ಜಲ್ಮುರಿ, ಬೋಟ್ ಪ್ರಯಾಣ ಬಳಿಕ ಫುಟ್ಬಾಲ್, ಹೊಸ ಟ್ರೆಂಡ್ ಸೆಟ್ ಮಾಡಿದ ಪ್ರಧಾನಿ ಮೋದಿ

Published : Apr 28, 2026, 12:26 PM IST
PM Modi Trend

ಸಾರಾಂಶ

ಜಲ್ಮುರಿ, ಬೋಟ್ ಪ್ರಯಾಣ ಬಳಿಕ ಫುಟ್ಬಾಲ್, ಹೊಸ ಟ್ರೆಂಡ್ ಸೆಟ್ ಮಾಡಿದ ಪ್ರಧಾನಿ ಮೋದಿ, ಮೋದಿ ವಯಸ್ಸು 75. ಆದರೆ ಯುವ ಸಮೂಹವನ್ನೂ ನಾಚಿಸುವ ಫಿಟ್ನೆಸ್ ಮಾತ್ರವಲ್ಲ, ಟ್ರೆಂಡಿಂಗ್ ತಕ್ಕಂತೆ ಹೊಂದಿಕೊಳ್ಳುವ ನಾಯಕ ಅನ್ನೋದು ಮತ್ತೆ ಸಾಬೀತು ಮಾಡಿದ್ದಾರೆ.

ನವದೆಹಲಿ (ಏ.28) ಬೆಳ್ಳಂಬೆಳಗ್ಗೆ ಟ್ರ್ಯಾಕ್ ಸೂಟ್‌ನಲ್ಲಿ ಡ್ಯಾಶಿಂಗ್ ಆಗಿ ಕಾಣ್ತಿದ್ದ ಪ್ರಧಾನಿ ಮೋದಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ, ಕಮೆಂಟ್‌ಗಳ ಸುರಿಮಳೆಯೇ ಶುರುವಾಗಿತ್ತು.ಮೊನ್ನೆ ತಾನೆ ಪಶ್ಚಿಮ ಬಂಗಾಳದಲ್ಲಿ ಮಂಡಕ್ಕಿ ತಿಂದು, ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದ ಮೋದಿ, ಇಂದು ಟ್ರ್ಯಾಕ್ ಸೂಟ್‌ನಲ್ಲಿ ಫೀಲ್ಡ್‌ಗೆ ಇಳಿದಿದ್ದರು. ಮೋದಿ ಮಂಡಕ್ಕಿ ತಿಂದ ವಿಡಿಯೋ ಇನ್‌ಸ್ಟಾಗ್ರಾಂ ಒಂದರಲ್ಲೇ 142 ಮಿಲಿಯನ್ ಅಂದ್ರೆ ಸುಮಾರು 14 ಕೋಟಿ 20 ಲಕ್ಷ ವೀವ್ಸ್ ಪಡೆದುಕೊಂಡಿದ್ದರೆ, ಅವರು ಬೋಟ್‌ನಲ್ಲಿ ಕುಳಿತು ಫೋಟೋಗ್ರಾಫಿ ಮಾಡಿದ್ದ ವಿಡಿಯೋ 1.30 ಕೋಟಿ ವೀವ್ಸ್ ಅನ್ನ ಇನ್ಸ್ಟಾಗ್ರಾಂನಲ್ಲಿ ಪಡೆದುಕೊಂಡಿತ್ತು. ಆದ್ರೆ ಇಂದು, ಫುಟ್ ಬಾಲ್ ಆಡಿರೋ ವಿಡಿಯೋ ಹಾಕಿದ ಕೆಲವೇ ಗಂಟೆಗಳಲ್ಲಿ 25 ಲಕ್ಷ ವೀವ್ಸ್ ಪಡೆದುಕೊಂಡು ಮುನ್ನುಗ್ಗುತ್ತಿದೆ.

ನಿನ್ನೆ ಪಶ್ಚಿಮಬಂಗಾಳದಲ್ಲಿ ಎರಡನೇ ಫೇಸ್‌ನ ಪ್ರಚಾರ ಕಾರ್ಯಕ್ಕೆ ಕೊನೆ ದಿನ ಆಗಿದ್ದು, ರೋಡ್ ಶೋದಲ್ಲಿ ಕೂಡ ಮೋದಿ ಪಾಲ್ಗೊಂಡಿದ್ದರು. ಅದಾದ ಬಳಿಕ ಸಿಕ್ಕಿಂಗೆ ಪ್ರಯಾಣ ಬೆಳೆಸಿದ್ದ ಮೋದಿ, ಇಂದು ಗ್ಯಾಂಗಟಕ್‌ನ ಯುವ ತಂಡದೊಂದಿಗೆ ಫುಟ್ ಬಾಲ್ ಆಡಿ ಫಿಟ್ನೆಸ್ ಬಗ್ಗೆ ಸ್ಫೂರ್ತಿ ತುಂಬಿದ್ದಾರೆ. ಯುವಕರಂತೆ ಗೋಲ್ ಸಿಡಿಸಿದ ಬಳಿಕ ಮೋದಿ ಸಹ ಆಟಗಾರರ ಜೊತೆ ಹೈಫೈ ಸೆಲೆಬ್ರೇಷನ್ ಮಾಡಿದ್ದಾರೆ. ಮೋದಿಯ ಈ ಸೆಲೆಬ್ರೆಷನ್, ಮೋದಿ ಫಿಟ್ನೆಸ್‌ಗೆ ಜನರು ಪಿಧಾ ಆಗಿದ್ದಾರೆ.

ಟ್ರೆಂಡ್‌ಗೆ ತಕ್ಕಂತೆ ಹೊಂದಿಕೊಳ್ಳುತ್ತಾರೆ ಮೋದಿ

ಮೋದಿ ಮಾತನಾಡುವಾಗ, ತಮ್ಮ ನಡೆ, ಪ್ರಚಾರ, ಕಾರ್ಯಕ್ರಮ, ಪ್ರವಾಸ ಯಾವುದೇ ಸಂದರ್ಭ ಇರಲಿ, ಪ್ರಸ್ತುಕ ಟ್ರೆಂಡ್‌ಗೆ ಮೋದಿ ಹೊಂದಿಕೊಳ್ಳುತ್ತಾರೆ. ಜೆನ್‌ಜಿ ಸೇರಿದಂತೆ ಯಾವುದೇ ಸಮೂಹದ ಟ್ರೆಂಡ್‌ಗೆ ಮೋದಿ ಒಗ್ಗಿಕೊಳ್ಳುತ್ತಾರೆ. ಇದೇ ಕಾರಣದಿಂದ ಮೋದಿ ಇತರ ರಾಜಕಾರಣಗಳಿಂದ ಭಿನ್ನವಾಗಿ ಕಾಣುತ್ತಾರೆ. ಟ್ರೆಂಡ್‌ಗೆ ತಕ್ಕಂತೆ ಹೊಂದಿಕೊಳ್ಳುವುದು ಮಾತ್ರವಲ್ಲ, ಮೋದಿ ಸದಾ ಟ್ರೆಂಡ್‌ನಲ್ಲಿ ಇರುತ್ತಾರೆ. ಹೊಸ ಟ್ರೆಂಡ್ ಸೆಟ್ ಮಾಡುವುದರಲ್ಲೂ ಮೋದಿ ಮುಂಚೂಣಿ ನಾಯಕ.

ಪಶ್ಚಿಮ ಬಂಗಾಳದ ಪ್ರಚಾರದ ನಡುವೆ ಜಲ್ಮುರಿ ಕಿಕ್

ಪಶ್ಚಿಮ ಬಂಗಾಳದ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ದಿಢೀರ್, ಬಂಗಾಳದ ಜನಪ್ರಿಯ ಜಲ್ಮುರಿ(ಮಂಡಕ್ಕಿ) ಸವಿಯಲು ಅಂಗಡಿಗೆ ತೆರಳಿದ್ದಾರೆ. 10 ರೂಪಾಯಿಗೆ ಜಲ್ಮುರಿ ಖರೀದಿಸಿ ವ್ಯಾಪಾರಿ ಜೊತೆ ಮಾತನಾಡುತ್ತಾ ಸವಿದಿದ್ದಾರೆ. ಇದೇ ವೇಳೆ ಮೋದಿ ನೋಡಲು ನೆರೆದಿದ್ದ ಜನಸಾಮಾನ್ಯರಿಗೆ ಜಲ್ಮುರಿ ನೀಡಿ ಮಾತನಾಡಿದ್ದಾರೆ. ಈ ನಡೆಯನ್ನು ಯಾರೂ ಊಹಿಸಿರಲಲ್ಲ. ದಿಢೀರ್ ಮೋದಿ ಸಣ್ಣ ಅಂಗಡಿಗೆ ತೆರಳಿ ಜಲ್ಮುರಿ ಖರೀದಿ ಮಾಡಿ ಜನರ ಜೊತೆ ಬೆರೆತಿದ್ದರು. ವಿಶ್ವವೇ ಮನ್ನಣೆ ನೀಡುವ ಮಹಾನ್ ನಾಯಕ ಜನಸಾಮಾನ್ಯರೊಂದಿಗೆ ಸಾಮಾನ್ಯನಾಗಿ ಬೆರೆತಿದ್ದರು. ಜನರು ಕೂಡ ಇದನ್ನೆ ನಿರೀಕ್ಷೆ ಮಾಡಿದ್ದರು.

ಬೋಟ್ ಪ್ರಯಾಣ ಮಾಡಿ ಅಚ್ಚರಿ

ಪಶ್ಚಿಮ ಬಂಗಾಳದ ಎರಡನೇ ಹಂತದ ಚುನಾಣಾ ಪ್ರಚಾರದ ನಡುವೆ ದಿಢೀರ್ ಪ್ರಧಾನಿ ನರೇಂದ್ರ ಮೋದಿ ಕೋಲ್ಕತಾದ ಹೂಗ್ಲಿ ನದಿ ಬಳಿ ತೆರಳಿದ್ದರು. ಇದು ಕೂಡ ದಿಢೀರ್ ನಿರ್ಧಾರವಾಗಿತ್ತು. ಬೋಟ್ ಮೂಲಕ ಕ್ಯಾಮರಾ ಹಿಡಿದು ಪ್ರಯಾಣ ಮಾಡಿದ ಮೋದಿ ಫೋಟೋಗಳನ್ನು ಕ್ಲಿಕ್ಕಿಸುತ್ತಾ ಸಾಗಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಬೋಟ್ ಪ್ರಯಾಣ ಮಾಡಿದ್ದಾರೆ. ಬಳಿಕ ಬೋಟ್‌ಮ್ಯಾನ್‌ ತಬ್ಬಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಮೋದಿ ಫಾಲೋ ಮಾಡಿದ ದೀದಿ

ಇದೀಗ ಮೋದಿ ಸಿಕ್ಕಿಂನಲ್ಲಿ ಯುವ ಸಮೂಹ ಜೊತೆ ಫುಟ್ಬಾಲ್ ಆಡಿದ್ದಾರೆ. ಮೋದಿ ಉತ್ಸಾಹಕ್ಕೆ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯ ವಿಡಿಯೋಗಳು, ನಡೆ ಭಾರಿ ಟ್ರೆಂಡ್ ಆಗುತ್ತಿದ್ದಂತೆ ಮಮತಾ ಬ್ಯಾನರ್ಜಿ ದಿಢೀರ್ ತಮ್ಮ ರಣತಂತ್ರ ಬದಲಿಸಿದ್ದರು. ಬೆಂಗಾವಲು ವಾಹನ ಮೂಲಕ ತೆರಳುತ್ತಿದ್ದ ಮಮತಾ ಬ್ಯಾನರ್ಜಿ ದಿಢೀರ್ ತರಕಾರಿ ಮಾರುಕಟ್ಟೆಗೆ ತೆರಳಿ ತರಾಕರಿ ಖರೀದಿಸಿದ್ದರು. ಮೋದಿ ರೀತಿಯ ಹಲವು ನಾಯಕರು ಟ್ರೆಂಡ್ ಸೆಟ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಮೋದಿ ರೀತಿ ಯಶಸ್ಸು ಕಂಡಿಲ್ಲ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಫ್ಲೈಟ್‌ ವಿಳಂಬದಿಂದ ಹಲಸಿನ ಸಸಿ ನಾಶ, ರೈತನಿಗೆ ಭಾರೀ ಪರಿಹಾರ ನೀಡುವಂತೆ ಏರ್‌ಏಷ್ಯಾಗೆ ಸೂಚಿಸಿದ ಕೋರ್ಟ್‌
ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?