಷಣೆ. 22,540 ಕೋಟಿ ರು. ಬಂಡವಾಳ ಹೂಡಿಕೆ

ನಾಸಾ-ಇಸ್ರೋ​ ಅಂತರಿಕ್ಷ ಯಾನ

ಭಾರ​ತ-ನಾಸಾ ಅಂತ​ರಿಕ್ಷ ಒಪ್ಪಂದ. ಇದ​ರಿಂದಾಗಿ ನಾಸಾ-ಇಸ್ರೋದಿಂದ 2024ರಲ್ಲಿ ಅಂತ​ರಿಕ್ಷ ಕೇಂದ್ರಕ್ಕೆ ಮಾನ​ವ​ಸ​ಹಿತ ಜಂಟಿ ಯಾನ. ಅಲ್ಲದೆ, ಇನ್ನು ಜಂಟಿ​ಯಾ​ಗಿ ವಿವಿಧ ಬಾಹ್ಯಾ​ಕಾಶ ಅನ್ವೇ​ಷ​ಣೆ

ಭಾರ​ತ​ದಲ್ಲೇ ಯುದ್ಧ ವಿಮಾನ ಎಂಜಿನ್‌

ಸ್ವದೇಶಿ ತೇಜಸ್‌ ಯುದ್ಧ​ವಿ​ಮಾ​ನ​ಗ​ಳಿಗೆ ಭಾರ​ತ​ದಲ್ಲೇ ಇನ್ನು ಎಫ್‌ 414 ಎಂಜಿನ್‌ ಉತ್ಪಾ​ದನೆ. ಇದ​ಕ್ಕಾಗಿ ಬೆಂಗ​ಳೂ​ರಿನ ಎಚ್‌​ಎ​ಎಲ್‌ ಹಾಗೂ ಅಮೆರಿಕದ ಜಿಇ ಏರೋಸ್ಪೇಸ್‌ ಒಪ್ಪಂದ

ಶ್ವೇತಭವನದಲ್ಲಿ ಮೋದಿ, ಬೈಡನ್ ಜಂಟಿ ಸುದ್ದಿಗೋಷ್ಠಿ, ಬೆಂಗಳೂರಿನಲ್ಲಿ ಕೌನ್ಸಿಲರ್ ಘಟಕ ಸ್ವಾಗತಿಸಿದ ಪ್ರಧಾನಿ!

ಎಚ್‌1ಬಿ ವೀಸಾ ನಿಯಮ ಸಡಿ​ಲ

ಎಚ್‌1ಬಿ ವೀಸಾ ನವೀ​ಕ​ರ​ಣಕ್ಕೆ ಭಾರ​ತೀ​ಯ ಟೆಕ್ಕಿ​ಗಳು ಸ್ವದೇ​ಶಕ್ಕೇ ಹೋಗ​ಬೇಕು ಎಂಬ ನಿಮಯ ಬದಲು. ಅಮೆ​ರಿ​ಕ​ದಲ್ಲೇ ಇದ್ದು ವೀಸಾ ನವೀ​ಕ​ರಣ ಸಾಧ್ಯ. ಇದ​ರಿಂದ 4.42 ಲಕ್ಷ ಟೆಕ್ಕಿ​ಗ​ಳಿಗೆ ಅನು​ಕೂ​ಲ


ಅತ್ಯಾ​ಧು​ನಿಕ ಡ್ರೋನ್‌ ಖರೀ​ದಿ

ಅಮೆರಿಕದಿಂದ ಅತ್ಯಾಧುನಿಕ ಎಂಕ್ಯು-9 ರೀಪರ್‌ ಸಶಸ್ತ್ರ ಡ್ರೋನ್‌ ಖರೀದಿಗೆ ಭಾರತ ಒಪ್ಪಂದ. ಈ ಡ್ರೋನ್‌​ಗಳು ಹಳೆ​ಯ ಡ್ರೋನ್‌​ಗ​ಳಿ​ಗಿಂತ 9 ಪಟ್ಟು ಹೆಚ್ಚು ಬಲ​ಶಾಲಿ, 500 ಪಟ್ಟು ಹೆಚ್ಚು ಪೇಲೋ​ಡ್‌ ಹೊತ್ತೊಯ್ಯುವ ಸಾಮರ್ಥ್ಯ


ಬೆಂಗಳೂರು, ಅಹ್ಮದಾಬಾದ್‌ನಲ್ಲಿ ಅಮೆರಿಕದ ದೂತಾವಾಸ 

ವಾಷಿಂಗ್ಟನ್‌: ಉಭಯ ದೇಶಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಅಹಮದಾಬಾದ್‌ಗಳಲ್ಲಿ ಅಮೆರಿಕದ ದೂತಾವಾಸ ತೆರೆಯಲು ಹಾಗೂ ಸಿಯಾಟಲ್‌ನಲ್ಲಿ ಭಾರತದ ದೂತವಾಸ ಕಚೇರಿಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಈ ಕುರಿತು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದ​ರಿಂದಾಗಿ ಕರ್ನಾ​ಟ​ಕದ ಜನ​ರಿಗೆ ಇನ್ನು ಬೆಂಗ​ಳೂ​ರಿ​ನಲ್ಲೇ ಅಮೆ​ರಿ​ಕದ ವೀಸಾ ಪಡೆ​ಯಲು ಸಾಧ್ಯವಾಗಲಿದೆ. ಈವ​ರೆಗೆ ಕನ್ನ​ಡಿ​ಗರು ಅಮೆ​ರಿ​ಕದ ವೀಸಾಗೆ ಚೆನ್ನೈಗೆ ಅಥವಾ ಹೈದರಾಬಾದ್‌ಗೆ ಹೋಗ​ಬೇ​ಕಿ​ತು.

click me!