Buddha purnima 2022 ಬುದ್ಧ ಪೂರ್ಣಿಮೆಯಲ್ಲಿ ಭಾಗಿಯಾಗಲು ಇಂದು ಪ್ರಧಾನಿ ಮೋದಿ ನೇಪಾಳಕ್ಕೆ!

Published : May 16, 2022, 04:20 AM IST
Buddha purnima 2022 ಬುದ್ಧ ಪೂರ್ಣಿಮೆಯಲ್ಲಿ ಭಾಗಿಯಾಗಲು ಇಂದು ಪ್ರಧಾನಿ ಮೋದಿ ನೇಪಾಳಕ್ಕೆ!

ಸಾರಾಂಶ

ಬುದ್ಧನ ಜನ್ಮಸ್ಥಳ ಲುಂಬಿನಗೆ ಪ್ರಧಾನಿ ಮೋದಿ  ಮಾಯಾದೇವಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ  ನೇಪಾಳದ ಪ್ರಧಾನಿ ಜೊತೆ ಮಹತ್ವದ ಚರ್ಚೆ  

ನವದೆಹಲಿ(ಮೇ.16): ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬುದ್ಧಪೂರ್ಣಿಮೆಯಂದು ಬುದ್ಧ ಜನಿಸಿದ ಸ್ಥಳವಾದ ನೇಪಾಳದ ಲುಂಬಿನಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಮಾತನಾಡಿದ ಪ್ರಧಾನಿ ಭಾರತವು ನೇಪಾಳದೊಂದಿಗೆ ಅಪೂರ್ವ ಸಂಬಂಧವನ್ನು ಹೊಂದಿದೆ ಎಂದು ಭಾನುವಾರ ಹೇಳಿದ್ದಾರೆ. ಬುದ್ಧ ಜಯಂತಿಯಂದು ಮೋದಿ ಮಾಯಾದೇವಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದು, ಬೌದ್ಧ ಸಂಸ್ಕೃತಿ ಹಾಗೂ ಪರಂಪರೆಯ ಅಂತಾರಾಷ್ಟ್ರೀಯ ಕೇಂದ್ರದ ಶಿಲಾನ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ನೇಪಾಳದ ಪ್ರಧಾನಿ ಶೇರ್‌ ಬಹಾದ್ದೂರ್‌ ದೇವುಬಾ ಅವರೊಂದಿಗೆ ಜಲವಿದ್ಯುತ್‌, ಸಂಪರ್ಕ ಕ್ಷೇತ್ರದ ಅಭಿವೃದ್ಧಿಗಾಗಿ ಎರಡೂ ದೇಶಗಳ ನಡುವಿನ ಸಹಕಾರ ವಿಸ್ತರಣೆಯ ಕುರಿತು ಚರ್ಚೆ ನಡೆಸುವುದಾಗಿ ಮೋದಿ ಹೇಳಿದ್ದಾರೆ.

2014ರಿಂದ ಇದು ಮೋದಿ ಅವರ 5ನೇ ನೇಪಾಳ ಭೇಟಿಯಾಗಿದೆ. ಈ ಭೇಟಿಯ ವೇಳೆ ಅವರು ಮಾಯಾದೇವಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನೇಪಾಳ ಸರ್ಕಾರ ಮತ್ತು ಲುಂಬಿನಿ ಅಭಿವೃದ್ಧಿ ಟ್ರಸ್ಟ್‌ ಏರ್ಪಡಿಸಿರುವ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಆವರು ಭಾಷಣ ಮಾಡಲಿದ್ದಾರೆ. ದೆಹಲಿಯ ಅಂತಾರಾಷ್ಟ್ರೀಯ ಬುದ್ದಿಶ್‌್ಟಕಾನ್ಫೆಡರೇಶನ್‌ಗೆ ಸೇರಿದ ಜಾಗದಲ್ಲಿ ಸಂಸ್ಕೃತಿ ಮತ್ತು ಪರಂಪರೆ ಕೇಂದ್ರ ಸ್ಥಾಪನೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

WHO ಸುಧಾರಿಸುವ, ಬಲಪಡಿಸುವ ಅಗತ್ಯವಿದೆ, ಪ್ರಮುಖ ಪಾತ್ರವಹಿಸಲು ಭಾರತ ಸಿದ್ಧ, ಪ್ರಧಾನಿ ಮೋದಿ!

ಯೋಗ ದಿನಕ್ಕೆ ಮೋದಿ ಆಗಮನ ಹಿನ್ನೆಲೆ ಸಿದ್ಧತೆ ಆರಂಭ
ಈ ಬಾರಿಯ ಜೂ. 21ರ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುವ ಹಿನ್ನೆಲೆ ಯೋಗನಗರಿ ಮೈಸೂರಿನಲ್ಲಿ ಸಿದ್ಧತೆ ಭರದಿಂದ ಸಾಗಿದೆ.2022ನೇ ಸಾಲಿನ ವಿಶ್ವ ಯೋಗ ದಿನದ ಪೋಸ್ಟರ್‌ ಹಾಗೂ ಬ್ಯಾನರ್‌ ಬಿಡುಗಡೆ ಕಾರ್ಯಕ್ರಮವು ಮೈಸೂರು ಯೋಗ ಫೆಡರೇಶನ್‌ ವತಿಯಿಂದ ಮೇ 15ರಂದು ನರಸಿಂಹಸ್ವಾಮಿ ದೇವಾಲಯದಲ್ಲಿ ಜರುಗಲಿದೆ. ಭಾನುವಾರ ಬೆಳಗ್ಗೆ 6 ಗಂಟೆಯಿಂದ 7.30ರವರೆಗೆ ನಡೆಯುವ ವಿಶ್ವ ಯೋಗ ದಿನದ ಪೋಸ್ಟರ್‌ ಹಾಗೂ ಬ್ಯಾನರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಮೈಸೂರಿನ ಎಲ್ಲಾ ಯೋಗ ಸಂಸ್ಥೆಗಳು ಪಾಲ್ಗೊಳ್ಳಲಿವೆ.ಇದೇ ವೇಳೆ ಅಂತಾರಾಷ್ಟ್ರೀಯ ಯೋಗ ದಿನದ ಶಿಷ್ಟಾಚಾರದ ಬಗ್ಗೆ ಜನರಿಗೆ ಅರಿವು ಮೂಡಿಸಿ, ತರಬೇತಿ ನೀಡಲು ಯೋಗ ತರಬೇತುದಾರರನ್ನೂ ತಯಾರಿ ಮಾಡಲಾಗುತ್ತದೆ.

ಸರ್ಕಾರಿ ಯೋಜನೆ ಎಲ್ಲರಿಗೂ ತಲುಪಿದಾಗ ತುಷ್ಟೀಕರಣ ರಾಜಕೀಯ ಸ್ತಬ್ಧ: ಮೋದಿ
ಸರ್ಕಾರದ ಯೋಜನೆಗಳ ಲಾಭ ಎಲ್ಲ ಶೇ.100ರಷ್ಟುಫಲಾನುಭವಿಗಳಿಗೆ ತಲುಪಿದಾಗ ಮಾತ್ರ ರಾಜಕೀಯ ತುಷ್ಟೀಕರಣ ನಿಲ್ಲಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗುಜರಾತ್‌ನ ಭರೂಚ್‌ ಜಿಲ್ಲೆಯಲ್ಲಿ ಸರ್ಕಾರಿ ಯೋಜನೆಗಳ ಲಾಭವು ಶೇ.100ರಷ್ಟುಜನರಿಗೆ ತಲುಪಿದ ನಿಮಿತ್ತ ನಡೆದ ‘ಉತ್ಕರ್ಷ ಸಮಾರೋಹ’ದಲ್ಲಿ ವರ್ಚುವಲ್‌ ಮೂಲಕ ಮಾತನಾಡಿದ ಮೋದಿ, ‘ಯೋಜನೆಗಳ ಲಾಭ ಎಲ್ಲರಿಗೂ ತಲುಪಿದರೆ ಆಗ ತಾರತಮ್ಯ ಅಂತ್ಯವಾಗುತ್ತದೆ. ಇಲ್ಲದೇ ಹೋದರೆ ನಿರ್ದಿಷ್ಟವರ್ಗದ ಜನತೆಗೆ ಯೋಜನೆಗಳ ಲಾಭ ತಲುಪಿಸಲು ತುಷ್ಟೀಕರಣ ರಾಜಕೀಯ ನಡೆಯುತ್ತದೆ. ಆದರೆ ಭರೂಚ್‌ನಲ್ಲಿ ಎಲ್ಲ ಫಲಾನುಭವಿಗಳು ಯೋಜನೆಯ ಲಾಭ ಪಡೆದಿರುವುದು ಸಂತಸ ತಂದಿದೆ’ ಎಂದರು.

'ಉತ್ಕರ್ಷ್ ಸಮಾರೋಹ್‌'ನಲ್ಲಿ ದೃಷ್ಟಿಹೀನ ಯುವಕನ ಮಾತಿಗೆ ಭಾವುಕರಾದ ಪ್ರಧಾನಿ ಮೋದಿ!

ದೇಶದ್ರೋಹ ಕಾನೂನು ಮರುಪರಿಶೀಲನೆ: ಕೇಂದ್ರ
ದೇಶದ್ರೋಹ ಕಾಯ್ದೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಜಾಗೊಳಿಸುವಂತೆ ಶನಿವಾರದವರೆಗೂ ವಾದ ಮಂಡಿಸಿ ಆ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ ಈಗ ದಿಢೀರ್‌ ತನ್ನ ನಿಲುವು ಬದಲಿಸಿಕೊಂಡಿದೆ. ಕಾಯ್ದೆಯ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು