HAL ಹೆಸರಿನಲ್ಲಿ ಕುಟುಕಿದವರಿಗೆ ಗುಬ್ಬಿ ಹೆಲಿಕಾಪ್ಟರ್ ಘಟಕ ಉತ್ತರ, ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!

By Suvarna News  |  First Published Feb 6, 2023, 5:20 PM IST

ಗುಬ್ಬಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದ ಅತೀ ದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕ ಉದ್ಘಾಟಿಸಿದ್ದಾರೆ. ಬಳಿಕ ಮಾತನಾಡಿದ ಮೋದಿ, ಭಾರತದ ಅಭಿವೃದ್ಧಿ ವೇಗ ಹಾಗೂ ಇದೇ ಹೆಚ್ಎಎಲ್ ಹೆಸರು ಹಿಡಿದು ಹಲವರು ಸರ್ಕಾರವನ್ನು ಟೀಕಿಸಿದ್ದರು. ಇದೀಗ ಸತ್ಯ ಹೊರಬಂದಿದೆ. ಹೆಲಿಕಾಪ್ಟರ್ ಘಟಕ ಉದ್ಘಾಟನೆಯೊಂದಿಗೆ ಟೀಕಿಸಿದವರಿಗೆ ಉತ್ತರ ಸಿಕ್ಕಿದೆ ಎಂದರು. ಮೋದಿ ಭಾಷಣ ಹೈಲೈಟ್ಸ್ ಇಲ್ಲಿದೆ.
 


ಗುಬ್ಬಿ(ಫೆ.06): ಕೆಲ  ವರ್ಷಗಳ ಹಿಂದೆ ಹೆಚ್‌ಎಲ್ ಹೆಸರು ಹಿಡಿದು ಕೇಂದ್ರ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಲಾಗಿತ್ತು. ಸಂಸತ್ತಿನಲ್ಲಿ ಹಲವು ದಿನಗಳ ಕಾಲ ಗದ್ದಲ ಸೃಷ್ಟಿಸಲಾಗಿತ್ತು. ಹಲವರ ಟೀಕೆಯಿಂದ ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸಲಾಗಿತ್ತು. ಆದರೆ ಒಂದಲ್ಲ ಒಂದು ದಿನ ಸತ್ಯ ಹೊರಗೆ ಬರಲಿದೆ. ಇದೀಗ ತುಮಕೂರು ಹೆಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕ ಟೀಕಿಸಿದವರಿಗೆ ಉತ್ತರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಗುಬ್ಬಿ ಹೆಚ್‌ಎಎಲ್ ಘಟಕ ಉದ್ಘಾಟಿಸಿ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಆತ್ಮನಿರ್ಭರ ಭಾರತ, ಸರ್ಕಾರದ ಎದುರಿಸಿದ ಟೀಕೆ ಕುರಿತು ಮಾತನಾಡಿದ್ದಾರೆ.

ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನ  615 ಎಕರೆ ಜಮೀನಿನಲ್ಲಿ ತಲೆ ಎತ್ತಿರುವ ಹೆಚ್‌‌ಎಎಲ್‌ ಹೆಲಿಕ್ವಾಪ್ವರ್‌ ಉತ್ಪಾದನ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿಗೆ, ಆಯೋಜಿಸಿದ್ದ ವಸ್ತುಪ್ರದರ್ಶನ ವೀಕ್ಷಿಸಿದರು. ತುಮಕೂರು ಘಟಕದಲ್ಲಿ ನಿರ್ಮಾಣಗೊಳ್ಳಲಿರುವ ಹೆಲಿಕಾಪ್ಟರ್ ವೀಕ್ಷಿಸಿದರು. ಇದೇ ವೇಳೆ ಹೆಎಚ್‌ಎಎಲ್ ಘಚಕದ ಅಧ್ಯಕ್ಷರು ಮೋದಿಗೆ ಹೆಲಿಕಾಪ್ಟರ್ ಮಿನಿಮಾದರಿಯನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ತುಮಕೂರಿನ ಕೃಷಿ ಅಡಿಕೆಯ ಹಾರ ಹಾಗೂ ಅಡಿಕೆ ಹಾಳೆಯಿಂದ ತಯಾರಿಸಿದ ಪೇಟೆವನ್ನು ಉಡುಗೊರೆಯಾಗಿ ನೀಡಲಾಯಿತು. ಇದೇ ವೇಳೆ ತುಮಕೂರು ಕೈಗಾರಿಕೆ ಟೌನ್‌ಶಿಪ್ ಯೋಜನೆಗೂ ಉದ್ಘಾಟನೆ ಮಾಡಿದರು. ಇದೇ ವೇಳೆ ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರಿನಲ್ಲಿ ಜಲ್‌ ಜೀವನ್‌ ಅಭಿಯಾನದ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ  ನೇರವೇರಿಸಿದರು. 

Latest Videos

undefined

ಗುಬ್ಬಿ HAL ಘಟಕ ಪ್ರಧಾನಿ ಮೋದಿ ಅಡಗಲ್ಲು ಹಾಕಿ ಮೋದಿ ಉದ್ಘಾಟನೆ, ಇದು ಪರಿವರ್ತನೆ ಎಂದ ಸಿಎಂ ಬೊಮ್ಮಯಿ!

ತುಮಕೂರು ಜಿಲ್ಲಿ ಗುಬ್ಬಿ ತಾಲೂಕಿನ ನಿಟ್ಟೂರು ನಗರದ ಆತ್ಮೀಯ ನಾಗರೀಕ ಬಂಧು ಭಗಿನಿಯರೆ ನಿಮಗೆಲ್ಲಾ ನನ್ನ ನಮಸ್ಕಾರಗಳು ಎಂದು ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದರು.  ಕರ್ನಾಟಕ ಸಂತರು, ಋಷಿ ಮುನಿಗಳ ಭೂಮಿಯಾಗಿದೆ. ಸಿದ್ಧಗಂಗ ಮಠದ ಕೊಡುಗೆ ಅಪರವಾಗಿದೆ. ಪೂಜ್ಯ ಶ್ರೀವಿಕುಮಾರ್ ಸ್ವಾಮೀಜಿ ತ್ರಿವಿದಾಸೋಹಿ. ನಾನು ಪೂಜ್ಯ ಸಂತರಿಗೆ ನಮಮಿಸುತ್ತೇನೆ. ಗುಬ್ಬಿ ಚಿದಂಬರ ಆಶ್ರಮ, ಭಗವಾನ್ ಚನ್ನಬಸವೇಶ್ವರರಿಗೂ ನಾನು ಪ್ರಣಾಮ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು. 

ಕರ್ನಾಟಕದ ಉದ್ಯೋಗ ನೀಡಬಲ್ಲ, ಮಹಿಳೆಯರನ್ನು ಸಬಲೀಕರಣ ಮಾಡಬಲ್ಲ, ಮೇಕ್ ಇನ್ ಇಂಡಿಯಾ ಶಕ್ತಿಯನ್ನು ಇಮ್ಮಡಿಗೊಳಿಬಲ್ಲ ಯೋಜನೆ ಲೋಕಾರ್ಪಣೆಯಾಗಿದೆ. ದೇಶದ ಅತೀ ದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ ತುಮಕೂರಿಗೆ ಸಿಕ್ಕಿದೆ. ಇಂದು ತಮುಕೂರಿನಲ್ಲಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಯೋಜನೆ ಕೂಡ ಸಿಕ್ಕಿದೆ. ಇದರ ಜೊತೆಗೆ ತುಮಕೂರು ಗ್ರಾಮ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೂ ಚಾಲನೆ ಸಿಕ್ಕಿದೆ. ಕರ್ನಾಟಕ ಯುವ ಪ್ರತಿಭೆಯ ನಾಡು. ಡ್ರೋನ್ ಉತ್ಪಾದನೆ, ತೇಜಸ್ ಉತ್ಪಾದನೆ ಸೇರಿದಂತೆ ಹಲವು ಉತ್ಪದನಾ ಕ್ಷೇತ್ರದಲ್ಲಿ ಆಗುತ್ತಿರುವ ಮಹತ್ತರ ಬದಲಾವಣೆಯನ್ನು ವಿಶ್ವವೇ ನೋಡುತ್ತಿದೆ. ಡಬಲ್ ಎಂಜಿನ್ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಅನ್ನೋದಕ್ಕೆ ಇದು ಉದಾಹರಣೆಯಾಗಿದೆ.

2017ರಲ್ಲಿ ಒಂದು ಸಂಕಲ್ಪ ರೀತಿಯಲ್ಲಿ ಹೆಎಲ್ಎಲ್ ಘಟಕ ಶಿಲನ್ಯಾಸ ಮಾಡುವ ಸೌಭಾಗ್ಯ ಸಿಕ್ಕಿದೆ. ನಾವು ವಿದೇಶವನ್ನು ಅವಲಂಬಿಸುವುದನ್ನು ನಿಲ್ಲಿಸಬೇಕು. ಆತ್ಮನಿರ್ಭರತಗೆ ಒತ್ತು ನೀಡುವ ಉದ್ದೇಶದಿಂದ ಈ ಘಟಕ ಶಿಲನ್ಯಾಸ ಗೊಂಡಿತ್ತು. ನಾವು ಇದೀಗ ಸೇನೆಯ ಹಲವು ಶಸ್ತ್ರಾಸ್ತ್ರಗಳನ್ನು ಭಾರತ ಉತ್ಪಾದಿಸುತ್ತಿದೆ. ಏರ್‌ಕ್ರಾಫ್ಟ್, ಹೆಲಿಕಾಪ್ಟರ್, ಫೈಟರ್ ಜೆಟ್, ಟ್ರಾನ್ಸ್‌ಫೋರ್ಟ್ ಜೆಟ್ ಸೇರಿದಂತೆ ಎಲ್ಲವನ್ನೂ ಭಾರತವೇ ನಿರ್ಮಾಣ ಮಾಡುತ್ತಿದೆ. 2014ರ ಮೊದಲು 15 ವರ್ಷಗಳಲ್ಲಿ ಏರೋಸೆಕ್ಟರ್‌ನಲ್ಲಿ ಹೂಡಿಕೆಯಾಗಿದೆ. ಅದಕ್ಕಿಂದ ದ್ವಿಗಣ ಹೂಡಿಕೆ ಕಳೆದ 8 ರಿಂದ 9 ವರ್ಷದಲ್ಲಿ ಆಗಿದೆ. ನಮ್ಮ ಸೇನೆಯಲ್ಲೀಗ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರ ನೀಡಲಾಗುತ್ತಿದೆ. ಇದರ ಜೊತೆಗೆ ನಮ್ಮ ಡಿಫೆನ್ಸ್ ರಫ್ತು ಡಬಲ್ ಆಗಿದೆ. ಮುಂದಿನ ದಿನಗಳಲ್ಲಿ ತುಮಕೂರಿನಲ್ಲಿ ಸಾವಿರಾರು ಹೆಲಿಕಾಪ್ಟರ್ ಉತ್ಪಾದನೆಯಾಗಲಿದೆ. ಇದರಿಂದ 4 ಲಕ್ಷ ಕೋಟಿ ವ್ಯವಹಾರ ಆಗಲಿದೆ ಎಂದು ಮೋದಿ ಹೇಳಿದ್ದಾರೆ.

ಜನಪರ ಕಾನೂನು ಕಾಂಗ್ರೆಸ್‌ಗೆ ಬೇಕಿಲ್ಲ, ಅದಾನಿ ಪ್ರಕರಣ ತನಿಖೆ ಗೆದ್ದಲಕ್ಕೆ ಜೋಶಿ ತಿರುಗೇಟು!

ಈ ರೀತಿ ಹೆಲಿಕಾಪ್ಟರ್ ಉತ್ಪಾದನೆಯಾದರೆ ನಮ್ಮ ಸೇನಾ ಶಕ್ತಿ ದ್ವಿಗುಣ ಗೊಳ್ಳಲಿದೆ. ಇದರಿಂದ ನಮ್ಮ ಯುವ ಸಮೂಹಕ್ಕೆ ಉದ್ಯೋಗ ಸಿಗಲಿದೆ. ಹೆಚ್ಎಎಲ್ ಉತ್ಪಾದನೆ ಘಟಕದಿಂದ ಇಲ್ಲಿ ಹಲವು ವ್ಯಾಪಾರ, ಉದ್ಯೋಗಕ್ಕೆ ಅವಕಾಶ ಸಿಗಲಿದೆ. ಕಳೆದ 8 ವರ್ಷದಲ್ಲಿ ಸರ್ಕಾರಿ ಫ್ಯಾಕ್ಟರಿ, ಸರ್ಕಾರಿ ಉತ್ಪಾದನೆ ಹೆಚ್ಚಿಸಲಿದೆ. ಇದರ ಜೊತೆದೆ ಖಾಸಗೀಕರಣಕ್ಕೂ ಬಾಗಿಲು ತೆರಿದಿದೆ. ಇದರಿಂದ ಬಂದ ಲಾಭವನ್ನು HALನಲ್ಲಿ ನೋಡುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಇದೇ ಹೆಎಲ್ಎಲ್ ವಿಚಾರವನ್ನು ಹಿಡಿದು ಹಲವರು ನಮ್ಮ ಸರ್ಕಾರದ ವಿರುದ್ಧ ಹಲವು ಆರೋಪ ಮಾಡಲಾಯಿತು. ಇದೇ ಹೆಚ್ಎಎಲ್ ವಿಚಾರವನ್ನು ಹಿಡಿದು ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸಲಾಗಿತ್ತು. ಸಂಸತ್ತಿನಲ್ಲಿ ಹಲವು ಘಂಟೆಗಳ ಕಾಲ ಗದ್ದಲ ಸೃಷ್ಟಿಸಲಾಗಿತು. ಆದರೆ ಒಂದಲ್ಲ ಒಂದು ದಿನ ಸತ್ಯ ಹೊರಬರಲಿದೆ. ಇಂದು ಹೆಚ್ಎಎಲ್ ಹೆಲಿಕಾಪ್ಟರ್ ಫ್ಯಾಕ್ಟರಿ  ಈ ಹಿಂದಿನ ಸುಳ್ಳು ಆರೋಪಗಳಿಗೆ ಉತ್ತರವಾಗಿದೆ ಎಂದು ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. 

ಇಂಡಸ್ಟ್ರೀಯಲ್ ಟೌನ್‌ಶಿಪ್‌ನಿಂದ ಔದ್ಯೋಗಿಕ ಕ್ರಾಂತಿಯಾಗಿದೆ. ಚೆನ್ನೈ, ಬೆಂಗಳೂರು , ಬೆಂಗಳೂರು ಮಂಬೈ ಹಾಗೂ ಹೈದರಾಬಾದ್ ಬೆಂಗಳೂರು ಕಾರಿಡಾರ್ ಕಾಮಗಾರಿ ನಡೆಯುತ್ತಿದೆ. ಇದರಿಂದ ಕರ್ನಾಟಕ ಪ್ರಮುಖ ನಗರಗಳ ಸಂಪರ್ಕ ಬಲಗೊಳ್ಳಲಿದೆ. ಹೈವೇ, ಬೆಂಗಳೂರು ವಿಮಾನ ನಿಲ್ದಾಣ, ಮಂಗಳೂರು ಬಂದರು, ಗ್ಯಾಸ್ ಸಂಪರ್ಕ ಸೇರಿದಂತೆ ಹಲವು ಸಂಪರ್ಕಗಳು ಜೊತೆಯಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಭೂಕಂಪ ಪೀಡಿತ ಟರ್ಕಿಗೆ ಭಾರತ ಸಹಾಯ ಹಸ್ತ: ಟರ್ಕಿಯತ್ತ ಹೊರಟ ರಕ್ಷಣಾ ತಂಡ

ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,000ಕ್ಕೂ ಹೆಚ್ಚು ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದರಿಂದ ತುಮಕೂರು, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಲಾಭವಾಗಲಿದೆ. ಪ್ರತಿ ಮನೆಗೆ ನೀರು ತಲುಪಿಸುವ ಡಬಲ್ ಎಂಜಿನ್ ಸರ್ಕಾರದ ಬದ್ಧತೆಯಾಗಿದೆ. ಬಜೆಟ್ ಚರ್ಚೆ ಇಡೀ ವಿಶ್ವದಲ್ಲೇ ಚರ್ಚೆಯಾಗುತ್ತಿದೆ. ಪ್ರತಿ ವರ್ಗದ ವಿಕಸನಕ್ಕೆ ಈ ಬಾರಿಯ ಬಜೆಟ್ ಬಲ ನೀಡಲಿದೆ. ಈ ಬಜೆಟ್ ಸಮರ್ಥ ಭಾರತ, ಸಂಪನ್ನ ಭಾರತ, ಶಕ್ತಿಮಾನ್ ಭಾರತ್, ಸಂಪೂರ್ಣ ಭಾರತಕ್ಕೆ ಮಹತ್ವದ ಕೂಡುಗೆ ನೀಡಲಿದೆ ಎಂದು ಮೋದಿ ಹೇಳಿದರು.

ಭಾರತದಲ್ಲಿ ಉದ್ಯೋಗ ನೀಡಬಲ್ಲ ಬಜೆಟ್ ಇದು. ಮಹಿಳೆಯರನ್ನು ಸಬಲೀಕರಣ ಮಾಡಬಲ್ಲ ಬಜೆಟ್. ಕರ್ನಾಟಕದ ಪ್ರತಿಯೊಬ್ಬರಿಗೂ ಈ ಬಜೆಟ್ ಲಾಭ ಕೊಡಲಿದೆ. ಸಮಾಜದ ಎಲ್ಲಾ ವರ್ಗಗಳನ್ನು ಸಶಕ್ತೀಕರಣಗೊಳಿಸಲು ಯೋಜನೆ ರೂಪಿಸುತ್ತಿದೆ. ಕೆಲ ವರ್ಗಗಳಿಗೆ ಸರ್ಕಾರಿ ಯೋಜನಗಳಿಗೆ ಸಿಗುತ್ತಿರಲಿಲ್ಲ. ಈ ಹಿಂದಿನ ವರ್ಷಗಳಲ್ಲಿ ಪ್ರತಿ ವರ್ಗಕ್ಕೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಿದ್ದೇವೆ. ಈ ಹಿಂದೆ ಈ ವರ್ಗಗಳು ಸೌಲಭ್ಯದಿಂದ ವಂಚಿತರಾಗಿತ್ತು. ಕಾರ್ಮಿಕ್ ಶ್ರಮಿಕ್ ಯೋಜನೆ ಮೂಲಕ ಕಾರ್ಮಿಕರಿಗೆ ಸೌಲಭ್ಯ ನೀಡಲಾಗಿದೆ. ಸಣ್ಣ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಆರಂಭಿಸಲಾಗಿದೆ. ಬೀದಿ ಬದಿ ವ್ಯಾಪರಿಗಳಿಗಾಗಿ ಬ್ಯಾಂಕ್ ಮೂಲಕ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ ನೀಡಿದ್ದೇವೆ. ಇದೇ ಮೊದಲ ಬಾರಿಗೆ ವಿಶ್ವಕರ್ಮ ಸಮುದಾಯಕ್ಕಾಗಿ ಯೋಜನೆ ಜಾರಿಗೊಳಿಸಲಾಗಿದೆ. ಕೈಸುಬು ಮೂಲಕ ವಿಶ್ವಕರ್ಮ ಸಮುದಾಯ ಭಾರತದ ಪರಂಪರೆಯನ್ನು ಎತ್ತಿಹಿಡಿದೆ, ಕುಂಬಾರ, ಕಮ್ಮಾರ, ಅಕ್ಕಸಾಲಿಗ, ಶಿಲ್ಪಿ, ಬಡಗಿ ಸೇರಿದಂತೆ ಹಲವು ಸಮುದಾಯಗಳಿಗೆ ಸರ್ಕಾರ ವಿಶೇಷ ಯೋಜನೆ ಜಾರಿ ತಂದಿದೆ ಎಂದರು.

ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಪಡಿತರ ಖರೀದಿಗೂ ಪರದಾಡುವ ಸ್ಥಿತಿ ಇತ್ತು. ಇದಕ್ಕಾಗಿ ಬಡ ಕುಟುಂಬಗಳಿಗೆ ಉಚಿತ ಪಡಿತರ ನೀಡಲಾಗಿದೆ. ಇನ್ನು ಪ್ರತಿಯೊಬ್ಬರಿಗೂ ಸೂರು ನೀಡುವ ಯೋಜನೆಗಾಗಿ ಹಣ ಮೀಸಲಿಡಲಾಗಿದೆ. ಇದರಿಂದ ಕರ್ನಾಟಕ ಅನೇಕ ಬಡ ಕುಟುಂಬಗಳಿಗೆ ಮನೆ ಸಿಗಲಿದೆ. ಈ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಹಲವು ಯೋಜನೆ ನೀಡಲಾಗಿದೆ. 7 ಲಕ್ಷ ರೂಪಾಯಿ ಆದಾಯವರೆಗೆ ಯಾವುದೇ ಆದಾಯ ತೆರಿಗೆ ಕಟ್ಟಬೇಕಿಲ್ಲ. ನಿವೃತ್ತ ಹೊಂದಿರುವ ಹಿರಿಯ ನಾಗರೀಕರ ಠೇವಣಿ ಮೊತ್ತವನ್ನು 15 ಲಕ್ಷ ರೂಪಾಯಿಂದ 30 ಲಕ್ಷಕ್ಕೆ ಏರಿಸಲಾಗಿದೆ. ಇದರಿಂದ ಪ್ರತಿ ತಿಂಗಳ ಸಿಗುವ ರಿಟರ್ನ್ ಹೆಚ್ಚಾಗಲಿದೆ ಎಂದು ಮೋದಿ ಹೇಳಿದರು.

ಸಿರಿಧಾನ್ಯಕ್ಕೆ ಕರ್ನಾಟಕ ವಿಶೇಷವಾಗಿದೆ. ಸಿರಿಧಾನ್ಯವನ್ನು ಇದೀಗ ಕೇಂದ್ರ ಸರ್ಕಾರ ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದೆ. ಶ್ರೀ ಅನ್ನವಾಗಿ ಸಿರಿಧಾನ್ಯವಾಗಿ ಬಡ್ತಿ ಪಡೆದಿದೆ. ಕರ್ನಾಟಕದ ರಾಗಿ ಮುದ್ದೆ, ರಾಗಿ ರೊಟ್ಟಿಯನ್ನು ಯಾರು ಮೆರಯಲು ಸಾಧ್ಯ. ಈ ಬಜೆಟ್‌ನಲ್ಲಿ ಶ್ರೀ ಅನ್ನದ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರಿಂದ ಕರ್ನಾಟಕದ ಹಲವು ಜಿಲ್ಲೆಗಳು, ಸಣ್ಣ ಸಣ್ಣ ರೈತರಿಗೆ ಉಪಯುಕ್ತ ಕೊಡುಗೆ ಸಿಗಲಿದೆ ಎಂದರು.

click me!