ಎಷ್ಟು ನಿದ್ರೆ ಮಾಡ್ತಾರೆ ಮೋದಿ? ಸಿಕ್ತು ಅಚ್ಚರಿಯ ಉತ್ತರ: ಎಚ್ಚರದಿಂದಿರಲು ನಮೋ ವಿಶೇಷ ಪ್ರಯೋಗ

By Suvarna NewsFirst Published Mar 21, 2022, 3:22 PM IST
Highlights

* ಪ್ರಧಾನಿ ಮೋದಿ ಹಗಲಿರುಳೂ ಕೆಲಸ

* ಮೋದಿ ರೆಸ್ಟ್‌ ಪಡೆಯೋದು ಯಾವಾಗ?

* ಮೋದಿ ನಿದ್ದೆಗೆ ಸಂಬಂಧಿಸಿದ ಅಚ್ಚರಿಯ ಮಾಹಿತಿ ಬಹಿರಂಗ

ಮುಂಬೈ(ಮಾ.21) ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಭಾರತಕ್ಕಿಂತ ವಿದೇಶದಲ್ಲೇ ಹೆಚ್ಚು ಇದೆ. ಏಕೆಂದರೆ 70 ವರ್ಷ ವಯಸ್ಸಿನವರಾಗಿದ್ದರೂ ಮೋದಿ ಅವರು ಎಷ್ಟು ಸಕ್ರಿಯ ಮತ್ತು ಶಕ್ತಿಯುತ ಎಂಬುವುದು ಆಗಾಗ ವರದಿಗಳಿಂದ ಬಹಿರಂಗವಾಗುತ್ತದೆ. ಅವರು ಹಗಲಿರುಳೂ ಶ್ರಮವಹಿಸಿ ಕೆಲಸ ಮಾಡುತ್ತಾರೆಂಬುವುದು ಅವರ ಮತ್ತೊಂದು ವಿಶೇಷ. ಮೋದಿ ಬಹಳ ಕಡಿಮೆ ನಿದ್ರೆ ಮಾಡುತ್ತಾರೆ ಎಂದೂ ಹೇಳಲಾಗುತ್ತದೆ. ಇದೀಗ ಈ ಕುರಿತು ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ ಪಾಟೀಲ್ ಖುದ್ದು ಅಚ್ಚರಿಯ ವಿಚಾರ ಬಹಿರಂಗ ಪಡಿಸಿದ್ದಾರೆ. ಇದು ಭಾರೀ ಸದ್ದು ಮಾಡುತ್ತಿದೆ.

ನಿದ್ದೆ ಮಾಡುವಾಗ ಹೀಗೆಲ್ಲಾ ಆದ್ರೆ ಹಠಾತ್ ಹೃದಯಾಘಾತದ ಸಾಧ್ಯತೆ ಹೆಚ್ಚು !

Latest Videos

ಪ್ರಧಾನಿ 24 ಗಂಟೆಯೂ ಎಚ್ಚರದಿಂದಿರಲು ವಿಭಿನ್ನ ಪ್ರಯೋಗ ಮಾಡುತ್ತಿದ್ದಾರೆ

ಬಿಜೆಪಿ ನಾಯಕ ಚಂದ್ರಕಾಂತ್ ಪಾಟೀಲ್ ಅವರು ಮಹಾರಾಷ್ಟ್ರದ ಚುನಾವಣಾ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಜಿ ಕೇವಲ 2 ಗಂಟೆ ಮಾತ್ರ ಮಲಗುತ್ತಾರೆ. ಅವರು ದೇಶಕ್ಕಾಗಿ 22 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರು ತಮ್ಮ ಜೀವನದ ಒಂದು ನಿಮಿಷವನ್ನೂ ವ್ಯರ್ಥ ಮಾಡುವುದಿಲ್ಲ, ಎಲ್ಲಾ ಸಮಯದಲ್ಲೂ ದೇಶದ ಅಭಿವೃದ್ಧಿ ಬಗ್ಗೆ ಯೋಚಿಸುತ್ತಾರೆ. ದೇಶದ ಯಾವುದೇ ಪಕ್ಷದಲ್ಲಿ ನಡೆಯುವ ಘಟನೆಗಳ ಬಗ್ಗೆ ಅವರಿಗೆ ಮಾಹಿತಿ ಇರುತ್ತದೆ. ಇದರೊಂದಿಗೆ ಬಡವರಿಗೆ ಸರಿಯಾದ ಯೋಜನೆಗಳು ತಲುಪುತ್ತವೆ ಎಂಬ ಬಗ್ಗೆಯೂ ಗಮನ ಹರಿಸುತ್ತಾರೆ ಎಂದಿದ್ದಾರೆ.

PM ಮೋದಿ ನಿದ್ರೆ ನಿಯಂತ್ರಿಸಲು ಪ್ರಯೋಗಗಳನ್ನು ಮಾಡುತ್ತಿದ್ದಾರೆ

ಇದಲ್ಲದೇ ಚಂದ್ರಕಾಂತ ಪಾಟೀಲ್ ಮತ್ತಷ್ಟು ವಿಚಿತ್ರ ಹೇಳಿಕೆಗಳನ್ನು ನೀಡಿದ್ದು, ಪ್ರಧಾನಿ ವಿಭಿನ್ನ ಪ್ರಯೋಗವನ್ನು ಮಾಡುತ್ತಿದ್ದಾರೆ ಇದರಿಂದ ಅವರು ದೇಶಕ್ಕಾಗಿ 24 ಗಂಟೆಗಳ ಕಾಲ ಕೆಲಸ ಮಾಡಬಹುದು. ಆದ್ದರಿಂದ ಅವರು ಮಲಗುವ ಅಗತ್ಯವಿಲ್ಲ. 24 ಗಂಟೆಗಳಲ್ಲಿ ಒಂದು ನಿಮಿಷವೂ ವ್ಯರ್ಥವಾಗಬಾರದು ಎಂದು ಪ್ರಧಾನಿ ಬಯಸುತ್ತಾರೆ ಎಂದಿದ್ದಾರೆ.

ನಿದ್ದೆ ಮಾಡುವಾಗ ಮೂಗಿನಲ್ಲಿ ರಕ್ತಸ್ರಾವ ಆಗೋಕೆ ಕಾರಣವೇನು ?

ನಿದ್ರೆಯ ಬಗ್ಗೆ ಪ್ರಧಾನಿ ಸಂದರ್ಶನ

ಮೂರು ವರ್ಷಗಳ ಹಿಂದೆ 2019 ರಲ್ಲಿ ಪ್ರಧಾನಿ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ದಿನಚರಿ ಮತ್ತು ನಿದ್ರೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು ಎಂಬುವುದು ಉಲ್ಲೇಖನೀಯ. ಎಂದು ಪ್ರಧಾನಿ ಮೋದಿ ತಾನು ಕೇವಲ ಮೂರ್ನಾಲ್ಕು ಗಂಟೆಗಳ ಕಾಲ ಮಾತ್ರ ಮಲಗುತ್ತೇನೆ ಎಂದು ಹೇಳಿದ್ದರು. ಈ ವೇಳೆ ತಾನು ಬಹಳ ಗಾಢ ನಿದ್ರೆಯಲ್ಲಿರಿತ್ತೇನೆ ಎಂದೂ ಉಲ್ಲೇಖಿಸಿದ್ದರು. ಹಾಸಿಗೆಯ ಮೇಲೆ ಮಲಗಿದ ಒಂದು ನಿಮಿಷದಲ್ಲಿ ನಿದ್ರೆ ಆವರಿಸುತ್ತದೆ ಎಂದಿದ್ದರು. ಆದಾಗ್ಯೂ, ಪ್ರತಿಯೊಬ್ಬ ವ್ಯಕ್ತಿ ಕನಿಷ್ಠ 5-6 ಗಂಟೆಗಳ ನಿದ್ದೆ ಮಾಡಬೇಕು ಎಂದು ಸೂಚಿಸಿದ್ದರು.

ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಮುಖಂಡರ ಹೇಳಿಕೆ

ಕೊಲ್ಹಾಪುರದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮೋದಿಯವರ ನಿದ್ದೆಯ ಬಗ್ಗೆ ಹೇಳಿಕೊಂಡ ಪಾಟೀಲ್  ಕೊಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ದಿನಕ್ಕೆ ಎರಡು ಗಂಟೆ ನಿದ್ದೆ ಮಾಡಿ 22 ಗಂಟೆ ಕೆಲಸ ಮಾಡುವಂತೆ ಹೇಳಿದ್ದಾರೆ ಎಂಬುವುದು ಉಲ್ಲೇಖನೀಯ ವಿಚಾರ.

click me!