Ganga Expressway:36,230 ಕೋಟಿ ರೂ. ಮೌಲ್ಯದ ಯೋಜನೆಗೆ ಮೋದಿ ಶಿಲಾನ್ಯಾಸ!

By Suvarna News  |  First Published Dec 18, 2021, 8:39 AM IST

* ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ

* ದೇಶದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಮೋದಿ ಶಿಲಾನ್ಯಾಸ

* 36,230 ಕೋಟಿ ರೂ.. ಮೌಲ್ಯದ 594 ಕಿ.ಮೀ ಉದ್ದದ ರಸ್ತೆ


ಲಕ್ನೋ(ಡಿ.18): ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ (Uttar Pradesh) ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿಯಿಂದ (Prime Minister Narendra Modi) ರಾಜ್ಯದ ಜನತೆಗೆ ಭರ್ಜರಿ ಉಡುಗೊರೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ಇಂದು ಪ್ರಧಾನಿಯವರು ಗಂಗಾ ಎಕ್ಸ್‌ಪ್ರೆಸ್‌ವೇಗೆ (Ganga Expressway) ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ದೇಶದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಲಿದೆ. 594 ಕಿ.ಮೀ ಉದ್ದದ ರಸ್ತೆ ನಿರ್ಮಿಸಲು ಸುಮಾರು 36,230 ಕೋಟಿ ರೂ ತಗುಲಿದೆ.

ಗಂಗಾ ಎಕ್ಸ್‌ಪ್ರೆಸ್‌ವೇಗೆ ಯೋಗಿ ಆದಿತ್ಯನಾಥ್ ಸರ್ಕಾರ (Yogi Adityanath Govt) 26 ನವೆಂಬರ್ 2020 ರಂದು ಅನುಮೋದನೆ ನೀಡಿತು. ಇದನ್ನು ಅದಾನಿ ಎಂಟರ್‌ಪ್ರೈಸಸ್ (Adani Enterprises) ಮತ್ತು ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್‌ಗಳು ನಿರ್ಮಿಸಲಿದ್ದಾರೆ. ಮೀರತ್‌ನಿಂದ ಎಕ್ಸ್‌ಪ್ರೆಸ್‌ವೇ ಆರಂಭವಾಗಲಿದೆ. ಇದು ಪಶ್ಚಿಮ ಉತ್ತರ ಪ್ರದೇಶವನ್ನು ಪೂರ್ವ ಉತ್ತರ ಪ್ರದೇಶದೊಂದಿಗೆ ಸಂಪರ್ಕಿಸುತ್ತದೆ. ಇದು ಎನ್‌ಸಿಆರ್ ತಲುಪಲು ಸುಲಭವಾಗುತ್ತದೆ. ಇದು ಮೀರತ್, ಹಾಪುರ್, ಬುಲಂದ್‌ಶಹರ್, ಅಮ್ರೋಹಾ, ಸಂಭಾಲ್, ಬಟೌನ್, ಷಹಜಹಾನ್‌ಪುರ್, ಹರ್ದೋಯಿ, ಉನ್ನಾವೋ, ರಾಯ್ ಬರೇಲಿ, ಪ್ರತಾಪ್‌ಗಢ ಮತ್ತು ರಾಯ್ ಬರೇಲಿಯ 12 ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ.

Tap to resize

Latest Videos

undefined

Kashi Vishwanath Corridor: ಕೇವಲ 9 ಕ್ಯಾಬಿನೆಟ್ ಸಭೆ, ಮೋದಿ ಕನಸು ಸಾಕಾರಗೊಳಿಸಿದ ಸಿಎಂ ಯೋಗಿ!

ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ 9 ಸಾರ್ವಜನಿಕ ಅನುಕೂಲ ಕೇಂದ್ರಗಳು, 7 ರೈಲ್ವೇ ಓವರ್ ಬ್ರಿಡ್ಜ್‌ಗಳು, 14 ಪ್ರಮುಖ ಸೇತುವೆಗಳು, 126 ಚಿಕ್ಕ ಸೇತುವೆಗಳು ಮತ್ತು 381 ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗುತ್ತದೆ. ಪ್ರವೇಶ ಮತ್ತು ನಿರ್ಗಮನಕ್ಕಾಗಿ 17 ಸ್ಥಳಗಳಲ್ಲಿ ಇಂಟರ್‌ಚೇಂಜ್ ಸೌಲಭ್ಯವೂ ಇರುತ್ತದೆ. ಸಮೀಪದ ಗ್ರಾಮಗಳ ಜನರಿಗೆ ಸರ್ವೀಸ್ ರಸ್ತೆ ಮಾಡಲಾಗುತ್ತದೆ. ಉತ್ತರ ಪ್ರದೇಶದ ಇತರ ಎಕ್ಸ್‌ಪ್ರೆಸ್‌ವೇಗಳಂತೆ, ವಿಮಾನಗಳ ತುರ್ತು ಟೇಕ್-ಆಫ್ ಮತ್ತು ಲ್ಯಾಂಡಿಂಗ್‌ಗಾಗಿ ಏರ್‌ಸ್ಟ್ರಿಪ್ ಅನ್ನು ನಿರ್ಮಿಸಲಾಗುತ್ತದೆ. ಶಹಜಹಾನ್‌ಪುರದಲ್ಲಿ 3.5 ಕಿ.ಮೀ ಉದ್ದದ ಏರ್‌ಸ್ಟ್ರಿಪ್ ನಿರ್ಮಿಸುವ ಯೋಜನೆ ಇದೆ.

18 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗುತ್ತದೆ

ಗಂಗಾ ಎಕ್ಸ್‌ಪ್ರೆಸ್‌ನಲ್ಲಿ ವಾಹನಗಳ ಗರಿಷ್ಠ ವೇಗ ಗಂಟೆಗೆ 120 ಕಿ.ಮೀ. ಸುಮಾರು 7386 ಹೆಕ್ಟೇರ್ ಪ್ರದೇಶದಲ್ಲಿ ಎಕ್ಸ್ ಪ್ರೆಸ್ ವೇ ನಿರ್ಮಾಣವಾಗಲಿದೆ. ಇದಕ್ಕಾಗಿ ಇದುವರೆಗೆ 83 ಸಾವಿರ ರೈತರಿಂದ ಶೇ.94ರಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಗಂಗಾ ಎಕ್ಸ್‌ಪ್ರೆಸ್‌ವೇ ಮೂಲಕ ಕೈಗಾರಿಕಾ ಘಟಕಗಳು ಮತ್ತು ರೈತರ ಉತ್ಪಾದನೆಯನ್ನು ರಾಷ್ಟ್ರ ರಾಜಧಾನಿಗೆ ಸಂಪರ್ಕಿಸಲು ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರಲ್ಲಿ ಆಹಾರ ಸಂಸ್ಕರಣಾ ಘಟಕಗಳು, ಗೋದಾಮುಗಳು, ಮಂಡಿಗಳು ಮತ್ತು ಹಾಲು ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತದೆ. ಪರಿಸರ ಸಂರಕ್ಷಣೆಗಾಗಿ ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಸುಮಾರು 18 ಲಕ್ಷದ 55 ಸಾವಿರ ಸಸಿಗಳನ್ನು ನೆಡಲಾಗುತ್ತದೆ. ಯೋಜನೆಯಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಸೌರಶಕ್ತಿಯ ಮೂಲಕ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ, ಇದು ಯೋಜನೆಯ ಕಾರ್ಯಾಚರಣೆಗೆ ಅಗತ್ಯವಾದ ಶಕ್ತಿಯನ್ನು ಪೂರೈಸುತ್ತದೆ.

Uttar Pradesh Elections: ಅಖಿಲೇಶ್‌ ರ್ಯಾಲಿಗೆ ಭರ್ಜರಿ ಯುವಕರ ದಂಡು, ಯೋಗಿಗೆ ಚಿಂತೆ ಶುರು

ಯುಪಿಯ ಲಕ್ಷಾಂತರ ರೈತರಿಗೆ ಪಿಎಂ ಮೋದಿ ಗಿಫ್ಟ್, ಅಟಲ್ ಕನಸು ನನಸು!

ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister narendra Modi) ಅವರು ಡಿಸೆಂಬರ್ 11 ರಂದು ಬಹ್ರೈಚ್, ಶ್ರಾವಸ್ತಿ ಮತ್ತು ಬಲರಾಮ್‌ಪುರದಿಂದ ಗೋರಖ್‌ಪುರದವರೆಗೆ 318 ಕಿಮೀ ಉದ್ದದ ಸರಯೂ ಕಾಲುವೆ ಯೋಜನೆಯನ್ನು (Saryu Canal National Project) ಉದ್ಘಾಟಿಸಿದ್ದಾರೆ, ಇದು ಉತ್ತರ ಪ್ರದೇಶದ ಪೂರ್ವ ಭಾಗದ ಜನರಿಗೆ ಪ್ರವಾಹ ಮತ್ತು ಅನಾವೃಷ್ಟಿ ಸಮಸ್ಯೆಯನ್ನು ಎದುರಿಸಲು ಸಹಾಯಕವಾಗಿದೆ.

ಈ ಯೋಜನೆಯಿಂದ ಅಟಲ್ ಕನಸು ನನಸಾಗಲಿದೆ: ಜಲಶಕ್ತಿ ಸಚಿವ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಭಾರತೀಯ ಜನಸಂಘದ ದಿವಂಗತ ನಾಯಕ ನಾನಾಜಿ ದೇಶಮುಖ್ ಅವರ ಕಾರ್ಯಕ್ಷೇತ್ರ ಹಾಗೂ ಭಗವಾನ್ ಬುದ್ಧನ ದೇಗುಲದ ಮೇಲೆ ನಿರ್ಮಿಸಿರುವ ಈ ಯೋಜನೆ ಉದ್ಘಾಟನೆ ದೇಶ ಮಾತ್ರವಲ್ಲ ಇಡೀ ಜಗತ್ತಿಗೆ ದೊಡ್ಡ ದೊಡ್ಡ ಸಂದೇಶ ನೀಡಿದಂತಾಗುತ್ತದೆ ಎಂದು ಜಲಶಕ್ತಿ ಸಚಿವ ಡಾ.ಮಹೇಂದ್ರ ಸಿಂಗ್ ಹೇಳಿದರು. ವಾಜಪೇಯಿ ಅವರು ನದಿಗಳನ್ನು ಜೋಡಿಸಲು ಯೋಜಿಸಿದ್ದರು ಮತ್ತು ಈ ಯೋಜನೆ ಪೂರ್ಣಗೊಂಡ ನಂತರ ಅವರ ಕನಸು ಕೂಡ ನನಸಾಗುತ್ತಿದೆ ಎಂದು ಸಚಿವರು ಹೇಳಿದರು.

click me!