PM Modi visit ನೇಪಾಳ ಭೇಟಿಗೂ ಮೊದಲು ಚೀನಾಗೆ ಟಕ್ಕರ್ ನೀಡಿದ ಪ್ರಧಾನಿ ಮೋದಿ, ಒಂದೇ ಕಲ್ಲಿಗೆ 2 ಹಕ್ಕಿ!

Published : May 13, 2022, 07:37 PM IST
PM Modi visit ನೇಪಾಳ ಭೇಟಿಗೂ ಮೊದಲು ಚೀನಾಗೆ ಟಕ್ಕರ್ ನೀಡಿದ ಪ್ರಧಾನಿ ಮೋದಿ, ಒಂದೇ ಕಲ್ಲಿಗೆ 2 ಹಕ್ಕಿ!

ಸಾರಾಂಶ

ಬುದ್ಧ ಪೂರ್ಣಿಮೆ ದಿನ ನೇಪಾಳಕ್ಕೆ ಮೋದಿ ಭೇಟಿ ಚೀನಾ ನಿರ್ಮಿತ ವಿಮಾನ ನಿಲ್ದಾಣದಲ್ಲಿ ಇಳಿಯಲ್ಲ ಮೋದಿ ನೇಪಾಳ ಸಂಬಂಧ ಗಟ್ಟಿ, ಚೀನಾಗೆ ಸ್ಪಷ್ಟ ಸಂದೇಶ  

ನವದೆಹಲಿ(ಮೇ.13): ಪ್ರಧಾನಿ ನರೇಂದ್ರ ಮೋದಿ ಮೇ.16 ರಂದು ನೇಪಾಳಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯಲ್ಲಿ ಶತ್ರು ಚೀನಾಗೆ ಸ್ಪಷ್ಟ ಸಂದೇಶದ ಜೊತೆಗೆ ನೇಪಾಳ ಜೊತೆಗಿನ ಸಂಬಂಧ ಗಟ್ಟಿ ಮಾಡಲು ಮೋದಿ ನಿರ್ಧರಿಸಿದ್ದಾರೆ. ಹೌದು, ನೇಪಾಳ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಚೀನಾ ನಿರ್ಮಿತ ಗೌತಮ ಬುದ್ಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯದಿರಲು ನಿರ್ಧರಿಸಿದ್ದಾರೆ. ಈ ಮೂಲಕ ಚೀನಾಗೆ ಸೈಲೆಂಟ್ ಆಗಿ ಟಕ್ಕರ್ ನೀಡಿದ್ದಾರೆ. 

ಬುದ್ಧ ಪೂರ್ಣಿಮೆ ದಿನವಾದ ಮೇ 16ರಂದು ಪ್ರಧಾನಿ ನರೇಂದ್ರ ಮೋದಿ ಬುದ್ಧನ ಜನ್ಮಸ್ಥಳವಾದ ಲುಂಬಿನಿಗೆ ಅಧಿಕೃತವಾಗಿ ಭೇಟಿ ನೀಡಲಿದ್ದಾರೆ . ಪಾಳದ ಪ್ರಧಾನಿ ಶೇರ್‌ ಬಹದ್ದೂರ್‌ ದೇಬಾ ಅವರ ಆಮಂತ್ರಣದ ಮೇರೆಗೆ ಮೋದಿ ಅವರು ಭೇಟಿ ನೀಡುತ್ತಿದ್ದಾರೆ. ಲುಂಬಿನಿಯಿಂದ 19 ಕಿಲೋಮೀಟರ್ ದೂರದಲ್ಲಿರುವ ಬುದ್ಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾವನ್ನು ಚೀನಾ ನಿರ್ಮಿಸಿದೆ. ಹೀಗಾಗಿ ಈ ನಿಲ್ದಾಣದಲ್ಲಿ ಇಳಿಯದೇ, ಲುಂಬಿನಿಯಲ್ಲಿ ಯುನೆಸ್ಕೋ ನಿರ್ಮಿಸಿರುವ ಹೆಲಿಪ್ಯಾಡ್‌ನಲ್ಲಿ ಇಳಿಯುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿದೆ.

ನೇಪಾಳದಲ್ಲಿ ಆರ್ಥಿಕ ಬಿಕ್ಕಟ್ಟು: ಚಿನ್ನ, ಕಾರು ಆಮದಿಗೆ ಬ್ರೇಕ್, ವಾರಕ್ಕೆ 2 ದಿನ ರಜೆಗೆ ಚಿಂತನೆ!

ಈ ಹೆಲಿಪ್ಯಾಡ್‌ನಿಂದ ಮೋದಿ ರಸ್ತೆ ಮಾರ್ಗವಾಗಿ ಲುಂಬಿನಿಗೆ ತೆರಳಲಿದ್ದಾರೆ. ಇದರಿಂದ ಮೋದಿ ಒಟ್ಟು ಪ್ರಯಾಣ ದೂರ ಹೆಚ್ಚಾಗಲಿದೆ. ಆದರೆ ಉದ್ದೇಶಪೂರ್ವಕವಾಗಿ ಚೀನಾಗೆ ಸ್ಪಷ್ಟ ಸಂದೇಶ ನೀಡಲು ಮೋದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ.

2014ರಿಂದ ಇದು ಮೋದಿ ಅವರ 5ನೇ ನೇಪಾಳ ಭೇಟಿಯಾಗಿದೆ. ಈ ಭೇಟಿಯ ವೇಳೆ ಅವರು ಮಾಯಾದೇವಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನೇಪಾಳ ಸರ್ಕಾರ ಮತ್ತು ಲುಂಬಿನಿ ಅಭಿವೃದ್ಧಿ ಟ್ರಸ್ಟ್‌ ಏರ್ಪಡಿಸಿರುವ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಆವರು ಭಾಷಣ ಮಾಡಲಿದ್ದಾರೆ. ದೆಹಲಿಯ ಅಂತಾರಾಷ್ಟ್ರೀಯ ಬುದ್ದಿಶ್‌್ಟಕಾನ್ಫೆಡರೇಶನ್‌ಗೆ ಸೇರಿದ ಜಾಗದಲ್ಲಿ ಸಂಸ್ಕೃತಿ ಮತ್ತು ಪರಂಪರೆ ಕೇಂದ್ರ ಸ್ಥಾಪನೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಚೀನಾ ಜೊತೆ ಸಖ್ಯ ಬೆಳೆಸಿದ ನೇಪಾಳ ನೇರವಾಗಿ ಭಾರತದ ವಿರುದ್ಧವೇ ತಿರುಗಿ ಬಿದ್ದಿತ್ತು. ಗಡಿ ವಿಚಾರದಿಂದ ಆರಂಭಗೊಂಡ ನೇಪಾಳದ ಖ್ಯಾತೆ, ರಾಮನ ಜನ್ಮಸ್ಥಳ ಸೇರಿದಂತೆ ಹಲವು ವಿಚಾರಗಳನ್ನು ಕೆದಕಿ ಭಾರತವನ್ನು ಕುಟುಕುವ ಪ್ರಯತ್ನವನ್ನು ಚೀನಾ ಮಾಡಿತ್ತು. 

Economic Crisis ಚೀನಾ ಸಂಗ ಬೆಳೆಸಿದ ರಾಷ್ಟ್ರಗಳಲ್ಲಿ ಆರ್ಥಿಕ ಬಿಕ್ಕಟ್ಟು, ಶ್ರೀಲಂಕಾ ಬಳಿಕ ಇದೀಗ ನೇಪಾಳ!

ಗಡಿ ವಿಚಾರವಾಗಿ ಕ್ಯಾತೆ ತೆಗೆದಿದ್ದ ನೇಪಾಳದ ಅಂದಿನ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು 4 ತಿಂಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಸ್ವಾತಂತ್ರ್ಯ ದಿನಕ್ಕೆ ಶುಭಾಶಯ ಕೋರಿದ್ದರು. ಭಾರತ ಗಡಿಯಲ್ಲಿ 80 ಕಿ.ಮೀ. ಉದ್ದದ ಸೇತುವೆಯನ್ನು ನಿರ್ಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನೇಪಾಳ ಸರ್ಕಾರ, ಭಾರತದ ಭೂ ಭಾಗವನ್ನು ಒಳಗೊಂಡ ನಕ್ಷೆಯೊಂದನ್ನು ಬಿಡುಗಡೆ ಮಾಡಿತ್ತು. ಇದು ಉಭಯ ದೇಶಗಳ ಮಧ್ಯೆ ವಿವಾದಕ್ಕೆ ಕಾರಣವಾಗಿತ್ತು.  

ಕಳೆದ 4 ತಿಂಗಳ ಅವಧಿಯಲ್ಲಿ ಮೋದಿ ಹಾಗೂ ಒಲಿ ಅವರ ನಡುವಿನ ಮೊದಲ ನೇರ ಸಂಭಾಷಣೆ ಇದಾಗಿದೆ. ಈ ವೇಳೆ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲಾಯಿತೇ ಎಂಬುದು ತಿಳಿದುಬಂದಿಲ್ಲ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!