ಸ್ಮಾರ್ಟ್‌ಫೋನ್ ಗುಂಗಿನಲ್ಲಿದೆ ಆಪತ್ತು, ಆಹಾರ ಬದಲು ಐಪ್ಯಾಡ್ ರೋಸ್ಟ್ ಮಾಡಿ ಮಹಿಳೆ ಎಡವಟ್ಟು!

Published : Feb 23, 2024, 06:59 PM IST
ಸ್ಮಾರ್ಟ್‌ಫೋನ್ ಗುಂಗಿನಲ್ಲಿದೆ ಆಪತ್ತು, ಆಹಾರ ಬದಲು ಐಪ್ಯಾಡ್ ರೋಸ್ಟ್ ಮಾಡಿ ಮಹಿಳೆ ಎಡವಟ್ಟು!

ಸಾರಾಂಶ

ಸ್ಮಾರ್ಟ್‌ಫೋನ್ ಕೈಯಲ್ಲಿದ್ದರೆ ಸುತ್ತಿಲಿನ ಜಗತ್ತೇ ಮರೆಯುವವರ ಸಂಖ್ಯೆ ಹೆಚ್ಚೇ ಇದೆ. ಫೋನ್ ಒಳಗೆ ಮುಳುಗಿ ಆಗಿರುವ ಅನಾಹುತ ಒಂದೆರಡಲ್ಲ. ಇದೀಗ ಮಹಿಳೆಯೊಬ್ಬರು ಅಡುಗಮನೆಯೊಳಗೂ ಫೋನ್‌ನಲ್ಲಿ ಬ್ಯೂಸಿ ಇದ್ದರು. ಇದೇ ಗುಂಗಿನಲ್ಲಿ ಆಹಾರವನ್ನು ಓವನ್‌ನಲ್ಲಿಡುವ ಬದಲು ಐಪ್ಯಾಡ್‌ನ್ನೇ ಇಟ್ಟಿದ್ದಾಳೆ. 

ಸ್ಮಾರ್ಟ್‌ಫೋನ್ ಗುಂಗಿನಲ್ಲಿ ಕಳೆದರೆ ಸುತ್ತಾ ಏನು ನಡೆಯುತ್ತಿದೆ ಅನ್ನೋದೆ ಮರೆತುಬಿಡುತ್ತಾರೆ. ಎಲ್ಲಿದ್ದೇವೆ, ಏನಾಗುತ್ತಿದೆ ಅನ್ನೋ ಅರಿವೆ ಇರುವುದಿಲ್ಲ. ಹೀಗೆ ಹಲವು ಅನಾಹುತಗಳು ನಡೆದು ಹೋಗಿದೆ. ಈ ಸಾಲಿಗೆ ಮತ್ತೊಂದು ರೋಚಕ ಕತೆ ಸೇರಿಕೊಂಡಿದೆ. ಮಹಿಳೆಯೊಬ್ಬರು ತಮ್ಮ ಆ್ಯಪಲ್ ಐಪ್ಯಾಡ್‌ನಲ್ಲಿ ಬ್ಯೂಸಿ ಆಗಿದ್ದಾರೆ. ಇದೇ ವಳೆ ಮಕ್ಕಳು ಆಹಾರ ಕೇಳಿದ್ದಾರೆ. ಹೀಗಾಗಿ ಬಿಸಿ ಮಾಡಿಕೊಡಲು ಅಡುಗೆ ಕೋಣೆಗೆ ತೆರಳಿದ ಮಹಿಳೆ, ಆಹಾರವನ್ನು ಓವನ್‌ನಲ್ಲಿಡುವ ಬದಲು ಕೈಯಲ್ಲಿದ್ದ ಐಪ್ಯಾಡ್‌ನ್ನು ಓವನ್‌ನಲ್ಲಿಟ್ಟಿದ್ದಾರೆ. ಕೆಲ ಹೊತ್ತಿನ ಬಳಿಕ ನೋಡಿದಾ ಐಪ್ಯಾಡ್ ರೋಸ್ಟ್ ಆಗಿದೆ. ಸರಿಮಾಡಲು ಸಾಧ್ಯವಿಲ್ಲದಷ್ಟು ರೋಸ್ಟ್ ಆಗಿದೆ.

ರೆಡಿಟ್‌‌ನಲ್ಲಿ ಈ ರೋಚಕ ಮಾಹಿತಿ ಬಹಿರಂಗವಾಗಿದೆ. ನನ್ನ ತಾಯಿ ಅಚಾತುರ್ಯದಿಂದ ಐಪ್ಯಾಡ್ ಬೇಯಿಸಿದ್ದಾಳೆ ಎಂದು ಫೋಟೋ ಹಂಚಿಕೊಳ್ಳಲಾಗಿದೆ. ಕುಟುಂಬಸ್ಥರು, ಹಲವು ವರ್ಷಗಳ ಬಳಿಕ ಆಪ್ತರು ಸಿಕ್ಕರೂ ಇದೀಗ ಮಾತುಕತೆಗಿಂತ ಹೆಚ್ಚಾಗಿ ಎಲ್ಲರೂ ತಮ್ಮ ತಮ್ಮ ಫೋನ್‌ನಲ್ಲಿ ಬ್ಯೂಸಿಯಾಗುತ್ತಾರೆ. ಹೀಗೆ ಮನೆಯಲ್ಲಿ ಮಕ್ಕಳ ಜೊತೆಗಿದ್ದ ತಾಯಿ ತಮ್ಮ ಐಪ್ಯಾಡ್‌ನಲ್ಲಿ ಸಮಯ ಕಳೆದಿದ್ದಾರೆ.

ನಿದ್ದೆಗೆ ಜಾರುತ್ತಿದ್ದ ಮಗುವನ್ನು ತೊಟ್ಟಿಲು ಬದಲು ಒವನ್‌ನಲ್ಲಿಟ್ಟ ತಾಯಿ, ದುರಂತ ಅಂತ್ಯ ಕಂಡ ಕಂದ!

ಇದರ ನಡುವೆ ಮಕ್ಕಳಿಗೆ ಆಹಾರ ನೀಡಲು ರೆಫ್ರಿಜರೇಟರ್‌ನಿಂದ ಆಹಾರ ತೆಗೆದು ಓವನ್‌ನಲ್ಲಿ ಇಡಲು ಮುಂದಾಗಿದ್ದಾಳೆ. ಆದರೆ ಐಪ್ಯಾಡ್ ನೋಡತ್ತಲೆ ಫ್ರೀಡ್ಜ್ ತೆರೆದ ಮಹಿಳೆ, ಆಹಾರ ತೆಗೆದುಕೊಂಡು ಬಂದಿದ್ದಾರೆ. ಬಳಿಕ ಓವನ್ ಪಕ್ಕದಲ್ಲೇ ಇಟ್ಟು ಓವನ್ ಆನ್ ಮಾಡಿದ್ದಾರೆ. ಆಹಾರವನ್ನು ಓವನ್ ಒಳಗಿಡುವ ಬದಲು ಕೈಯಲ್ಲಿದ್ದ ಐಪ್ಯಾಡ್ ಒಳಗಿಟ್ಟು ಟೆಂಪರೇಚರ್ ಸೆಟ್ ಮಾಡಿದ್ದಾರೆ.

ಕೆಲ ಹೊತ್ತಿನ ಬಳಿಕ ಓವನ್ ತೆರೆದಾಗ ಗರಿಗರಿಯಾದ ಐಪ್ಯಾಡ್ ಕ್ರಂಬಲ್ ರೆಡಿಯಾಗಿದೆ. ಓವನ್ ತೆರೆಯುತ್ತಿದ್ದಂತೆ ತನ್ನ ತಪ್ಪಿನ ಅರಿವಾಗಿದೆ. ಆದರೆ ಅಷ್ಟರಲ್ಲೇ ಐಪ್ಯಾಡ್ ಸರಿಮಾಡಲು ಸಾಧ್ಯವಿಲ್ಲದಷ್ಟು ಹಾಳಾಗಿದೆ. ಈ ಕುರಿತು ಪೋಸ್ಟ್ ಇದೀಗ ಬಾರಿ ವೈರಲ್ ಆಗಿದೆ. ಬ್ಯಾಟರಿ ಸ್ಫೋಟಗೊಂಡಿದ್ದರೆ ಕತೆ ಬೇರೆ ಆಗುತ್ತಿತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದು ಆ್ಯಪಲ್ ಕ್ರಂಬಲ್ ಎಂದು ಮತ್ತೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

ಎಳ್ಳಿನ ಬಿಸ್ಕೆಟ್‌ ಎಂದು ಗಬಗಬನೇ ತಿಂದ ಮಹಿಳೆ, ಅಲ್ಲಿದ್ದಿದ್ದು ಇರುವೆಯ ರಾಶಿ..! ಮುಂದೆ ಆಗಿದ್ದೇನು ?

ನಿಮ್ಮ ಐಪ್ಯಾಡ್ ಇನ್ನು ಬಳಸಲು ಸಾಧ್ಯವಿಲ್ಲ. ಐಪ್ಯಾಡ್ ಮಾತ್ರವಲ್ಲ, ಓವನ್ ಕೂಡ ಬಳಸಬೇಡಿ. ಕೆಮಿಕಲ್‌ನಿಂದ ಓವನ್ ಬಳಸು ಸಾಧ್ಯವಿಲ್ಲ. ಫೋನ್‌, ಪ್ಲಾಸ್ಟಿಕ್ ರಾಸಾಯನಿಕಗಳು ಓವನ್ ಒಳಗೆ ಸೇರಲಿದೆ. ನೀವೆಷ್ಟೆ ತೊಳೆದರೂ ಹೋಗುವುದಿಲ್ಲ. ಓವನ್‌ನಲ್ಲಿ ಆಹಾರ ಇಟ್ಟು ಬಿಸಿ ಮಾಡಿದಾಗ ಈ ರಾಸಾಯನಿಕಗಳು ಆಹಾರದಲ್ಲಿ ಸೇರಿಕೊಳ್ಳಲಿದೆ. ಹೀಗಾಗಿ ಐಪ್ಯಾಡ್ ಜೊತೆಗೆ ಓವನ್ ಕೂಡ ಬಿಸಾಡಿ ಎಂದು ಮತ್ತೆ ಕೆಲವರು ಸಲಹೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ತಂಗಿಯರಿಗಾಗಿ ಅವರನ್ನು ಬಿಟ್ಟುಬಿಡಿ: ತನ್ನ ಕೊಲ್ಲಲೆತ್ನಿಸಿದ ತಂದೆಯ ಬಿಡುಗಡೆಗೆ ಬೇಡಿದ ಬಾಲಕಿ
25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ