ಫೆ.26ಕ್ಕೆ ಬೆಂಗಳೂರು ವಿಭಾಗದ 15 ರೈಲು ನಿಲ್ದಾಣ ಪುನರಾಭಿವೃದ್ಧಿಗೆ ಮೋದಿ ಶಂಕುಸ್ಥಾಪನೆ!

Published : Feb 23, 2024, 07:58 PM IST
ಫೆ.26ಕ್ಕೆ ಬೆಂಗಳೂರು ವಿಭಾಗದ 15 ರೈಲು ನಿಲ್ದಾಣ ಪುನರಾಭಿವೃದ್ಧಿಗೆ ಮೋದಿ ಶಂಕುಸ್ಥಾಪನೆ!

ಸಾರಾಂಶ

ದೇಶಾದ್ಯಂತ ರೈಲ್ವೇ ನಿಲ್ದಾಣ, ರೈಲು ಹಳಿಗಳನ್ನು ಆಧುನೀಕರಣಗೊಳಿಸುತ್ತಿರುವ ಮೋದಿ ಸರ್ಕಾರ ಇದೀಗ ಫೆ.26ರಂದು ಬೆಂಗಳೂರು ವಿಭಾಗದ 15 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.  

ನವದೆಹಲಿ(ಫೆ.23) ದೇಶದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ದೇಶದ ಮೂಲೆ ಮೂಲೆಗೂ ಸಾರಿಗೆ ಸಂಪರ್ಕ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಮೂಲಕ ನವ ಭಾರತ ನಿರ್ಮಾಣಕ್ಕೆ ಪಣತೊಟ್ಟಿರುವ ಮೋದಿ ಸರ್ಕಾರ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಫೆಬ್ರವರಿ 26 ರಂದು ಬೆಂಗಳರು ವಿಭಾಗದ 15 ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಎರಡು ರೈಲ್ವೇ ಮೇಲ್ಸೇತುವೆ, ಎರಡು ರೈಲ್ವೇ ಕೆಳಸೇತು, ಮೂಲಭೂತ ಸೌಕರ್ಯಗಳ ಕಾಮಾಗಾರಿ ಯೋಜನೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.

ಅಮೃತ್ ಭಾರತ್ ಸ್ಟೇಶನ್ ಯೋಜನೆಯಡಿ ದೇಶಾದ್ಯಂತ ಭಾರತದ 554 ರೈಲು ನಿಲ್ದಾಣ, 1,585 ROB ಹಾಗೂ  RUB ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಇದೀಗ ಬೆಂಗಳೂರು ವಿಭಾಗದ 15 ರೈಲು ನಿಲ್ದಾಣ ಹಾಗೂ ಇತರ ಮೂಲಭೂತ ಸೌಕರ್ಯ ಅಭಿವದ್ಧಿ ಕಾಮಾಗಾರಿ ಇದೇ ಯೋಜನೆಯಡಿ ಮಾಡಲಾಗುತ್ತಿದೆ. ಬೆಂಗಳೂರು ರೈಲು ವಿಭಾಗದ ಈ ಯೋಜನೆಗೆ ಕೇಂದ್ರ ಸರ್ಕಾರ 372.12 ಕೋಟಿ ರೂಪಾಯಿ ಅನುದಾನ ನೀಡಿದೆ. 

ಮಲ್ಲೇಶ್ವರ, ಕೆಂಗೇರಿ, ಮಂಡ್ಯ ಸೇರಿ 15 ರೈಲ್ವೆ ನಿಲ್ದಾಣಗಳಿಗೆ ಸ್ಮಾರ್ಟ್‌ ಟಚ್; 372.13 ಕೋಟಿ ವೆಚ್ಚ ಮೀಸಲು

ಬಂಗಾರಪೇಟೆ, ಚನ್ನಪಟ್ಟಣ, ಧರ್ಮಪುರಿ, ದೊಡ್ಡಬಳ್ಳಾಪುರ, ಹಿಂದುಪುರ, ಹೊಸೂರು, ಕೆಂಗೇರಿ, ಕೃಷ್ಣರಾಜಪುರಂ, ಕುಪ್ಪಂ, ಮಲ್ಲೇಶ್ವರಂ, ಮಾಲೂರು, ಮಂಡ್ಯ, ರಾಮನಗರ, ತುಮಕೂರು ಹಾಗೂ ವೈಟ್‌ಫೀಲ್ಟ್ ರೈಲು ನಿಲ್ದಾಣಗಳು ಈ ಯೋಜನೆಯಡಿ ಪುನರಾಭಿವೃದ್ಧಿಯಾಗಲಿದೆ. ಈ ಮೂಲಕ ಬೆಂಗಳೂರು ವಿಭಾಗದ ಪ್ರಮುಖ 15 ರೈಲು ನಿಲ್ದಾಣಗಳು ಅತ್ಯಾಧುನಿಕ ಸ್ಪರ್ಶ ಪಡೆಯಲಿದೆ.

ಆರಂಭಿಕ ಹಂತದಲ್ಲಿ ಈ ನಿಲ್ದಾಣಗಳಲ್ಲಿ ವೈಟಿಂಗ್ ರೂಂ, ಉತ್ತಮ ಪ್ರವೇಶ ದ್ವಾರ, ಪ್ರಯಾಣಿಕರಿಗೆ ವಿಶ್ರಮಿಸಲು ಕೊಠಡಿ, ಶೌಚಾಲಯ ಸೌಲಭ್ಯ, ಲಿಫ್ಟ್, ಎಸ್ಕಲೇಟರ್, ಸ್ವಚ್ಚತೆ, ಉಚಿತ ವೈಫೈ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ.ಪ್ರಯಾಣಿಕರಿಗೆ ಮಾಹಿತಿ, ಕಾರ್ಯನಿರ್ವಹಾಕ ಲಾಂಜ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತದೆ. 

ಭಾರತದ ಅತಿ ಉದ್ದದ ರೈಲು ಸುರಂಗಕ್ಕೆ ಮೋದಿ ಚಾಲನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಜೆಪಿಗರ ಬಳಿ 1 ಕೋಟಿ 2 ಕೋಟಿ ಮೊತ್ತದ ದುಬಾರಿ ವಾಚ್‌ಗಳಿವೆ ಚೆಕ್ ಮಾಡಿ: ಕಾಂಗ್ರೆಸ್ ಶಾಸಕ
ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು