ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಗೆ ನೀಡಿದ ವೇಗಕ್ಕೆ ಹೆಎಎಲ್ ಘಟಕ ಸಾಕ್ಷಿಯಾಗಿದೆ. ಇದು ಪರಿವರ್ತನೆ. ತುಮಕೂರಿನಲ್ಲಿ ಔದ್ಯೋಗಿಕ ಕ್ರಾಂತಿಯಾಗಿದೆ. ಮೋದಿ ನಾಯಕತ್ವದಲ್ಲಿ ಕರ್ನಾಟಕ ಹೊಸ ಅಧ್ಯಾಯ ಬರೆದಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಪ್ರಧಾನಿ ಮೋದಿ ತುಮಕೂರು ಹೆಎಎಲ್ ಘಚಕ ಉದ್ಘಾಟನೆ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಮಾಡಿದ ಭಾಷಣ ವಿವರ ಇಲ್ಲಿದೆ.
ಗುಬ್ಬಿ(ಫೆ.06): ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ತುಮಕೂರಿನಲ್ಲಿ ಔದ್ಯೋಗಿಕ ಕ್ರಾಂತಿಯಾಗಿದೆ. ದೇಶದ ಅತೀ ದೊಡ್ಡ ಹೆಲಿಕಾಪ್ಟರ್ ಘಟಕ ಉದ್ಘಾಟನೆಯಾಗಿದೆ. ಈ ಹಿಂದೆ ಒರ್ವ ಪ್ರಧಾನಿ ಅಡಗಲ್ಲು ಹಾಕಿದರೆ, 3 ಅಥವಾ ನಾಲ್ಕನೇ ಪ್ರಧಾನಿ ಉದ್ಘಾಟನೆ ಮಾಡುತ್ತಿದ್ದರು. ಆದರೆ ಪ್ರಧಾನಿ ಮೋದಿ ಅಭಿವೃದ್ಧಿಗೇ ನೀಡಿರುವ ವೇಗಕ್ಕೆ ಇದು ಸಾಕ್ಷಿ. ಮೋದಿ ಅಡಿಗಲ್ಲು ಹಾಕಿ ಮೋದಿಯೇ ಉದ್ಘಾಟನೆ ಮಾಡಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸಿದ್ದಗಂಗಾ ಸ್ವಾಮೀಜಿಗಳ ಪುಣ್ಯಭೂಮಿಯಲ್ಲಿ ಔದ್ಯೋಗಿಕ ಕ್ರಾಂತಿಯಾಗುತ್ತಿರುವುದು ನಮ್ಮ ಭಾಗ್ಯ ಎಂದು ಭಾವಿಸುತ್ತೇನೆ. ಈ ಔದ್ಯೋಗಿಕ ಕ್ರಾಂತಿಯ ಜೊತೆಗೆ ಆತ್ಮನಿರ್ಭರ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಬೊಮ್ಮಾಯಿ ಧನ್ಯವಾದ ಹೇಳಿದ್ದಾರೆ. ಹೆಚ್‌ಎಲ್ ತನ್ನದೇ ಆದ ಇತಿಹಾಸ ಹೊಂದಿದೆ. ಸ್ವತಂತ್ರ ಪೂರ್ವದ ಈ ಸಂಸ್ಥೆ, ವಿಶ್ವದ ಏರೋಸ್ಪೇಸ್ ಸಂಸ್ಥೆಯಾಗಿ ಬೆಳೆದು ನಿಂತಿದೆ. ಮೂರು ವರ್ಷದ ಹಿಂದೆ ಪ್ರಧಾನಿ ಮೋದಿ ಅಡಿಗಲ್ಲು ಹಾಕಿದ್ದಾರೆ. ಇದೀಗ ಅವರೇ ಈ ಘಟಕ ಉದ್ಘಾಟನೆ ಮಾಡುತ್ತಿರುವುದು ಸೌಭಾಗ್ಯ. ಸಾಮಾನ್ಯವಾಗಿ ಒರ್ವ ಪ್ರಧಾನಿ ಅಡಿಗಲ್ಲು ಹಾಕಿ ಎರಡನೇ ಅಥವಾ 3ನೇ ಪ್ರಧಾನಿ ಉದ್ಘಾಟನೆಯಾಗುತ್ತಿತ್ತು. ಆದರೆ ಪ್ರಧಾನಿ ಮೋದಿ ಅಭಿವೃದ್ಧಿಗೆ ನೀಡುತ್ತಿರುವ ವೇಗ ಇಲ್ಲಿ ನೋಡಬಹುದು. ಮೋದಿ ಅಡಿಗಲ್ಲು ಹಾಕಿ ಮೋದಿಯೇ ಉದ್ಘಾಟಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.
HAL ಹೆಸರಿನಲ್ಲಿ ಕುಟುಕಿದವರಿಗೆ ಗುಬ್ಬಿ ಹೆಲಿಕಾಪ್ಟರ್ ಘಟಕ ಉತ್ತರ, ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!
ಇಲ್ಲಿ ಲಘು ಹೆಲಿಕಾಪ್ಟರ್ ಉತ್ಪಾದನೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಹೆವಿ ಹೆಲಿಕಾಪ್ಟರ್ ಉತ್ಪಾದನೆ ಕೂಡ ಸಾಧ್ಯವಾಗಲಿದೆ. ಒಂದು ಕಾಲವಿತ್ತು. ನಾವು ಎಲ್ಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವು. ಇದೀಗ ಆತ್ಮನಿರ್ಭರ ಭಾರತ ಮೂಲಕ ರಕ್ಷಣಾ ವಲಯದ ಬಹುತೇಕ ಉತ್ಪನ್ನಗಳನ್ನು ಭಾರತ ಉತ್ಪಾದಿಸುತ್ತಿದೆ. ಜೊತೆಗೆ ವಿದೇಶಗಳಿಗೆ ರಫ್ತು ಮಾಡುತ್ತಿದೆ. ಇದು ಪರಿವರ್ತನೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಕೆಂಪು ಕೋಟೆ ನಿಂತು ಮೋದಿ ಮನೆ ಮನೆಗೆ ನೀರು ಕೊಡುತ್ತೇವೆ ಎಂದು ಘೋಷಿಸಿದ್ದರು. ಇದೀಗ ಪ್ರಧಾನಿ ಮೋದಿ ಜಲಜೀವನ ಮಿಷನ್ ಅಡಿಯಲ್ಲಿ ಮನೆ ಮನೆಗೆ ನೀರು ಕೊಡುತ್ತಿದ್ದಾರೆ. 2024ರ ಅಂತ್ಯದ ವೇಳೆಗೆ ಎಲ್ಲಾ ಮನೆಗೆ ನೀರು ಪೂರೈಕೆಯಾಗಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಡಬಲ್ ಎಂಜಿನ ಸರ್ಕಾರ ಏನು ಮಾಡಿದೆ ಅನ್ನೋ ಪ್ರಶ್ನಗೆ ಇವೆಲ್ಲ ಉತ್ತರವಾಗಿದೆ.
ಹೆಎಲ್ಎಲ್ ಯುನಿಟ್ ತುಮಕೂರಿಗೆ ಬರಲು ಮೋದಿ ಕಾರಣ, ಬೆಂಗಳೂರು ಚೆನ್ನೈ ಕಾರಿಡಾರ್ ಬರುತ್ತಿದೆ. ಮಲ್ಟಿ ಮೋಡ್ ಅಪ್ರೋಚ್ ಉತ್ಪಾದನಾ ಘಟಕ ಕೂಡ ತಲೆಎತ್ತುತ್ತಿದೆ. ಇದಕ್ಕಾಗಿ 500ಕ್ಕೂ ಹೆಚ್ಚು ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಅಮೃತ ಕಾಲದಲ್ಲಿ ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಬಂದಿದೆ. ಮೋದಿ ನಾಯಕತ್ವದಲ್ಲಿ ವಿಶ್ವದಲ್ಲೇ ಭಾರತಕ್ಕೆ ಮಹತ್ವದ ಸ್ಥಾನ ಸಿಗುತ್ತಿದೆ. ಇವತ್ತಿಗೆ ಜಗತ್ತಿಗೆ ಮಾರ್ಗದರ್ಶನ ಮಾಡುವ ಭಾಗ್ಯ ಭಾರತಕ್ಕ ಒದಗಿ ಬಂದಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಜನಪರ ಕಾನೂನು ಕಾಂಗ್ರೆಸ್‌ಗೆ ಬೇಕಿಲ್ಲ, ಅದಾನಿ ಪ್ರಕರಣ ತನಿಖೆ ಗೆದ್ದಲಕ್ಕೆ ಜೋಶಿ ತಿರುಗೇಟು!
ಡಬಲ್ ಎಂಜಿನ್ ಸರ್ಕಾರ ಅತ್ಯಂತ ವೇಗದಲ್ಲಿ ಅಭಿವೃದ್ಧಿ ಮಾಡುತ್ತಿದೆ. ಮತ್ತಷ್ಟು ಅಭಿವೃದ್ಧಿಗೆ ನಿಮ್ಮ ಆಶೀರ್ವಾದ ಬೇಕು ಎಂದು ಮನವಿ ಬೊಮ್ಮಾಯಿ ಮನವಿ ಮಾಡಿದ್ದಾರೆ.
ರಾಜನಾಥ್ ಸಿಂಗ್ ಭಾಷಣ:
ಕರ್ನಾಟಕದ ಐತಿಹಾಸಿಕ ಹಾಗೂ ಪಾವನ ಭೂಮಿಗೆ ಪ್ರಧಾನಿ ನರೇಂದ್ರ ಮೋದಿಯನ್ನು ಸ್ವಾಗತ ಕೋರಿದ ರಾಜನಾಥ್ ಸಿಂಗ್, ಕನ್ನಡದಲ್ಲಿ ನಿಮಗೆ ಹೃದಯಪೂರ್ವ ಸ್ವಾಗತ ಎಂದು ಹೇಳಿ ಭಾಷಣ ಆರಂಭಿಸಿದರು. ಕರ್ನಾಟಕ ಎಂದರೆ ಭವಿಷ್ಯದ ಭಾರತ, ಕರ್ನಾಟಕ ಎಂದರೆ ಅಭಿವೃದ್ಧಿ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ರೇಷ್ಮೆ, ಸ್ಟೀಲ್, ಸೇರಿದಂತೆ ಹಲವು ರಫ್ತುಗಳಿಗೆ ತುಮಕೂರು ಕೊಡುಗೆ ಅಪರವಾಗಿದೆ. ಇಂದು ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಆರಂಭಗೊಂಡ ಹೆಚ್‌ಎಲ್ ಲಘು ಹೆಲಿಕಾಪ್ಟರ್ ಉತ್ಪಾದನ ಘಟಕ ಉದ್ಘಾಟನೆಗೊಂಡಿದೆ. ಇದು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ್ ಭಾರತದತ್ತ ಸಾಗುತ್ತಿರುವ ಐತಿಹಾಸಿಕ ಕ್ಷಣವಾಗಿದೆ. ಇದು ಮಹತ್ಮಾ ಗಾಂಧಿ ಅರ ಸ್ವದೇಶಿ ಆಂದೋಲನಕ್ಕೆ ಪೂರಕವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ತುಮಕೂರಿನ ಹೆಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕ, ಕರ್ನಾಟಕದ ಮೂಲದ ಯೋಧರ ಬಲಿದಾನಕ್ಕೆ ನೀಡಿದ ಗೌರವವಾಗಿದೆ. ಐಟಿ ಕ್ಷೇತ್ರವಾದ ಬೆಂಗಳೂರಿನ ಸಮೀಪದಲ್ಲಿ ನಾವಿದ್ದೇವೆ. ಕರ್ನಾಟಕ ಉತ್ಪನ್ನ ತಯಾರಿಕೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ಸ್ವತಂತ್ರ ಹೋರಾಟ ಭಾರತದ ಮೊದಲ ಚಳುವಳಿಯಾದರೆ, ಆತ್ಮನಿರ್ಭರ್ ಭಾರತ 2ನೇ ಚಳುವಳಿಯಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.