
ವಾರಣಾಸಿ(ಫೆ.23) ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಾಕ್ಸಮರಗಳು ಜೋರಾಗುತ್ತಿದೆ. ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣಾಗಿದೆ. ವಾರಣಾಸಿ ಯುವ ಸಮೂಹ ಮದ್ಯ ವ್ಯಸನಿಗಳಾಗಿದ್ದಾರೆ ಅನ್ನೋ ಹೇಳಿಕೆಯನ್ನು ಪ್ರಧಾನಿ ಮೋದಿ ಖಂಡಿಸಿದ್ದಾರೆ. ಇದು ಯಾವ ಭಾಷೆ? ಉತ್ತರ ಪ್ರದೇಶದ ಯುವ ಸಮೂಹಕ್ಕೆ ಹೊಸ ಹೊಸ ಅವಕಾಶಗಳು ಲಭ್ಯವಾಗುತ್ತಿದೆ. ಆದರೆ ಪರಿವಾರದವಾದ ಯುವರಾಜನ ಹೇಳಿಕೆಯಿಂದ ನಾನು ಹೈರಾಣಾಗಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಯೋಜನೆಗಳಿಗೆ ಚಾಲನೆ ಸಲುವಾಗಿ ಉತ್ತರ ಪ್ರದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿಂದು ಜನತೆಯನ್ನುದ್ದೇಶಿ ಮಾತನಾಡಿದರು. ಈ ವೇಳೆ ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಯುವ ಸಮೂಹದ ಮೇಲೆ ಇದೆಂತಾ ಭಾಷಾ ಪ್ರಯೋಗ? ಮೋದಿಯನ್ನು ಪದೆ ಪದೇ ಟೀಕಿಸಿ ಸೆನ್ಸ್ ಕಳೆದುಕೊಂಡಿದ್ದಾರೆ ಎಂದು ಮೋದಿ ರಾಹುಲ್ ಗಾಂಧಿ ಹೆಸರು ಹೇಳದೆ ತಿರುಗೇಟು ನೀಡಿದ್ದಾರೆ.
ಪ್ರಧಾನಿ ಮೋದಿ ಮತ್ತೆ ವಿಶ್ವದ ನಂ.1 ಜನಪ್ರಿಯ ನಾಯಕ, ಜಾಗತಿಕ ಅಪ್ರೂವಲ್ ರೇಟಿಂಗ್ ಬಿಡುಗಡೆ!
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಯೋಗಿ ಆದಿತ್ಯಾನಾಥ್ ನೇತೃತ್ವದ ಬಿಜೆಪಿ ಸರ್ಕಾರದಿಂದ ಉತ್ತರ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಯುವ ಸಮೂಹಕ್ಕೆ ಉದ್ಯೋಗವಿಲ್ಲ ಅನ್ನೋದನ್ನು ಬಿಂಬಿಸಲು ಹೊರಟ ರಾಹುಲ್ ಗಾಂಧಿ ವಿವಾದಿತ ಹೇಳಿಕೆ ನೀಡಿದ್ದರು.ನಾನು ವಾರಣಾಸಿಗೆ ಹೋಗಿದ್ದೆ, ಜನರು ಮದ್ಯ ಕುಡಿದು ರಸ್ತೆಯಲ್ಲೇ ಬಿದ್ದಿದ್ದರು.ಯುಪಿಯ ಯುವಕರು ಮದ್ಯ ಕುಡಿದು ರಾತ್ರಿ ವೇಳೆ ಪ್ರವಾಸ ಹೊರಟಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದರು.
ಇದಕ್ಕೂ ಮೊದಲು ರಾಜಕೀಯ ವಾಕ್ಸಮರದಲ್ಲಿ ನಟಿ ಐಶ್ವರ್ಯ ರೈ ಉಲ್ಲೇಖಿಸಿ ವಿವಾದ ಸೃಷ್ಟಿಸಿದ್ದರು. ‘ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಯಾವುದೇ ಒಬಿಸಿ ಅಥವಾ ಎಸ್‌ಸಿ,ಎಸ್‌ಟಿ ಸಮುದಾಯದ ಜನರು ಉಪಸ್ಥಿತರಿದ್ದನ್ನು ಗಮನಿಸಿದ್ದೀರಾ? ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್, ಐಶ್ವರ್ಯಾ ಬಚ್ಚನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಗಣ್ಯರು ಮಾತ್ರ ಅಲ್ಲಿದ್ದರು. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 73 ರಷ್ಟಿರುವ ಜನರು(ಹಿಂದುಳಿದ) ಈ ಸಮಾರಂಭದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಐಶ್ವರ್ಯಾ ನೃತ್ಯ ಮಾಡುವುದನ್ನು ನೋಡುತ್ತ ಅಮಿತಾಭ್ ಬಚ್ಚನ್ ಸಾಬ್ ಬಲ್ಲೆ ಬಲ್ಲೆ ಮಾಡುತ್ತಾರೆ. ಮೋದಿಯವರು ಕೇವಲ ಶ್ರೀಮಂತರ ಜೇಬು ತುಂಬುತ್ತಿದ್ದಾರೆ ಎಂದಿದ್ದರು.
ಭಾರತದ ಅತಿ ಉದ್ದದ ರೈಲು ಸುರಂಗಕ್ಕೆ ಮೋದಿ ಚಾಲನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ