ಹಿಮಾಚಲ ಪ್ರದೇಶದ ಮನೆಗಳ ಗೋಡೆ, ಮಹಡಿಯಿಂದ ನೀರು, ಏನಿದರ ರಹಸ್ಯ?

Published : Mar 21, 2022, 01:49 PM ISTUpdated : Mar 21, 2022, 01:52 PM IST
ಹಿಮಾಚಲ ಪ್ರದೇಶದ ಮನೆಗಳ ಗೋಡೆ, ಮಹಡಿಯಿಂದ ನೀರು, ಏನಿದರ ರಹಸ್ಯ?

ಸಾರಾಂಶ

* ಬಿಲಾಸ್‌ಪುರ ಜಿಲ್ಲೆಯಲ್ಲಿ ಮನೆಗಳ ಗೋಡೆಯಿಂದ ಜಿನುಗುತ್ತಿದೆ ನೀರು * ಮಳೆ ಬಾರದಿದ್ದರೂ ನೀರು ಹೊರ ಬರುತ್ತಿದೆ * ಏನಿದು ವಿಚಿತ್ರ? ಈ ವಿಚಿತ್ರಕ್ಕೇನು ಕಾರಣ?

ಶಿಮ್ಲಾ(ಮಾ.21): ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯಲ್ಲಿ ಕೆಲವರ ಮನೆಯಿಂದ ನಿಗೂಢವಾಗಿ ನೀರು ಹೊರಬರುತ್ತಿದೆ. ಇದರ ವಿಡಿಯೋವೊಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಜನರ ಮನೆಗಳ ಗೋಡೆಗಳು ಮತ್ತು ಮಹಡಿಗಳಿಂದ ನೀರು ಹೇಗೆ ನಿಗೂಢವಾಗಿ ಹೊರಬರುತ್ತಿದೆ ಎಂಬುದನ್ನು ನೋಡಬಹುದು. ವಿಡಿಯೋ ವೈರಲ್ ಆದ ತಕ್ಷಣ, ಬಿಲಾಸ್‌ಪುರ ಜಿಲ್ಲಾಧಿಕಾರಿ ಪಂಕಜ್ ರೈ ಕೂಡ ಗೋಡೆಗಳಿಂದ ನೀರು ಸೂಸುತ್ತಿರುವ ಜನರ ಮನೆಗಳಿಗೆ ಭೇಟಿ ನೀಡಿದರು.

ಈ ಬಗ್ಗೆ ಹಲವು ಊಹಾಪೋಹಗಳು ಎದ್ದಿವೆ. ಸದ್ಯಕ್ಕೆ, ಇದಕ್ಕೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಜಿಲ್ಲಾಧಿಕಾರಿ ಪಂಕಜ್ ರೈ ಶಿಮ್ಲಾ ನಿರ್ದೇಶನಾಲಯಕ್ಕೂ ಈ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು. ಇದನ್ನು ಪರಿಶೀಲಿಸಲು ಜಲತಜ್ಞರ ತಂಡವನ್ನು ಕರೆಯಲಾಗಿದೆ. ಮೂರು ದಿನಗಳಲ್ಲಿ ಪರಿಶೀಲಿಸಿ ವರದಿ ಸಿದ್ಧಪಡಿಸಲಾಗುವುದು. ಹೆಚ್ಚಿನ ಕಾರಣಗಳನ್ನು ಕಂಡುಹಿಡಿಯಲು ಇದರಿಂದ ಸಾಧ್ಯವಾಗುತ್ತದೆ ಎಂದಿದ್ದಾರೆ.

ಮಳೆ ಬಾರದಿದ್ದರೂ ನೀರು ಹೊರ ಬರುತ್ತಿದೆ

ಬೇಸಿಗೆಯ ದಿನಗಳಲ್ಲಿ ಮನೆಗಳ ಗೋಡೆ, ಮಹಡಿಗಳಿಂದ ಇಂತಹ ನೀರು ಹೊರಬರುತ್ತಿರುವುದು ಅಚ್ಚರಿ ಮೂಡಿಸುತ್ತದೆ ಎನ್ನುತ್ತಾರೆ ಗ್ರಾಮಸ್ಥರು. ಯಾಕೆಂದರೆ ಇದೆಲ್ಲವೂ ಮಳೆಗಾಲದಲ್ಲಿ ನಡೆದರೆ ಆಶ್ಚರ್ಯವೇನಿಲ್ಲ. ಆದರೆ ಇನ್ನೂ ಮಳೆಯಾಗಿಲ್ಲ ಹೀಗಿದ್ದರೂ ನೀರು ಗೋಡೆಗಳಿಂದ ಸುರಿಯುತ್ತಿದೆ. ಜಲಶಾಸ್ತ್ರಜ್ಞರಿಗಷ್ಟೇ ಇದರ ಹಿಂದಿನ ಕಾರಣವೇನೆಂದು ತಿಳಿಯಬಹುದು. .

ವಿವಿಧ ಬಡಾವಣೆಗಳ ಮನೆಗಳಿಗೆ ನೀರು ನುಗ್ಗುತ್ತಿದೆ

ಅನೇಕ ಜನರು ತಮ್ಮ ಮಲಗುವ ಕೋಣೆ, ಹಾಲ್, ಅಡುಗೆಮನೆ ಮತ್ತು ಸ್ನಾನಗೃಹದಿಂದ ಎಲ್ಲೆಡೆ ನೀರು ಬರುತ್ತಿದೆ ಎಂದು ಹೇಳಿದ್ದಾರೆ. ಇದು ಒಂದಲ್ಲ ಹಲವು ಮನೆಗಳಲ್ಲಿ ನಡೆಯುತ್ತಿದೆ. ಮತ್ತು ಈ ಎಲ್ಲಾ ಮನೆಗಳು ಬಿಲಾಸ್ಪುರ್ ನಗರದ ವಿವಿಧ ಪ್ರದೇಶಗಳಲ್ಲಿವೆ.

ಹಿಮಾಚಲ ಪ್ಯಾಕೆಜ್‌: 3 ಜನರಿಗೆ ಕೇವಲ 33 ಸಾವಿರ ರೂಪಾಯಿ

ಹಿಮಾಚಲ ಪ್ರದೇಶ ಅತ್ಯಂತ ರಮಣೀಯವಾದ ದೃಶ್ಯಗಳಿಗೆ ಬಹಳಷ್ಟು ಹೆಸರುವಾಸಿಯಾಗಿದೆ. ಹಿಮಾಚಲ ಪ್ರದೇಶದ ಪ್ರವಾಸವು ಮರೆಯಲಾಗದಂತಹ ಅನುಭೂತಿಯನ್ನು ಉಂಟು ಮಾಡುತ್ತದೆ. ಪ್ರಸ್ತುತ IRCTCಯ ಹಿಮಾಚಲ ಪ್ಯಾಕೇಜ್‌ ಅನ್ನು ನೀವು ಆನಂದಿಬಹುದು.

ಈ ಕೋವಿಡ್‌ 19 ನಿಂದಾಗಿ ಬೇಸತ್ತ ಜನರು ಈ ಬಾರಿಯ ಬೇಸಿಗೆ ರಜಾ ದಿನಗಳಲ್ಲಿ ಪ್ರವಾಸ ಆಯೋಜಿಸಲು ಬಯಸುತ್ತಾರೆ. ತಮ್ಮ ವಾರಾಂತ್ಯ ಅಥವಾ ಬೇಸಿಗೆ ರಜಾ ದಿನಗಳನ್ನು ನೆನಪಿನಲ್ಲಿ ಉಳಿಯುವಂತೆ ಮಾಡಲು IRCTC ಹಿಮಾಚಲ ಡಿಲೈಟ್ ಪ್ರವಾಸದ ಪ್ಯಾಕೆಜ್‌ ನೀಡುತ್ತಿದೆ. ಈ ಪ್ಯಾಕೆಜ್‌ನಲ್ಲಿ ಚಂಡೀಗಢ, ಮನಾಲಿ ಮತ್ತು ಶಿಮ್ಲಾಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗುತ್ತಿದೆ

ಹಿಮಾಚಲ ಪ್ರದೇಶದ ಪ್ರವಾಸ ಆನಂದಿಸುವವರಿಗೆ ಇದೊಂದು ವಿಶೇಷವಾದ ಪ್ಯಾಕೇಜ್‌ ಆಗಿದ್ದು, ನಿಮಗೆ ವಿಮಾನ ಟಿಕೆಟ್‌ಗಳಿಂದ ಆಹಾರ ಮತ್ತು ವಸತಿಯವರೆಗೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದೊಂದು 8 ದಿನಗಳ ಸಂಪೂರ್ಣವಾದ ಪ್ಯಾಕೇಜ್‌ ಪ್ರವಾಸವಾಗಿದ್ದು, 15 ನೇ ಮಾರ್ಚ್‌ 2022 ರಿಂದ 22 ಮಾರ್ಚ್‌ಗೆ ಕೊನೆಗೊಳ್ಳಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!