ಅದಾನಿ ಹಗರಣದ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಸತತ 3ನೇ ದಿನ ಅಧಿವೇಶನಕ್ಕೆ ಅಡ್ಡಿಯನ್ನುಂಟು ಮಾಡಿದೆ. ಬಳಿಕ ಪ್ರಧಾನಿ ಮೋದಿ ಹಗರಣ ಚರ್ಚೆಗೆ ಅವಕಾಶ ನೀಡದೆ ಪಲಾಯನ ಮಾಡುತ್ತಿದೆ ಎಂದು ಆರೋಪಿಸಿದೆ. ಕಾಂಗ್ರೆಸ್ ಆರೋಪ ಹಾಗೂ ಗದ್ದಲಕ್ಕೆ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಇಷ್ಟೇ ಅಲ್ಲ ಕಳೆದ 9 ವರ್ಷದಲ್ಲಿ ಕಾಂಗ್ರೆಸ್ ಆಡಿದ ನಾಟಕ ವಿವರಿಸಿದ್ದಾರೆ.
ನವದೆಹಲಿ(ಫೆ.06) ಕೇಂದ್ರದಲ್ಲಿ ಸರ್ಕಾರ ಹಾಗೂ ವಿಪಕ್ಷ ನಡುವೆ ಅದಾನಿ ಪ್ರಕರಣ ಜಟಾಪಟಿ ತೀವ್ರಗೊಳ್ಳುತ್ತಿದೆ. ಅಧಿವೇಶನದ ಮೂರನೇ ದಿನವೂ ಕಾಂಗ್ರೆಸ್ ಜೆಪಿಸಿ ತನಿಖೆಗೆ ಪಟ್ಟು ಹಿಡಿದಿದೆ. ಸತತ ಮೂರನೇ ದಿನ ಕಾಂಗ್ರೆಸ್ ಪ್ರತಿಭಟನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಕಳೆದ 9 ವರ್ಷದಲ್ಲಿ ಸಂಸದೀಯ ಸಂಪ್ರದಾಯಗಳನ್ನು ಅವಮಾನಿಸಿಕೊಂಡು ಬರುತ್ತಿದೆ. ಸಂಸತ್ತು ನಡೆಯುವುದೇ ಕಾಂಗ್ರೆಸ್‌ಗೆ ಇಷ್ಟವಿಲ್ಲ. ಜನಪರ ಕಾನೂನು ಕರುವುದು ಕಾಂಗ್ರೆಸ್‌ಗೆ ಬೇಕಿಲ್ಲ. ಪ್ರಧಾನಿ ಮೋದಿ ಸರ್ಕಾರದಲ್ಲಿ ಸಂಸತ್ತಿನ ಐತಿಹಾಸಿಕ ಹಾಗೂ ಸದ್ಬಳಕೆ ಉತ್ಪಾದನೆ ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಜೋಶಿ ಹೇಳಿದ್ದಾರೆ.
ಸದನದಲ್ಲಿ ಅದಾನಿ ಹಗರಣದ ಜೆಪಿಸಿ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಸತತ 3ನೇ ದಿನವೂ ಗದ್ದಲ ಸೃಷ್ಟಿಸಿತ್ತು. ಅದಾನಿ ಹಗರಣದಲ್ಲಿ ಮೋದಿಗೆ ಲಿಂಕ್ ಇದೆ. ಹೀಗಾಗಿ ಜೆಪಿಸಿ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಇದರಿಂದ ಅಧಿವೇಶವನ್ನು 2 ಗಂಟೆವರೆಗೆ ಮುಂದೂಡಲಾಗಿತ್ತು. ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಜೈರಾಂ ರಮೇಶ್ ಟ್ವೀಟ್ ಮೂಲಕ ಬಿಜೆಪಿ ಹಾಗೂ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮೋದಿ ಸರ್ಕಾರ ಪಲಾಯನ ಮಾಡುತ್ತಿದೆ ಎಂದು ಆರೋಪಿಸಿದ್ದರು. ಜೈರಾಂ ರಮೇಶ್ ಆರೋಪಕ್ಕೆ ಪ್ರಹ್ಲಾದ್ ಜೋಶಿ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಇಷ್ಟೇ ಅಲ್ಲ ಕಾಂಗ್ರೆಸ್ ಕಳೆದ 9 ವರ್ಷಗಳಲ್ಲಿಅಧಿವೇಶನ ಕುರಿತು ಹೊಂದಿರುವ ಕಾಳಜಿಯನ್ನು ಉದಾಹರಣೆ ಸಮೇತ ಬಯಲಿಗೆಳೆದಿದ್ದಾರೆ.
ಅದಾನಿ ಸಮೂಹದ ಬಗ್ಗೆ ಮಾರುಕಟ್ಟೆ ನಿಯಂತ್ರಕರ ನಿಗಾ; ದೇಶದ ಇಮೇಜ್‌ಗೆ ಧಕ್ಕೆ ಇಲ್ಲ: ನಿರ್ಮಲಾ ಸೀತಾರಾಮನ್
ಇದು ರಾಜನಿಗಿಂತ ಹೆಚ್ಚು ನಿಷ್ಠೆ ತೋರುವ ಪ್ರಕರಣಕ್ಕೆ ಅತ್ಯುತ್ತಮ ನಿದರ್ಶನವಾಗಿದೆ. ಅಧಿವೇಶನ ಸರಾಗವಾಗಿ ನಡೆಯಲು ಕಾಂಗ್ರೆಸ್‌ಗೆ ಎಳ್ಳಷ್ಟು ಇಷ್ಟವಿಲ್ಲ. ಕಾಂಗ್ರೆಸ್‌ಗೆ ಜನವರ ವಿಚಾರಗಳು, ಮಸೂದೆಗಳು, ಚರ್ಚೆಯ ಅವಶ್ಯಕತೆ ಇಲ್ಲ ಎಂದು ಜೋಶಿ ಹೇಳಿದ್ದಾರೆ. ಮೋದಿ ಸರ್ಕಾರದ ಅಡಿಯಲ್ಲಿ ಕಾಂಗ್ರೆಸ್ ಸಂಸದೀಯ ಸಂಪ್ರದಾಯಗಳನ್ನು ಅವಾಮಾನಿಸುತ್ತಲೇ ಬಂದಿದೆ. ಕಾಂಗ್ರೆಸ್‌ನ ಪ್ರಮುಖ ನಾಯಕರು ಸಂಸತ್ತಿಗೆ ಹಾಜರಾಗುವ ಬದಲು ವಿದೇಶಗಳಲ್ಲಿ ರಜಾದಿನಗಳನ್ನು ಕಳೆಯಲು ಬಯಸುತ್ತಾರೆ. ರಾಷ್ಟ್ರಪತಿ ಜಂಟಿ ಸದನ್ನುದ್ದೇಶಿ ಭಾಷಣ ಮಾಡಿದಾಗಲೂ ಕಾಂಗ್ರೆಸ್ ಅವರನ್ನು ಅವಮಾನಿಸಿದೆ. ಜಂಟಿ ಸದವನ್ನುದ್ದೇಶಿ ರಾಷ್ಟ್ರಪತಿ ಭಾಷಣ ಮಾಡುವ ವೇಳೆ ಕಾಂಗ್ರೆಸ್ ನಾಯಕರು ಸಂಸತ್ತಿನಿಂದ ದೂರ ಉಳಿದುಕೊಂಡಿದ್ದರು. ಈ ಮೂಲಕ ರಾಷ್ಟ್ರಪತಿಗೆ ಅವಮಾನ ಎಸಗಿದ್ದಾರೆ ಎಂದು ಜೋಶಿ ಹೇಳಿದ್ದಾರೆ.
Classic case of sounding more loyal than the king!
The facts are- Congress is least interested in letting Parliament run. They are least bothered about pro-people legislations being brought and they detest the historic productivity of Parliament under the Modi Government. https://t.co/zoVXE1BXmW
ಬಿಜೆಪಿ ಸರ್ಕಾರ ಅಭಿವೃದ್ಧಿ ಹಾಗೂ ದೂರದೃಷ್ಟಿ ಆಧಾರಿತ ಬಜೆಟ್ ಮಂಡಿಸಿದೆ. ಮೋದಿ ಸರ್ಕಾರ ಮಂಡಿಸಿದ ಬಜೆಟ್‌ಗೆ ಜನಸಾಮಾನ್ಯರು, ಸಾಮಾಜದ ದಿಗ್ಗಜರು, ಆರ್ಥಿಕ ತಜ್ಞರು, ಉದ್ಯಮಿ ವಲಯದ ಹಿರಿಯರು ಮೆಚ್ಚುಗೆ ಸೂಚಿಸಿದ್ದಾರೆ. ಇದು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಧಿವೇಶನ ನಡೆಸಲು ಕಾಂಗ್ರೆಸ್ ಅನುವು ಮಾಡಿಕೊಡುತ್ತಿಲ್ಲ ಎಂದು ಜೋಶಿ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕರಿಗೆ ಒಂದು ಸಲಹೆ ನೀಡಿದ್ದಾರೆ. ತೆರಿಗೆದಾರರ ಹಣದ ಕುರಿತು ಸ್ವಲ್ಪ ಕಾಳಜಿ ತೋರಿಸಿ ಸಂಸತ್ತಿನ ಅಧಿವೇಶನಕ್ಕೆ ಅವಕಾಶ ನೀಡುವುದು ಉತ್ತಮ ಎಂದಿದ್ದಾರೆ.
ಅದಾನಿ ಗ್ರೂಪ್ ವಿರುದ್ಧ ಜೆಪಿಸಿ ತನಿಖೆಗೆ ಆಗ್ರಹಿಸಿ ಫೆ.6ಕ್ಕೆ ಕಾಂಗ್ರೆಸ್ ದೇಶವ್ಯಾಪಿ ಪ್ರತಿಭಟನೆ!
ಕಾಂಗ್ರೆಸ್ ಇದೀಗ ಗದ್ದಲ ಸೃಷ್ಟಿಸುತ್ತಿರುವ ವಿಚಾರದ ಕುರಿತು ಹಣಕಾಸು ಸಚಿವರು ಉತ್ತರಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆ ಮುನ್ನುಗ್ಗುತ್ತಿರುವ ರೀತಿಗೆ ಕಾಂಗ್ರೆಸ್ ಬೆಚ್ಚಿ ಬಿದ್ದಿದೆ. ಇದನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ನೀಚ ರಾಜಕೀಯ ಮಾಡುತ್ತಿದೆ ಎಂದು ಜೋಶಿ ಟ್ವೀಟ್ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ.