ಬಿಹಾರ: ತಮ್ಮ ಮದುವೆಯನ್ನು ಇತರ ಎಲ್ಲಾ ಮದುವೆಗಳಿಗಿಂತ ಭಿನ್ನವಾಗಿಸಲು ವಧು ವರರು ಏನೇನೋ ಹರ ಸಾಹಸ ಮಾಡುತ್ತಾರೆ. ಈಗ ವಿಭಿನ್ನವಾಗಿ ಮದುವೆಯಾಗವುದು ಒಂದು ಟ್ರೆಂಡ್ ಆಗಿದ್ದು, ಅದರಂತೆ ಬಿಹಾರದಲ್ಲಿ ಮದುವೆಯನ್ನು ವಿಭಿನ್ನವಾಗಿಸಲು ವಧುವೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಸಂಭ್ರಮದ ಭಾಗವಾಗಿ ಗುಂಡು ಹಾರಿಸುವುದು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಚಾಲ್ತಿಯಲ್ಲಿದೆ. ಈ ಸಂಪ್ರದಾಯದಿಂದ ಈ ಹಿಂದೆ ಕೆಲವರು ಗಾಯಗೊಂಡಿದ್ದು, ಮತ್ತೆ ಕೆಲವು ಪ್ರಕರಣಗಳಲ್ಲಿ ಮೃತಪಟ್ಟಿದ್ದು ಕೂಡ ನಡೆದಿದೆ. ಗಾಳಿಯಲ್ಲಿ ಗುಂಡು ಹಾರಿಸುವುದು ಕಾನೂನು ಬಾಹಿರ ಎಂಬುದು ತಿಳಿದಿದ್ದರು ಜನ ಮಾತ್ರ ತಮ್ಮ ಈ ಆಚರಣೆಯನ್ನು ಬಿಡಲು ಸಿದ್ಧರಿಲ್ಲ.
ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ವಧುವೊಬ್ಬರು ಮದುವೆ ಮಂಟಪದಿಂದಲೇ ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಿಹಾರದ ಖಗರಿಯಾ ಜಿಲ್ಲೆಯ ಭರತ್‌ಖಂಡ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಎಂಜಿನಿಯರ್ ಮಹಮ್ಮದ್ ಆಸಿಫ್ ಅವರ ಮದುವೆ ಆರತಕ್ಷತೆ ಮೇ. 10 ರಂದು ನಿಗದಿಯಾಗಿತ್ತು. ಮದುವೆ ವೇಳೆ ವಧು ವೇದಿಕೆಯಿಂದಲೇ ಗಾಳಿಯಲ್ಲಿ ಗುಂಡು ಹಾರಿಸುತ್ತಾಳೆ. ಈ ವೇಳೆ ವರ ನಗುತ್ತಿರುವ ದೃಶ್ಯವಿದೆ.
ರಾಣಿಯಂತೆ ಎಂಟ್ರಿ ಕೊಟ್ಟ ವಧು: ವಿಡಿಯೋ ವೈರಲ್
ಈ ಮದುವೆ ಸಮಾರಂಭದಲ್ಲಿ ವಧು ಹಾಗೂ ವರನ ಸಂಬಂಧಿಗಳೆಲ್ಲರೂ ಉಪಸ್ಥಿತರಿದ್ದರು. ವಧುವಿಗೆ ಗುಂಡು ಹಾರಿಸಲು ಓರ್ವ ಬಂಧು ಸಹಾಯ ಮಾಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ವೇದಿಕೆಯಲ್ಲಿರುವ ಸಣ್ಣ ಮಕ್ಕಳ ಬಗ್ಗೆ ಕೂಡ ಕೇರ್ ಮಾಡದೇ ದಂಪತಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಜೋಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಗುಂಡು ಹಾರಿಸುವ ವಧು ಎಂದು ಅನೇಕರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
ಮದುವೆಯ ಅನೇಕ ವಿಡಿಯೋಗಳು ವೈರಲ್ ಆಗಿರುವುದನ್ನು ನೀವು ಈಗಾಗಲೇ ನೋಡಿರಬಹುದು. ಮದುವೆಯ ವಿಡಿಯೋಗಳು ಬಹುತೇಕ ಮೋಜಿನಿಂದ ಕೂಡಿರುತ್ತದೆ. ವಧು ವರರು ಡಾನ್ಸ್ ಮಾಡುವುದು, ಅವರ ಸ್ನೇಹಿತರು ಕೀಟಲೆ ಮಾಡುವುದು, ದಿಬ್ಬಣ ಬಂದವರು ಅಥವಾ ಮದುವೆಗೆ ಬಂದ ಇನ್ನಾರೋ ಕುಡಿದು ತೂರಾಡುತ್ತಾ ಬಿಟ್ಟಿ ಮನೋರಂಜನೆ ನೀಡುವುದು ಹೀಗೆ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಹಲವು ವಿಡಿಯೋಗಳು ವೈರಲ್ ಆಗಿರುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಮದುವೆಯಲ್ಲಿ ವಧು ವರರು ಪರಸ್ಪರ ಸರಿಯಾಗಿ ಕಪಾಳಕ್ಕೆ ಬಾರಿಸಿಕೊಂಡಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುತ್ತಿದೆ.
ಗೆಳೆಯನಿಗೆ ಹೂ ಹಾರ ಹಾಕಲು ಬಿಡದ ಸ್ನೇಹಿತರು : ವಧು ಏನ್ಮಾಡಿದ್ಲು ನೋಡಿ
ಮದುವೆಗೆ ಬಂದವರು ಮದುವೆ ಗಂಡು ಹಾಗೂ ಹೆಣ್ಣಿನ ಈ ಹೊಸ ಅವಾತರ ನೋಡಿ ಗಾಬರಿಗೊಳಗಾಗಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ವಧು ವರರು ಪರಸ್ಪರ ಹಾರ ಬದಲಾಯಿಸಿದ ನಂತರ ಈ ಘಟನೆ ನಡೆದಂತಿದೆ. ವರ ಆಗಲೇ ಸಿಟ್ಟಿನಿಂದ ಮೂಕ ಊದಿಸಿಕೊಂಡು ಕ್ಯಾಮರಾದತ್ತ ನೋಡುತ್ತಿದ್ದಾನೆ. ಆತನಿಗೆ ಏಕೆ ಕೋಪ ಬಂದಿದೆ ಎಂಬುದು ತಿಳಿದಿಲ್ಲ. ಆದರೆ ಕೋಪವಂತೂ ಬಂದಿದೆ. ಇದೇ ಸಮಯಕ್ಕೆ ಸರಿಯಾಗಿ ವಧು ಆತನಿಗೆ ಲಾಡು ತಿನ್ನಿಸುವ ಸಲುವಾಗಿ ಆತನ ಬಾಯಿಯ ಬಳಿ ಲಾಡನ್ನು ಹಿಡಿದಿದ್ದಾಳೆ. ಆದರೆ ಕೋಪದಲ್ಲೇ ದುರುಗುಟ್ಟುತ್ತಿರುವ ಪತಿ ಲಾಡನ್ನು ತಿನ್ನುವುದಿಲ್ಲ. ಇದರಿಂದ ಸಿಟ್ಟಿಗೆದ್ದ ವಧು ಆತನ ಮುಖಕ್ಕೆ ಲಡ್ಡನ್ನು ಹುಡಿ ಮಾಡಿ ಉಜ್ಜಿದ್ದಾಳೆ.
ಮೊದಲೇ ಸಿಟ್ಟಿನಲ್ಲಿದ್ದ ಪತಿರಾಯ ಇದರಿಂದ ರೊಚ್ಚಿಗೆದ್ದಿದ್ದು ಆಕೆಯ ಕಪಾಳಕ್ಕೆ ರಫ್ ಎಂದು ಬಾರಿಸಿದ್ದಾನೆ. ವಧು ಕೂಡ ತಿರುಗಿ ಆತನ ಕಪಾಳಕ್ಕೆ ಸರಿಯಾಗೇ ಕೊಟ್ಟಿದ್ದು, ಇಬ್ಬರು ಸರಣಿಯಲ್ಲಿ ಕಪಾಳಕ್ಕೆ ಬಾರಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ